ಬೆಂಗಳೂರು: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿಗೆ ನಾಮನಿರ್ದೇಶಿತ ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರೊ.ಟಿ.ವಿ ರಾಜು, ವಿದೇಯ ಬೆಳಗೋಡೆ ಶ್ರೀಕಂಠ, ಡಾ.ಎಂ.ವಿ.ಆಶಾ, ಗೋಪಿನಾಥ್, ಡಾ.ಗೋವಿಂದರಾಜು, ಪ್ರೇಮ್ ಸೋಹನ್‌ಲಾಲ್, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ಕಿರಣ್‌ಕುಮಾರ್, ಎಚ್.ಎನ್.ಹರಿಪ್ರಸಾದ್, ಜ್ಯೋತಿ ವಿಜಯ್, ಟಿ.ಎಚ್.ಶ್ರೀನಿವಾಸಯ್ಯ, ಆರ್.ಕೆ.ಚಂದ್ರನಾಥ್, ಥಾಮಸ್ ನೀಲಿಯಾರ್, ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ರಾಜಾರೆಡ್ಡಿ, ಎಂ.ಎನ್.ಅಭಿಷೇಕ್, ಎನ್.ಎಸ್.ಅಶ್ವಿನಿ ಶಂಕರ್, ಸಂತೋಷ್ ರೆಡ್ಡಿ, ದೇವರಾಜ್, ಜೈಜೋ ಜೋಸೆಫ್ ಅವರನ್ನು ನೇಮಿಸಲಾಗಿದೆ.
ಮೈಸೂರು ವಿಶ್ವವಿದ್ಯಾಲಯಕ್ಕೆ ಪ್ರದೀಪ್ ಕುಮಾರ್ ದೀಕ್ಷಿತ್, ಪ್ರೊ.ದೊಡ್ಡಾಚಾರಿ, ಸಿಂಧು ಸುರೇಶ್, ಡಾ.ಈ.ಸಿ ನಿಂಗರಾಜಗೌಡ, ಡಾ.ದಾಮೋದರ್, ಡಾ.ಸೈಯ್ಯದ್ ಕಾಝಾ ಮೊಹಿದ್ದೀನ್, ಮಂಗಳೂರು ವಿವಿಗೆ ವಿವೇಕಾನಂದ ಪನಿಯಾಳ, ರವೀಂದ್ರನಾಥ ರೈ, ಡಾ.ಪಾರ್ವತಿ ಅಪ್ಪಯ್ಯ, ಕೆ.ರಮೇಶ್, ಡಾ.ಎಂ.ಎಸ್.ತಳವಾರ, ಮೋಹನ್ ಪಡಿವಾಳ್, ತುಮಕೂರು ವಿವಿಗೆ ಸುನೀಲ್ ಕುಮಾರ್, ಪ್ರಸನ್ನ, ಭಾಗ್ಯಲಕ್ಷ್ಮೀ ಹಿರೇಂದ್ರ ಶಾ, ಎಂ.ಎಸ್. ಭವ್ಯ, ರಾಜು, ಟಿ.ಡಿ.ವಿನಯ್, ದಾವಣಗೆರೆ ವಿವಿಗೆ ಡಾ.ಎಸ್.ಶ್ರೀಧರ್, ಪವನ್,
ವಿಜಯಲಕ್ಷ್ಮೀ ಹಿರೇಮಠ, ಆಶಿಷ್ ರೆಡ್ಡಿ, ಡಾ.ಜಿ.ಪಿ.ರಾಮನಾಥ್, ಟಿ.ಇನಾಯತ್ ಉಲ್ಲಾ, ಧಾರವಾಡದ ಕರ್ನಾಟಕ ವಿವಿಗೆ ಸುಧೀಂದ್ರ ದೇಶಪಾಂಡೆ, ರವಿಕುಮಾರ್ ಬಿ.ಮಾಳಿಗೇರ್, ಸ್ನೇಹಾ ಜೋಷಿ, ಪ್ರಕಾಶ್ ರಾಯ್ಕರ್, ಜಯಪ್ರಕಾಶ್ ಶಿವಾನಂದಪ್ಪ ಬಾದಾಮಿ, ಡಾ.ಶಾಂತನಗೌಡ ಸಿ.ಜಕ್ಕನಗೌಡರ, ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಗೆ ಹನುಮಂತಪ್ಪ ಎಸ್.ಶಿಗ್ಗಾಂವ್, ಡಾ.ಕೆ.ಶೇಷುಮೂರ್ತಿ, ಶೋಭಾ ಹೂಗಾರ್, ಡಾ.ಆನಂದ್ ಹೊಸೂರ್, ಅಶೋಕ್ ಕೆ.ಕಬ್ಬೇರ್, ರಮೇಶ್ ಸವದಿಯವರನ್ನು ಆಯ್ಕೆ ಮಾಡಲಾಗಿದೆ.
