Advertisement
ದೇಶಾದ್ಯಂತ ಕೆಳಹಂತದ ನ್ಯಾಯಾಲಯಗಳಲ್ಲಿ ಸುಮಾರು 4,452 ನ್ಯಾಯಾಧೀಶರ ಸ್ಥಾನ ಖಾಲಿ ಇದ್ದು, ಇವುಗಳ ನೇಮಕ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಹೈಕೋರ್ಟ್‌ಗಳು ಹೊಂದಿರುವ ಈ ನೇಮಕ ಅಧಿಕಾರವನ್ನು ಕೇಂದ್ರ ಸರಕಾರ, ಅಖೀಲ ಭಾರತ ನ್ಯಾಯಾಂಗ ನೇಮಕ ಆಯೋಗ ರಚಿಸುವ ಮೂಲಕ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಮುಂದಾಗಿ ದೇಶದ 24 ಹೈಕೋರ್ಟ್‌ಗಳಿಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಈ ಪ್ರಸ್ತಾವಕ್ಕೆ ಕರ್ನಾಟಕ ಸಹಿತ 9 ಹೈಕೋರ್ಟ್‌ಗಳು ವಿರೋಧ ವ್ಯಕ್ತಪಡಿಸಿದ್ದು, ನೇಮಕಾಧಿಕಾರ ತಮಗೇ ಇರಲಿ ಎಂದು ಖಂಡಾತುಂಡವಾಗಿ ಹೇಳಿವೆ.
Related Articles
Advertisement
2015ರ ಡಿ. 31ರ ಮಾಹಿತಿಯಂತೆ ದೇಶಾದ್ಯಂತ 4,452 ನ್ಯಾಯಾಧೀಶರ ಹು¨ªೆ ಖಾಲಿ ಇವೆ. 20,502 ಹು¨ªೆಗಳಿದ್ದರೆ, ಸದ್ಯ ಭರ್ತಿಯಾಗಿರುವುದು 16,050 ಮಾತ್ರ. ಆದರೆ ಬಹುತೇಕ ಹೈಕೋರ್ಟ್‌ಗಳು ಆಡಳಿತಾತ್ಮಕ ವಿಚಾರ ತಮಗೇ ಇರಲಿ ಎಂದಿವೆ. ಸದ್ಯ ಹಲವಾರು ರಾಜ್ಯ ಹೈಕೋರ್ಟ್ ಗಳು ನ್ಯಾಯಾಧೀಶರ ನೇಮಕಕ್ಕೆ ಪರೀಕ್ಷೆ ನಡೆಸುವ ವ್ಯವಸ್ಥೆ ಹೊಂದಿವೆ.
ಎನೆjಎಸಿ (ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ) ರದ್ದು ಮಾಡಿದ ಬಳಿಕ ಕೊಲಿಜಿಯಂನಲ್ಲಿ ಕೆಲವು ಬದಲಾವಣೆಗಳನ್ನೊಳಗೊಂಡಂತೆ ಪ್ರಸ್ತಾವನೆ ನೀಡುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆ ಅನ್ವಯ ಕೇಂದ್ರ ಸರಕಾರ ನೀಡಿದ್ದ ಹೊಸ ಮತ್ತು ಅಂತಿಮ ಪ್ರಸ್ತಾವನೆಯನ್ನೂ ಐವರಿದ್ದ ಕೊಲಿಜಿಯಂ ಸಮಿತಿ ತಿರಸ್ಕರಿಸಿದೆ. ಅಲ್ಲದೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳ ನ್ಯಾಯಮೂರ್ತಿಗಳ ನೇಮಕವನ್ನು ನಾವೇ ಮಾಡಿಕೊಳ್ಳುತ್ತೇವೆ ಎಂದಿದೆ. ಯಾವುದೇ ಕಾರಣಕ್ಕೂ ವ್ಯವಸ್ಥೆಯೊಂದರ ಕೆಳಗೆ ನ್ಯಾಯಾಂಗ ವ್ಯವಸ್ಥೆ ಸಿಲುಕುವುದು ಬೇಡ. ಇದು ಎಂದಿಗೂ ಸ್ವತಂತ್ರವಾಗಿಯೇ ಇರಬೇಕು ಎಂದು ಕೊಲಿಜಿಯಂ ಅಭಿಪ್ರಾಯ ಪಟ್ಟಿದ್ದು, ಕೇಂದ್ರ ಸರಕಾರದ ಮನವೊಲಿಕೆಯ ಕಡೇ ಪ್ರಯತ್ನವನ್ನೂ ಅದು ತಳ್ಳಿಹಾಕಿದೆ.
