Advertisement

“ನಿಷ್ಕರ್ಷ’ಕ್ಕೆ ಮತ್ತೆ ಮೆಚ್ಚುಗೆ

09:32 AM Sep 22, 2019 | Lakshmi GovindaRaju |

ಸಾಹಸಸಿಂಹ ವಿಷ್ಣುವರ್ಧನ್‌, ಅನಂತನಾಗ್‌, ಬಿ.ಸಿಪಾಟೀಲ್‌, ಪ್ರಕಾಶ್‌ ರೈ, ರಮೇಶ್‌ ಭಟ್‌, ಸುಮನ್‌ ನಗರ್‌ಕರ್‌, ಅವಿನಾಶ್‌ ಮೊದಲಾದ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ “ನಿಷ್ಕರ್ಷ’ ಚಿತ್ರ ಹೊಸ ತಂತ್ರಜ್ಞಾನದೊಂದಿಗೆ ರೀರಿಲೀಸ್‌ ಆಗಿದೆ.

Advertisement

ಚಿತ್ರವನ್ನು ಇಂದಿನ ತಂತ್ರಜ್ಞಾನದಲ್ಲಿ, ಇಂದಿನ ಆಡಿಯನ್ಸ್‌ಗೆ ಹೊಸರೂಪದಲ್ಲಿ ಒಮ್ಮೆ ತೋರಿಸಬೇಕು ಎಂಬ ಆಲೋಚನೆಯೊಂದಿಗೆ ನಿರ್ಮಾಪಕ ಬಿ.ಸಿ.ಪಾಟೀಲ್‌ ಈ ಚಿತ್ರವನ್ನು ಈಗ ಮರುಬಿಡುಗಡೆ ಮಾಡಿದ್ದಾರೆ. ಚಿತ್ರ ಶುಕ್ರವಾರ ಬಿಡುಗಡೆಯಾಗಿದ್ದು, ಚಿತ್ರ ನೋಡಿದ ಅಭಿಮಾನಿಗಳು ಹೊಸ ತಂತ್ರಜ್ಞಾನದ “ನಿಷ್ಕರ್ಷ’ವನ್ನು ಇಷ್ಟಪಟ್ಟಿದ್ದಾರೆ.

ಚಿತ್ರಕ್ಕೆ ಡಿಟಿಎಸ್‌, ಡಿಐ ಮಾಡಿಸಲಾಗಿದ್ದು, ಪ್ರೇಕ್ಷಕರು ಖುಷಿಪಡುತ್ತಿದ್ದಾರೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿ, “ಪ್ರೇಕ್ಷಕರು ಮತ್ತೂಮ್ಮೆ ನಿಷ್ಕರ್ಷವನ್ನು ಇಷ್ಟಪಡುತ್ತಿದ್ದಾರೆ. ಅಂದು ನನ್ನನ್ನು ಸೇರಿದಂತೆ ಚಿತ್ರದ ನಿರ್ಮಾಪಕರು, ಕಲಾವಿದರು, ತಂತ್ರಜ್ಞರ ವೃತ್ತಿ ಜೀವನದಲ್ಲಿ “ನಿಷ್ಕರ್ಷ’ ದೊಡ್ಡ ಬ್ರೇಕ್‌ ನೀಡಿತ್ತು. ಈಗಲೂ ಅನೇಕರು ಮಾತನಾಡುವಾಗ “ನಿಷ್ಕರ್ಷ’ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಅಷ್ಟೊಂದು ಜನಪ್ರಿಯವಾಗಿದ್ದ ಚಿತ್ರವನ್ನು ಮತ್ತೆ ಜನರ ಮುಂದೆ ತಂದಿದ್ದಕ್ಕೆ ಖುಷಿಯಾಗುತ್ತಿದೆ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next