Advertisement
ಗುರುವಾರ ಹೆತ್ತೂರಿನಲ್ಲಿ ಕಸಾಪ ಹೆತ್ತೂರು ಹೋಬಳಿ ಘಟಕ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು. ರಾಜ್ಯದ ಬಹುತೇಕ ಉನ್ನತ ಸರ್ಕಾರಿ ಹುದ್ದೆಗಳಿಗೆ ಅನ್ಯ ರಾಜ್ಯದ ಅಧಿಕಾರಿ ಗಳನ್ನು ನೇಮಕ ಮಾಡಿಕೊಂಡಿದ್ದೇವೆ. ಆದರೆ, ಕರ್ನಾಟಕದಲ್ಲೇ ಇರುವ ಸಾಕಷ್ಟು ಜನರು ಭಾರತೀಯ ಲೋಕಸೇವಾದಲ್ಲಿ ಪರೀಕ್ಷೆ ಎದುರಿಸಿ ಉತ್ತೀರ್ಣರಾಗಿದ್ದಾರೆ. ಅಂತವರನ್ನು ಗುರುತಿಸಿ ಸರ್ಕಾರ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕೆಂದರು.
Related Articles
Advertisement
ಕನ್ನಡ ಭಾಷೆಗೆ ಧಕ್ಕೆ: ಇವತ್ತಿಗೂ ಜಾಗತಿಕ ಮಟ್ಟದಲ್ಲಿ ಕನ್ನಡ ಭಾಷೆಯಷ್ಟು ಬೇರೆ ಯಾವ ಭಾಷೆ ಕೂಡ ಕ್ರಿಯಾಶೀಲವಾಗಿಲ್ಲ. ಕನ್ನಡ ಭಾಷೆ ನಲುಗುತ್ತಿಲ್ಲ, ಭಾಷೆಗೆ ಧಕ್ಕೆಯಾಗುತ್ತಿದೆ ಎಂಬುವುದು ನಮ್ಮ ಆತಂಕವಷ್ಟೆ ಎಂದರು. ಗ್ರಾಮೀಣ ಪ್ರದೇಶದ ಭಾಷೆಗೆ ಹೆಚ್ಚು ಸತ್ವವಿದೆ. ಜಾನಪದಿಂದ ಕನ್ನಡ ಭಾಷೆ ಉಳಿದಿದೆ. ಭಾಷೆಯನ್ನು ನಾವುಗಳು ಬಳಸಬೇಕು ಇಲ್ಲದಿದ್ದರೆ ಅಕ್ಕಪಕ್ಕದವರು ಇಲ್ಲಿ ಬಂದು ನೆಲೆ ಕಾಣಲು ಬರುತ್ತಾರೆ. ಕನ್ನಡಿಗರ ಮಾತೃಭಾಷೆ ಕನ್ನಡ. ಕನ್ನಡವೇಮಕ್ಕಳ ಮಾತೃ ಭಾಷೆಯಾಗಿದ್ದು, ಮಕ್ಕಳಿಗೆ ಅವರ ಪೋಷಕರು ಬಾಲ್ಯದಿಂದಲೇ ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಬೇಕು. ಅನ್ಯಭಾಷೆಗಳ ಆಕರ್ಷಣೆಗೆ ಒಳಗಾಗ ಬಾರದು ಎಂದು ಕಿವಿ ಮಾತು ಹೇಳಿದರು. ಹೋರಾಟಗಾರರ ಸ್ಮರಣೆ ನಮ್ಮ ಕರ್ತವ್ಯ: ಉಪ ಅರಕ್ಷಕ ಅಧಿಕ್ಷಕರಾದ ಮಿಥುನ್ ಮಾತನಾಡಿ, ಸರ್ಕಾರ ಕೂಡ ಅಡಳಿತ ಭಾಷೆಯಾಗಿ ಕನ್ನಡ ಬಳಕೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಉನ್ನತ ವ್ಯಾಸಂಗದಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶ ನೀಡುತ್ತಿರುವುದು ಸಂತಸದ ವಿಚಾರವಾಗಿದೆ. ಕನ್ನಡ ನಾಡು, ನುಡಿಗೆ ಹೋರಾಟ ಮಾಡಿದವರನ್ನು ನೆನಪಿಸಿಕೊಳ್ಳುವುದು ನಮ್ಮ ಅದ್ಯ ಕರ್ತವ್ಯ ಎಂದರು. ಶಾಲಾ ಮಕ್ಕಳಿಗೆ ಕನ್ನಡದ ಕವಿಗಳ ಪರಿಚಯವಾಗಬೇಕು. ಅವರುಗಳು ಬರೆದ ಪುಸ್ತಕಗಳು ಸುಲಭವಾಗಿ ಸಿಗುವಂತಾಗಬೇಕು ಎಂದು ಹೇಳಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಬೇಲೂರು, ಹಳೆಬೀಡು, ಬಿಪಿನ್ ರಾವತ್ ಪ್ರಥಮ ದರ್ಜೆ ಕಾಲೇಜು, ಕರ್ನಾಟಕ ಪಬ್ಲಿಕ್ ಶಾಲೆ, ನಟ ಪುನೀತ್ ರಾಜ್ ಕುಮಾರ್ ಅವರ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಿತು. ಈ ವೇಳೆ ಏಷ್ಯಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಚಾಲಕ ಎಚ್.ಬಿ ಮದನ್ ಗೌಡ, ನಿವೃತ್ತ ಆಕಾಶ ವಾಣಿ ಕಾರ್ಯಕ್ರಮ ಸಂಯೋಜಕರಾದ ಸುಬ್ಬು ಹೊಲೆಯಾರ್, ತಾಲೂಕು ಕಸಾಪ ಅಧ್ಯಕ್ಷೆ ಶಾರದ ಗುರುಮೂರ್ತಿ, ಹೆತ್ತೂರು ಗ್ರಾಪಂ ಅಧ್ಯಕ್ಷೆ ಅನುಸೂಯ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್, ಹೆತ್ತೂರು ಹೋಬಳಿ ಕಸಾಪ ಅಧ್ಯಕ್ಷ ಎಚ್.ಪಿ.ರವಿ ಕುಮಾರ್, ಸಾಹಿತಿ ಹಾಡ್ಲಳ್ಳಿ ನಾಗರಾಜ್ ಸೇರಿದಂತೆ ಮುಂತಾದವರಿದ್ದರು.