Advertisement

ತನಿಖಾಧಿಕಾರಿಗಳಿಗೆ ಪ್ರಶಂಸನಾ ಪತ್ರ ವಿತರಣೆ

03:56 PM Dec 13, 2020 | Suhan S |

ಕಲಬುರಗಿ: ಮಹಾನಗರ ತಲ್ಲಣಗೊಳಿಸಿದ್ದ ಮತ್ತು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದ ಅಶೋಕ ನಗರ ಠಾಣೆ ವ್ಯಾಪ್ತಿಯ ಗೋದುತಾಯಿ  ಕಾಲೋನಿಯಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿದ್ದ ಉದ್ಯಮಿ ಸುನೀಲ ರಂಕಾ ಪ್ರಕರಣ ಭೇದಿಸಿ, ಆರೋಪಿಗಳನ್ನು ಸೆರೆ ಹಿಡಿದಿರುವ ತನಿಖಾ ತಂಡದ ಕಾರ್ಯವೈಖರಿಯನ್ನು ಪೊಲೀಸ್‌ ಆಯುಕ್ತಾಲಯದ ಡಿಸಿಪಿ ಡಿ.ಕಿಶೋರಬಾಬುಶ್ಲಾಘಿಸಿದರು.

Advertisement

ಶನಿವಾರ ನಗರದ ಪೊಲೀಸ್‌ ಆಯುಕ್ತಾಲಯ  ಕಚೇರಿಯಲ್ಲಿ ತನಿಖಾ ತಂಡದದವರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಅಶೋಕ ನಗರ ಇನ್‌ ಸ್ಪೆಕ್ಟರ್‌ ಪಂಡಿತ ಸಗರ ಮತ್ತವರ ವಿಶೇಷ ತಂಡದ ಸಿಬ್ಬಂದಿ ಮಾಹಿತಿ ಕಲೆ ಹಾಕಿ, ಮಾದರಿಯಾಗಿ ಶ್ರಮವಹಿಸಿ ಕೆಲಸ ಮಾಡುವ ಮೂಲಕ ಸವಾಲಿನಪ್ರಕರಣ ಪತ್ತೆ ಮಾಡುವ ಮೂಲಕ ಇಲಾಖೆ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.

ಮನೆ ಎದುರೆ ಗುಂಡಿಟ್ಟು ಕೊಲೆ ನಡೆದ ಬಳಿಕ, ತನಿಖೆ ಶುರು ಮಾಡಿದರೂ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಹಗಲು-ರಾತ್ರಿ ಎನ್ನದೆ ಶ್ರಮ ವಹಿಸಿದ ತನಿಖಾ ತಂಡದವರು ಚಾಣಾಕ್ಷತನದಿಂದ ಕೆಲಸ ಮಾಡುವ ಮೂಲಕ ಪ್ರಕರಣ ಬೇಧಿಸಿದ್ದಾರೆ ಎಂದು ಹೇಳಿದರು.

ಎ ಉಪ ವಿಭಾಗದ ಎಸಿಪಿ ಗಂಗಾಧರ ಬಿ.ಎಂ. ಇನ್‌ಸ್ಪೆಕ್ಟರ್‌ಗಳಾದ ಪಂಡಿತ ಸಗರ, ಸಿದ್ದರಾಮೇಶ್ವರ ಗಡದ, ಕಪಿಲ್‌ದೇವ, ಅರುಣಕುಮಾರ ಮುರಗುಂಡಿ ಮತ್ತು ಸಿಬ್ಬಂದಿ ಗುರುಮೂರ್ತಿ, ಸಂಜುಕುಮಾರ, ಮಲ್ಲಿಕಾರ್ಜುನ, ಶರಣಗೌಡ ಪಾಟೀಲ, ಶಿವಲಿಂಗ, ಚನ್ನು, ಮಲ್ಲಿಕಾರ್ಜುನ, ಶಿವಶರಣಪ್ಪ, ಪ್ರಲ್ಹಾದ ಇತರ ಸಿಬ್ಬಂದಿಗೆ ಪ್ರಶಂಸನಾ ಪತ್ರಗಳನ್ನು ಕಿಶೋರಬಾಬು ವಿತರಿಸಿ, ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next