ಮಾರ್ಚ್‌ನಲ್ಲಿ ಕೇಂದ್ರ ಸರಕಾರಕ್ಕೆ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿ ಪ್ರಕ್ರಿಯೆಯ ಒಪ್ಪಂದ (ಮೆಮೊರಂಡಮ್ ಆಫ್ ಪೊ›ಸೀಜರ್)ನ ಅಂತಿಮ ಕರಡನ್ನು ಕಳುಹಿಸಿದ್ದು, ಇದರಲ್ಲಿ ತಮ್ಮ ಹಿಂದಿನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಲ್ಲ ಎಂಬುದನ್ನು ಖಚಿತವಾಗಿ ಹೇಳಿತ್ತು.
ಆದರೆ ಜುಲೈನಲ್ಲಿ ಕೊಲ್ಕತ್ತಾ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರ ಕುರಿತಂತೆ ತೀರ್ಪು ನೀಡುವಾಗ, ನ್ಯಾಯಮೂರ್ತಿಗಳ ನೇಮಕಕ್ಕಾಗಿ ಸೂಕ್ತ ವ್ಯವಸ್ಥೆ ಇರಬೇಕು ಎಂದು ಸಂವಿಧಾನ ಪೀಠದಲ್ಲಿದ್ದ ನ್ಯಾ| ಜೆ. ಚಲಮೇಶ್ವರ ಮತ್ತು ನ್ಯಾ| ರಂಜನ್ ಗೊಗೋಯ್ ಪ್ರತ್ಯೇಕವಾಗಿಯೇ ಹೇಳಿದ್ದರು. ಈ ಬಳಿಕ ಕೇಂದ್ರ ಸರಕಾರ ಮಾರ್ಚ್‌ನಲ್ಲಿ ನೀಡಲಾಗಿದ್ದ ಅಂತಿಮ ಕರಡಿನಲ್ಲಿ ಮತ್ತೆ ಬದಲಾವಣೆ ತರುವ ಬಗ್ಗೆ ಮರುಪರಿಶೀಲನೆ ಮಾಡುವಂತೆ ಮನವಿ ಸಲ್ಲಿಸಿತ್ತು.
ಇತ್ತೀಚೆಗಷ್ಟೇ ಸಭೆ ಸೇರಿದ್ದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಕೊಲಿಜಿಯಂ ಸಮಿತಿ ಕೇಂದ್ರದ ಮರುಮನವಿಯನ್ನು ತಿರಸ್ಕರಿಸಿದೆ. ವಿಶೇಷವೆಂದರೆ ಈ ಸಮಿತಿಯಲ್ಲಿ ನ್ಯಾ| ಚಲಮೇಶ್ವರ ಮತ್ತು ನ್ಯಾ| ರಂಜನ್ ಗೊಗೋಯ್ ಕೂಡ ಇದ್ದರು. ಅಲ್ಲದೆ ನ್ಯಾ| ಜೆ. ಚಲಮೇಶ್ವರ್ ಅವರು ಎನ್‌ಜೆಎಸಿ ವಿರುದ್ಧ ನೀಡಿದ್ದ ತೀರ್ಪಿನಲ್ಲೂ ಪ್ರತ್ಯೇಕ ವ್ಯವಸ್ಥೆ ಇರಬೇಕು ಎಂಬ ಅಭಿಪ್ರಾಯಪಟ್ಟಿದ್ದರು. ಈ ಮೂಲಕ ಕೊಲಿಜಿಯಂ ವಿರುದ್ಧವೇ ಪ್ರತ್ಯೇಕ ತೀರ್ಪು ನೀಡಿದ್ದರು. ಇದಷ್ಟೇ ಅಲ್ಲ, ಇದೇ ತಿಂಗಳ 27ಕ್ಕೆ ಸಿಜೆಐ ಜೆ.ಎಸ್. ಖೆಹರ್ ಅವರು ನಿವೃತ್ತಿಯಾಗಲಿದ್ದು, ಇದರ ಒಳಗೆ ಕೊಲಿಜಿಯಂ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಂಬಂಧ ಪ್ರಧಾನಮಂತ್ರಿಗಳ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಸುಪ್ರೀಂ ಕೋರ್ಟ್ ಜತೆ ಮಧ್ಯಸ್ಥಿಕೆಗೆ ಮುಂದಾಗಿದ್ದರು. ಆದರೆ ಈಗ ಈ ಪ್ರಯತ್ನಕ್ಕೂ ಹಿನ್ನಡೆಯಾಗಿದೆ.