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಗೆ ಪ್ರೊ.ವೆಂಕಟೇಶ್, ನಿವೇದಿತಾ, ಡಾ.ಲಕ್ಷ್ಮೀ ತಲ್ಲೂರ್, ಸಂಗಮೇಶ್ ಪೂಜಾರಿ, ಶಿಲ್ಪಶ್ರೀ, ಡಾ.ಮೊಹ್ಮದ್ ಅಹೆತಸಮ್, ಗುಲ್ಬರ್ಗ ವಿವಿಗೆ ಡಾ.ಶರಣಬಸವ ಪಾಟೀಲ್ ಜೋಳದ ಹೆಡಗಿ, ಡಾ.ಬಸವರಾಜ ಯಾದವಾಡ, ವೀಣಾ ಕಟ್ಟಿ, ಪ್ರೊ.ಡಿ.ಬಿ.ಕಂಬಾರ್,ಡಾ.ಉಪೇಂದ್ರ ಕುಮಾರ್ ಸುಬೇದಾರ್, ಮೊಹ್ಮದ್ ಅಬ್ದುಲ್ ಮುಜೀಬ್, ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಮಲ್ಲಿಕಾರ್ಜುನ್ ಮರ್ಚೇಡ್, ನರಸಿಂಹ ರಾಯಚೂರು, ಎಚ್.ಪದ್ಮಾವಿಠಲ್, ಡಾ.ಅಜಯ್, ಕೃಷ್ಣದೇವರಾಯ, ದಾದಾ ಕಲಂದರ್, ಶಿವಮೊಗ್ಗ ಕುವೆಂಪು ವಿವಿಗೆ ಎಚ್. ಬಿ.ರಮೇಶ್‌ಬಾಬು, ಬಳ್ಳಕೆರೆ ಸಂತೋಷ್, ಕಿರಣ್ ರವೀಂದ್ರ ದೇಸಾಯಿ, ಜಿ.ಧರ್ಮ ಪ್ರಸಾದ್, ರಾಮಲಿಂಗಪ್ಪ, ಎಸ್.ಆರ್. ನಾಗರಾಜ್ ಅವರನ್ನು ನೇಮಿಸಲಾಗಿದೆ.
ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಗೆ ಸುಜಾತ ದೇವಸೂರ, ಎಸ್.ಸುನೀತಾ, ವೀಣಾಮೂರ್ತಿ, ವಿದ್ಯಾ ಆಚಾರ್ಯ, ಎಸ್.ವೆಂಕಟೇಶ್ ಕೊಟ್ಟೂರು, ಸೈಯ್ಯದ್ ಸಲ್ಲಾಉದ್ದೀನ್ ಪಾಷಾ, ಕರ್ನಾಟಕ ಜಾನಪದ ವಿವಿಗೆ ವಸಂತ್‌ಕುಮಾರ್, ಹಾಸನ ರಘು, ಡಾ.ಸುನಂದ ಆರ್. ಕಳಕನ್ನವರ್, ಕೆ.ಎನ್.ಪಾಟೀಲ್, ಕೆ.ವೆಂಕಟೇಶ್, ಹಿದಾಯತ್ ಅಹಮ್ಮದ್‌ರನ್ನು ನೇಮಿಸಲಾಗಿದೆ.
ಸಿಂಡಿಕೇಟ್ ಸದಸ್ಯರ ನೇಮಕದಲ್ಲಿ ಯಾವುದೇ ರೀತಿಯಲ್ಲೂ ಅನರ್ಹರಿಗೆ ಅವಕಾಶ ನೀಡಿಲ್ಲ ಮತ್ತು ರಾಜಕೀಯ ಪ್ರೇರಿತವಾಗಿಯೂ ಮಾಡಿಲ್ಲ. ಯುಜಿಸಿ ನಿಯಮದಂತೆ ಎಲ್ಲ ಮಾನದಂಡಗಳನ್ನು ಪರಿಶೀಲಿಸಿ, ನೇಮಕ ಮಾಡಿದ್ದೇವೆ. ಸುಮಾರು 400ರಿಂದ 450 ಅರ್ಜಿಗಳು ಬಂದಿದ್ದವು. ಅವುಗಳಲ್ಲಿ ಅರ್ಹರಿಗೆ ಅವಕಾಶ ನೀಡಿದ್ದೇವೆ.
-ಡಾ.ಸಿ.ಎನ್.ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