Advertisement

ವಿಸಿಟರ್‌ ವೀಸಾ ವಿಳಂಬ

12:47 PM Aug 19, 2022 | Team Udayavani |

ಹೊಸದಿಲ್ಲಿ: ಅಮೆರಿಕಕ್ಕೆ ಪ್ರವಾಸ ಹೋಗಲಿದೆಯೇ? ಹಾಗಿದ್ದರೆ 2024ರ ಮಾರ್ಚ್‌ ನಲ್ಲಷ್ಟೇ ವೀಸಾಕ್ಕೆ ಅಪಾಯಿಂಟ್‌ಮೆಂಟ್‌ ಸಿಗಲಿದೆ. ಕೆನಡಾ, ಬ್ರಿಟನ್‌ ಮತ್ತು ಇತರ ಐರೋಪ್ಯ ದೇಶಗಳಿಗೆ ವಿಸಿಟರ್‌ ವೀಸಾ ಮೂಲಕ ಹೋಗಬೇಕಿದ್ದರೂ ವೀಸಾಕ್ಕಾಗಿ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Advertisement

ಕೊರೊನಾ ಹಿನ್ನೆಲೆಯಲ್ಲಿ ಅಮೆರಿಕದ ವಿದೇಶಾಂಗ ಸಚಿವಾಲಯವು ರಾಯಭಾರ ಕಚೇರಿ, ದೂತಾವಾಸ ಕಚೇರಿಗಳಲ್ಲಿ ಇದ್ದ ಹೆಚ್ಚುವರಿ ಸಿಬಂದಿಯನ್ನು ವಾಪಸ್‌ ಕರೆಸಿಕೊಂಡಿತ್ತು. ಸದ್ಯ ಪ್ರಯಾಣಕ್ಕೆ ಇರುವ ನಿರ್ಬಂಧಗಳನ್ನು ವಾಪಸ್‌ ಪಡೆದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಅಮೆರಿಕ, ಬ್ರಿಟನ್‌, ಕೆನಡಾಗಳಿಗೆ ಭೇಟಿ ನೀಡಲು ಮುಂದಾಗಿದ್ದಾರೆ.

ಅಮೆರಿಕದ ವಿದೇಶಾಂಗ ಇಲಾಖೆಯ ವೆಬ್‌ಸೈಟ್‌ನಲ್ಲಿ ಉಲ್ಲೇಖೀಸಿರುವಂತೆ 2024ರ ಮಾರ್ಚ್‌ -ಎಪ್ರಿಲ್‌ ವೇಳೆಗಷ್ಟೇ ವಿಸಿಟರ್‌ ವೀಸಾ ಪಡೆಯಲು ಅಪಾಯಿಂಟ್‌ಮೆಂಟ್‌ ಸಿಗಬಹುದು. ಕೆಲವು ವಿಧದ ವೀಸಾಗಳಿಗೆ ಶೀಘ್ರವೇ ಅನುಮತಿ ನೀಡುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಅಮೆರಿಕ ರಾಯಭಾರ ಕಚೇರಿಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ತೊಂದರೆಗೆ ವಿಷಾದಿಸುತ್ತೇನೆ ಎಂದು ಬ್ರಿಟನ್‌ ಹೈಕಮಿಷನರ್‌ ಅಲೆಕ್ಸ್‌ ಎಲ್ಲಿ ಕೂಡ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next