Advertisement

10 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಶೀಘ್ರ

10:44 AM May 16, 2017 | Team Udayavani |

ರಾಯಚೂರು: ಪ್ರಾಥಮಿಕ ಶಾಲೆಗಳಲ್ಲಿಶಿಕ್ಷಣದ ಗುಣಮಟ್ಟ ಸುಧಾರಣೆ ಹಿನ್ನೆಲೆಯಲ್ಲಿ 10 ಸಾವಿರ ಶಿಕ್ಷಕರ ಭರ್ತಿಗೆ
ಮುಂದಾಗಿದ್ದು, ಹೈ-ಕ ಭಾಗದಲ್ಲಿ 4,760 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇs… ತಿಳಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ 14,729 ಶಿಕ್ಷಕರ ಹುದ್ದೆ ಭರ್ತಿಗೆ ಬೇಡಿಕೆಯಿತ್ತು. ಈ ವರ್ಷ ಯಾವುದೇ ವಿಳಂಬ ಮಾಡದೆ ಶಿಕ್ಷಕರ ನೇಮಕಾತಿ ತಿದ್ದುಪಡಿಗೆ ಮುಂದಾಗಿದ್ದು, ವಾರದೊಳಗೆ ನೇಮಕಾತಿ ಪ್ರಕ್ರಿಯೆ ಶುರುವಾಗಲಿದೆ ಎಂದರು. ವಿಜ್ಞಾನ ಮತ್ತು ಗಣಿತ ಶಿಕ್ಷಕರ ನೇಮಕಕ್ಕೆ ಒತ್ತು ನೀಡಲಾಗುವುದು. ರಾಜ್ಯದಲ್ಲಿ ಏಕರೂಪದ ಶಿಕ್ಷಣ ನೀತಿ ಜಾರಿಯಾಗಬೇಕು ಎನ್ನುವ
ಕಾರಣಕ್ಕೆ ಫಲಿತಾಂಶಗಳ ಶ್ರೇಣಿ ಪದ್ಧತಿ ಕೈಬಿಡಲು ನಿರ್ಧರಿಸಲಾಗಿದೆ. ಆರನೇ ತರಗತಿಯಿಂದಲೇ ವಿಷಯವಾರು ಶಿಕ್ಷಕರ ನೇಮಕಕ್ಕೆ ಚಿಂತನೆ ನಡೆಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಶಿಕ್ಷಕರ ವರ್ಗಾವಣೆ ನೀತಿ ಜಾರಿಗೊಳಿಸಿದ್ದು, ಕನಿಷ್ಠ 5 ವರ್ಷ ಕಡ್ಡಾಯ ಸೇವೆ ನಿಗದಿ ಮಾಡಲಾಗಿದೆ ಎಂದರು. 

Advertisement

2.18 ಲಕÒ ಆರ್‌ಟಿಇ ಅರ್ಜಿ
ರಾಜ್ಯಾದ್ಯಂತ ಆರ್‌ಟಿಇ ಅಡಿ 2.18 ಲಕ್ಷ ಅರ್ಜಿ ಬಂದಿದ್ದು, 8,000 ಅರ್ಜಿ ತಿರಸ್ಕೃತಗೊಂಡಿವೆ. ಮೊದಲನೇ ಹಂತದ ಲಾಟರಿ ಪ್ರಕ್ರಿಯೆ ಮುಗಿದಿದೆ. ಎರಡನೇ ಹಂತದ ಪ್ರಕ್ರಿಯೆ ಶುರುವಾಗಬೇಕಿದೆ. 46 ಸಿಬಿಎಸ್‌ಸಿ ಶಾಲೆಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಅವಧಿಧಿ ವಿಸ್ತರಣೆ ಮಾಡಲಾಯಿತು. ಶುಲ್ಕ ನಿಯಂತ್ರಣ ಕಾಯ್ದೆ
ಜಾರಿಗೊಳಿಸಿದ್ದು, ನಿಯಮಬಾಹಿರವಾಗಿ ನಡೆದುಕೊಂಡಲ್ಲಿ ಖಾಸಗಿ ಶಾಲೆಗಳಿಗೆ 10 ಲಕ್ಷದವರೆಗೂ ದಂಡ ವಿಧಿಸಲಾಗುವುದು ಎಂದು ತನ್ವೀರ್‌ ಸೇs… ಹೇಳಿದರು.

ಶೂನ್ಯ ಫ‌ಲಿತಾಂಶದ ಶಾಲೆಗಳಿಗೆ ನೋಟಿಸ್‌: ಶೂನ್ಯ ಫಲಿತಾಂಶ ಪಡೆದ ಶಾಲೆಗಳಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಅಲ್ಲಿನ ಬೋಧಕ ವೃಂದದ ವಿದ್ಯಾರ್ಹತೆ ಪರಿಶೀಲನೆಗೆ ತಂಡ ರಚಿಸಲಾಗಿದ್ದು, ಮುಂದಿನ ವರ್ಷಕ್ಕೆ ಪ್ರವೇಶ ಪ್ರಕ್ರಿಯೆಗೆ ಅವಕಾಶ ನೀಡದಂತೆ ಸೂಚಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next