Advertisement

ಪಾಸ್‌ಪೋರ್ಟ್‌: ಇನ್ನು ಮುಂದೆ ಪೊಲೀಸ್‌ ಪರಿಶೀಲನೆ ಸುಲಭ!

08:25 AM Aug 22, 2017 | Karthik A |

ಹೊಸದಿಲ್ಲಿ: ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ ಬಳಿಕ ಋಜುವಾತುಪಡಿಸಲು ಅರ್ಜಿದಾರರ ಮನೆಗಳಿಗೆ ಪೊಲೀಸ್‌ ಭೇಟಿ ಇದ್ದದ್ದೇ. ಇದಕ್ಕಾಗಿ ದಿನಗಟ್ಟಲೆ ಸಮಯ ತೆಗೆದುಕೊಳ್ಳುವುದಕ್ಕೆ ಇನ್ನು ಸಂಪೂರ್ಣ ಬ್ರೇಕ್‌ ಬೀಳಲಿದೆ. ನೂತನ ಕ್ರಮವೊಂದರಲ್ಲಿ ರಾಷ್ಟ್ರೀಯ ಅಪರಾಧ ದತ್ತಾಂಶಗಳನ್ನು ವಿದೇಶಾಂಗ ಇಲಾಖೆ ಜತೆ ಹಂಚಿಕೊಳ್ಳಲು ಕೇಂದ್ರ ಗೃಹ ಇಲಾಖೆ ಮುಂದಾಗಿದೆ. ಇದಕ್ಕಾಗಿ ಕ್ರೈಂ ಆ್ಯಂಡ್‌ ಕ್ರಿಮಿನಲ್‌ ಟ್ರ್ಯಾಕಿಂಗ್‌ ನೆಟ್‌ವರ್ಕ್‌ ಆ್ಯಂಡ್‌ ಸಿಸ್ಟಮ್ಸ್‌ (ಸಿಸಿಟಿಎನ್‌ಎಸ್‌) ಹೆಸರಿನ ವ್ಯವಸ್ಥೆಯೊಂದನ್ನು ಹೊರತರಲಾಗುತ್ತಿದೆ. ಇದರಿಂದ ಕಂಪ್ಯೂಟರ್‌ನಲ್ಲೇ ಅರ್ಜಿದಾರರಿಗೆ ಅಪರಾಧ ಹಿನ್ನೆಲೆಯಿದೆಯೇ ಎಂಬುದನ್ನು ಒಂದು ಸಿಂಗಲ್‌ ಕ್ಲಿಕ್‌ನಲ್ಲೇ ನೋಡಬಹುದು! ಮುಂದಿನ ವರ್ಷದಿಂದ ನೂತನ ವ್ಯವಸ್ಥೆ ಜಾರಿಗೆ ಬರಲಿದೆ.

Advertisement

ಸದ್ಯದ ವ್ಯವಸ್ಥೆಯಲ್ಲಿ ಪಾಸ್‌ಪೋರ್ಟ್‌ ಕಚೇರಿಯಿಂದ ಪೊಲೀಸ್‌ ಠಾಣೆಗೆ ಅರ್ಜಿದಾರರ ವಿವರಗಳು ಹೋಗಿ, ಬಳಿಕ ಪೊಲೀಸರು ಅರ್ಜಿದಾರರ ಮನೆಗೆ ಹೋಗಿ, ಋಜುವಾತುಪಡಿಸುತ್ತಿದ್ದಾರೆ. ಇದಕ್ಕೆ 15 ದಿನ, ಕೆಲವೊಮ್ಮೆ 1 ತಿಂಗಳು ತೆಗೆದುಕೊಳ್ಳುತ್ತಿದ್ದರು. ಅದರೆ ಇನ್ನು ಟ್ಯಾಬ್‌ ಮೂಲಕ ಸಿಸಿಟಿಎನ್‌ಎಸ್‌ ವ್ಯವಸ್ಥೆ ಬಳಸಿ ಪೊಲೀಸರು ಸುಲಭವಾಗಿ ಗರಿಷ್ಠ ಎರಡೇ ದಿನದಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಸಿಸಿಟಿಎನ್‌ಎಸ್‌ ವ್ಯವಸ್ಥೆ  ದೇಶದ 15,398 ಪೊಲೀಸ್‌ ಠಾಣೆಗಳ ಅಪರಾಧ ದತ್ತಾಂಶಗಳನ್ನು ಹೊಂದಲಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಮೆಹರ್ಷಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next