ಬೆಂಗಳೂರು: ಕೋವಿಡ್ 19 ಸೋಂಕು ಕಾರ್ಯಾಚರಣೆ ವೇಳೆ ನಗರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 6 ಐಎಎಸ್ ಹಾಗೂ 8 ಕೆಎಎಸ್ ಅಧಿಕಾರಿಗಳನ್ನು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾಗಿ ನೇಮಿಸಿ ಸರ್ಕಾರ ಶನಿವಾರ ಆದೇಶಿಸಿದೆ.
ಬ್ಯಾಟರಾಯನಪುರ, ಪಾದರಾಯನಪುರದಲ್ಲಿ ಇತ್ತೀಚಿನ ದಿನಗಳಲ್ಲಿ ಆಶಾ ಕಾರ್ಯಕರ್ತರು, ಬಿಬಿ ಎಂಪಿ ಹಾಗೂ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ಕಾರ್ಯ ನಿರ್ವಾಹಣಾ ದಂಡಾಧಿಕಾರಿಗಳನ್ನು ನೇಮಿಸಿದೆ.
ಬಿಬಿಎಂಪಿಗೆ ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಅವರು ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿ ಆಗಿರಲಿದ್ದಾರೆ. ಇನ್ನು ಪೂರ್ವ ಮತ್ತು ಯಲಹಂಕ ವಲಯಕ್ಕೆ ವಿಶೇಷ ಆಯುಕ್ತ ರವಿಕುಮಾರ್ ಸುರಪುರ, ದಕ್ಷಿಣ ಮತ್ತು ದಾಸರಹಳ್ಳಿ ವಲಯಕ್ಕೆ ವಿಶೇಷ ಆಯುಕ್ತ ಡಾ.ಲೋಕೇಶ್, ಆರ್.ಆರ್.ನಗರ ಹಾಗೂ ಬೊಮ್ಮನಹಳ್ಳಿಗೆ ವಿಶೇಷ ಆಯುಕ್ತ ವಿ.ಅನ್ಪುಕುಮಾರ್, ಪಶ್ಚಿಮ ವಲಯಕ್ಕೆ ವಿಶೇಷ ಆಯುಕ್ತ ಡಾ. ಬಸವರಾಜ್, ಮಹದೇವಪುರಕ್ಕೆ ವಿಶೇಷ ಆಯುಕ್ತ ಡಿ.ರಂದೀಪ್ ಅವರನ್ನು ವಿಶೇಷ ಕಾರ್ಯ ಪಡೆಯ ದಂಡಾಧಿಕಾರಿಯಾಗಿ ನೇಮಿಸಲಾಗಿದೆ.
ಇನ್ನು 20 ಕಂಟೈನ್ಮೆಂಟ್ ವಾರ್ಡ್ ಗಳಿಗೆ ಎಂಟು ಹಿರಿಯ ಕೆಎಎಸ್ ಅಧಿಕಾರಿಗಳನ್ನು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ನೇಮಿಸಲಾಗಿದೆ. ಬೆಸ್ಕಾಂನ ಡಾ. ಮಹೇಶ್ ಅವರನ್ನು ರಾಧಾಕೃಷ್ಣದೇವಸ್ಥಾನ ವಾರ್ಡ್, ಮಾರುತಿ ಸೇವಾ ನಗರ, ರಾಮಸ್ವಾಮಿ ಪಾಳ್ಯ ಮತ್ತು ಪುಲಕೇಶಿನಗರ, ಕೆಎಐಡಿಬಿಯ ನಾಗಹನುಮಯ್ಯ ಅವರನ್ನು ಗುರಪ್ಪನಪಾಳ್ಯ, ಜೆ.ಪಿ.ನಗರ, ಶಾಕಾಂಬರಿ ನಗರ, ತೋಟಗಾರಿಕೆ ಇಲಾಖೆಯ ಚಂದ್ರಶೇಖರ್ ಅವರನ್ನು ಕರಿಸಂದ್ರ, ಸುಧಾಮನಗರ, ವಕ್ಫ್ ಬೋರ್ಡ್‌ನ ಇಸ್ಲಾಉದ್ದೀನ್‌ಗದ್ಯಾಲ್ ಅವರನ್ನು ಬಾಪೂಜಿ ನಗರ, ಹೊಸಹಳ್ಳಿ, ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಸಂಗಪ್ಪ ಅವರನ್ನು ಆರ್.ಆರ್.ನಗರ, ಕೆ ಐಎಡಿಬಿಯ ಬಾಳಪ್ಪ ಹಂದಿಗೂಡ್ ರನ್ನು ಬೇಗೂರು, ಧಾರ್ಮಿಕ ದತ್ತಿ ಇಲಾಖೆಯ ಅಭಿಜಿನ್ ಅವರನ್ನು ಪಾದರಾಯನಪುರ, ಚೆಲವಾದಿಪಾಳ್ಯ ಹಾಗೂ ಕೆಎಸ್‌ಟಿಡಿಸಿಯ ಎಸ್.ನಾಗರಾಜ್ ಅವರನ್ನು ಹೂಡಿ, ಹೊರಮಾವು ವಾರ್ಡ್‌ಗಳಿಗೆ ನೇಮಿಸಲಾಗಿದೆ