Advertisement

ಪ್ರಾ. ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿ ನೇಮಿಸಿ

11:24 PM Aug 19, 2019 | mahesh |

ಈಶ್ವರಮಂಗಲ: ಪಾಣಾಜೆ ಗ್ರಾ.ಪಂ. ಸಾಮಾನ್ಯ ಸಭೆ ಪಂಚಾಯತ್‌ ಅಧ್ಯಕ್ಷ ನಾರಾಯಣ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು ತಿಂಗಳಿನಿಂದ ವೈದ್ಯಾಧಿಕಾರಿಗಳು ಇಲ್ಲ. ಪ್ರತಿನಿತ್ಯ ನೂರಾರು ರೋಗಿಗಳು ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ. ಇದರಿಂದ ತೊಂದರೆಯಾಗುತ್ತಿದೆ. ಗುತ್ತಿಗೆ ಆಧಾರದಲ್ಲಿ ಆಯ್ಕೆಯಾದವರೂ ಉನ್ನತ ವ್ಯಾಸಂಗಕ್ಕೆ ಹೋಗಿದ್ದಾರೆ. ಕೂಡಲೇ ಕೇಂದ್ರಕ್ಕೆ ವೈದ್ಯಾಧಿಕಾರಿಗಳನ್ನು ನೇಮಿಸುವಂತೆ ಸದಸ್ಯರು ಆಗ್ರಹಿಸಿದರು.

ಪಂಚಾಯತ್‌ ಅಧ್ಯಕ್ಷ ನಾರಾಯಣ ಪೂಜಾರಿ ಮಾತನಾಡಿ, ವೈದ್ಯಾಧಿಕಾರಿಗಳು, ಸಿಬಂದಿ ಯಾವುದೇ ಮಾಹಿತಿ ನೀಡಿಲ್ಲ. ಗ್ರಾಮಸಭೆಯಲ್ಲಿಯೂ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಖಾಯಂ ವೈದ್ಯಾಧಿಕಾರಿ ನೇಮಕ ಮಾಡುವಂತೆ ತಾಲೂಕು ಆರೋಗ್ಯಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ವೈದ್ಯಾಧಿಕಾರಿಗಳನ್ನು ನೇಮಕ ಮಾಡದಿದ್ದರೆ ಪಂಚಾಯತ್‌ ವತಿಯಿಂದ ಪ್ರತಿಭಟನೆಗೆ ಸಿದ್ಧತೆ ನಡೆಸುವುದಾಗಿ ಸದಸ್ಯರು ಎಚ್ಚರಿಸಿದರು. ಶೀಘ್ರದಲ್ಲಿ ಖಾಯಂ ವೈದ್ಯಾಧಿಕಾರಿಗಳನ್ನು ನೇಮಕ ಮಾಡುವಂತೆ ಸಂಬಂಧಪಟ್ಟವರನ್ನು ಕೇಳಿಕೊಳ್ಳುವ ನಿರ್ಣಯ ಕೈಗೊಳ್ಳಲಾಯಿತು.

ವಿಶೇಷ ಪ್ಯಾಕೇಜ್‌ ನೀಡಲಿ
ಮಳೆಗಾಲದಲ್ಲಿ ಅತಿವೃಷ್ಟಿ ಮತ್ತು ಬೇಸಗೆಯಲ್ಲಿ ಅನಾವೃಷ್ಟಿಯಿಂದ ರೈತರ ಬೆಳೆ ನಾಶವಾಗಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಪ್ರವಾಹ ಪರಿಸ್ಥಿತಿ ಇಲ್ಲದಿದ್ದರೂ ಕೃಷಿ ನಾಶವಾಗಿದೆ. ಪರಿಹಾರ ನೀಡಬೇಕು. ರಾಜ್ಯ ಸರಕಾರ ಪಾಣಾಜೆ ಗ್ರಾಮಕ್ಕೆ ವಿಶೇಷ ಪ್ಯಾಕೇಜ್‌ ನೀಡುವಂತೆ ಸದಸ್ಯರು ಆಗ್ರಹಿಸಿದರು. ಕೊಳವೆಬಾವಿ ನಿರ್ಬಂಧ ತೆಗೆದು ಹಾಕಬೇಕು ಎಂದು ಸದಸ್ಯ ಶಾಹುಲ್ ಹಮೀದ್‌ ಹೇಳಿದರು. ಈ ಬಗ್ಗೆ ಚರ್ಚೆಯಾಗಿ ಸರಕಾರ ವಿಶೇಷ ಪ್ಯಾಕೇಜ್‌ ನೀಡುವಂತೆ ನಿರ್ಣಯಿಸಲಾಯಿತು.

Advertisement

ತಳ್ಳುಗಾಡಿ: ಕ್ರಮ ಇಲಾಖೆಗೆ
ಲೋಕೋಪಯೋಗಿ ರಸ್ತೆ ಅಂಚಿನಲ್ಲಿರುವ ತಳ್ಳುಗಾಡಿಗಳ ಕುರಿತು ಇಲಾಖೆಯೇ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಉಪಾಧ್ಯಕ್ಷೆ ಪವಿತ್ರಾ, ಸದಸ್ಯರಾದ ಜಗನ್ಮೋಹನ ರೈ, ಶಾಹುಲ್ ಹಮೀದ್‌, ಮೈಮುನತ್ತುಲ್ ಮೆಹ್ರಾ, ರತ್ನ ಕುಮಾರಿ, ಯಶೋದಾ ವೈ., ಮಮತಾ, ಲೆಕ್ಕ ಸಹಾಯಕ ಧನುಷ್‌ ಉಪಸ್ಥಿತರಿದ್ದರು.

