Advertisement

ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ: ಸಚಿವ ದಿನೇಶ್‌ ಗುಂಡೂರಾವ್‌

12:06 AM Feb 16, 2024 | Team Udayavani |

ಬೆಂಗಳೂರು: ಮುಂದಿನ ತಿಂಗಳಲ್ಲಿ 337 ತಜ್ಞ ವೈದ್ಯರು, 250 ಸಾಮಾನ್ಯ ಕರ್ತವ್ಯ ವೈದ್ಯಾಧಿ ಕಾರಿಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿ ಕೊಳ್ಳಲು ಅನುಮತಿ ನೀಡಿದ್ದು, 800 ಫಾರ್ಮಾಸಿಸ್ಟ್‌ ಹಾಗೂ ಲ್ಯಾಬ್‌ ಟೆಕ್ನೀಷಿಯನ್‌ಗಳನ್ನೂ ನೇಮಕ ಮಾಡಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಭರವಸೆ ನೀಡಿದರು.

Advertisement

ಕಾಂಗ್ರೆಸ್‌ನ ಬೇಳೂರು ಗೋಪಾಲಕೃಷ್ಣ ಹಾಗೂ ಬಿಜೆಪಿಯ ಡಾ| ಭರತ್‌ ಶೆಟ್ಟಿ ಪ್ರಶ್ನೆಗಳಿಗೆ ಉತ್ತರಿ ಸಿದ ಅವರು, ಇಲಾಖೆಯಲ್ಲಿ ಖಾಲಿ ಇರುವ 337 ತಜ್ಞ ವೈದ್ಯರು, 250 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಜ.17ರಂದು ಅನುಮತಿ ಕೊಡಲಾಗಿದೆ. ಮುಂದಿನ 1 ತಿಂಗಳಲ್ಲಿ ನೇಮಕಾತಿ ಆಗಲಿದೆ. 800 ಫಾರ್ಮಾಸಿಸ್ಟ್‌, ಟೆಕ್ನಿಶಿಯನ್‌ ಹುದ್ದೆಯನ್ನೂ ತುಂಬಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next