ಪಿಡಿಒ ಚಂದ್ರಮತಿ ಸ್ವಾಗತಿಸಿ, ವಂದಿಸಿದರು. ಸಿಬಂದಿ ವಿಶ್ವನಾಥ ನಾಯ್ಕ, ಅರುಣ್‌ ಕುಮಾರ್‌ ಎ., ರೂಪಶ್ರೀ, ಸೌಮ್ಯಲತಾ ಸಹಕರಿಸಿದರು.

ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಟವರ್‌ನ ಉಪಯೋಗವಿಲ್ಲದಂತೆ ಆಗಿದೆ. ಆವಶ್ಯಕ ಇರುವ ಸಂದರ್ಭದಲ್ಲಿ ಉಪಯೋಗಕ್ಕೆ ಬರುವುದಿಲ್ಲ ಎಂದು ಸದಸ್ಯರು ಹೇಳಿದರು. ಮೇಲಾಧಿಕಾರಿಗಳು ಸ್ಪಂದಿಸದಿದ್ದರೆ ಗ್ರಾಹಕರನ್ನು ಸೇರಿಸಿ ತೀವ್ರ ಹೋರಾಟ ನಡೆಸುವುದಾಗಿ ಸದಸ್ಯರು ಹೇಳಿದರು.

ಸದಸ್ಯ ಶಾಹುಲ್ ಹಮೀದ್‌ ಮಾತನಾಡಿ, ಕುಡಿಯುವ ನೀರಿನ ಬಳಕೆದಾರರು ಹಣ ಪಾವತಿಸಿದ್ದಾರೆಯೇ? ಎಂದು ಪ್ರಶ್ನಿಸಿದರು. ಹಲವು ವರ್ಷದಿಂದ ಕುಡಿಯುವ ನೀರಿನ ಬಿಲ್ಲು 3 ಲಕ್ಷ ರೂ. ಬಾಕಿ ಇದೆ ಎಂದು ಪಿಡಿಒ ಹೇಳಿದರು. ಬಿಲ್ಲು ಕಟ್ಟದ ಬಳಕೆದಾರರಿಗೆ ನೋಟಿಸ್‌ ಜಾರಿ ಮಾಡಿ ಬಾಕಿ ಇರುವ ಹಣವನ್ನು 7 ದಿನದಲ್ಲಿ ಪಾವತಿಸುವುದು ಇಲ್ಲದಿದ್ದಲ್ಲಿ ಸಂಪರ್ಕ ಕಡಿತಗೊಳಿಸುವುದಾಗಿ ತೀರ್ಮಾನಿಸಲಾಯಿತು.

ಬಿಎಸ್ಸೆನ್ನೆಲ್ ವಿರುದ್ಧ ಹೋರಾಟ
ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಟವರ್‌ನ ಉಪಯೋಗವಿಲ್ಲದಂತೆ ಆಗಿದೆ. ಆವಶ್ಯಕ ಇರುವ ಸಂದರ್ಭದಲ್ಲಿ ಉಪಯೋಗಕ್ಕೆ ಬರುವುದಿಲ್ಲ ಎಂದು ಸದಸ್ಯರು ಹೇಳಿದರು. ಮೇಲಾಧಿಕಾರಿಗಳು ಸ್ಪಂದಿಸದಿದ್ದರೆ ಗ್ರಾಹಕರನ್ನು ಸೇರಿಸಿ ತೀವ್ರ ಹೋರಾಟ ನಡೆಸುವುದಾಗಿ ಸದಸ್ಯರು ಹೇಳಿದರು.

ಬಿಲ್ ಕಟ್ಟದ ಗ್ರಾಹಕರಿಗೆ ನೋಟಿಸ್‌
ಸದಸ್ಯ ಶಾಹುಲ್ ಹಮೀದ್‌ ಮಾತನಾಡಿ, ಕುಡಿಯುವ ನೀರಿನ ಬಳಕೆದಾರರು ಹಣ ಪಾವತಿಸಿದ್ದಾರೆಯೇ? ಎಂದು ಪ್ರಶ್ನಿಸಿದರು. ಹಲವು ವರ್ಷದಿಂದ ಕುಡಿಯುವ ನೀರಿನ ಬಿಲ್ಲು 3 ಲಕ್ಷ ರೂ. ಬಾಕಿ ಇದೆ ಎಂದು ಪಿಡಿಒ ಹೇಳಿದರು. ಬಿಲ್ಲು ಕಟ್ಟದ ಬಳಕೆದಾರರಿಗೆ ನೋಟಿಸ್‌ ಜಾರಿ ಮಾಡಿ ಬಾಕಿ ಇರುವ ಹಣವನ್ನು 7 ದಿನದಲ್ಲಿ ಪಾವತಿಸುವುದು ಇಲ್ಲದಿದ್ದಲ್ಲಿ ಸಂಪರ್ಕ ಕಡಿತಗೊಳಿಸುವುದಾಗಿ ತೀರ್ಮಾನಿಸಲಾಯಿತು.
Advertisement

Udayavani is now on Telegram. Click here to join our channel and stay updated with the latest news.

Next