ಪಡೆದಿದ್ದಾರೆ ಎಂದು ಬಿಬಿಎಂಪಿ ಸದಸ್ಯ ಪದ್ಮನಾಭರೆಡ್ಡಿ ವಿಧಾನ ಪರಿಷತ್ ಸಭಾಪತಿಯವರಿಗೆ ಸಲ್ಲಿಸಿರುವ ದೂರು
ಹೊಸ ತಿರುವು ಪಡೆದುಕೊಂಡಿದೆ. ತಮ್ಮ ವಿರುದ್ಧ ಪದ್ಮನಾಭರೆಡ್ಡಿ ಸುಳ್ಳು ಆರೋಪ ಮಾಡಿದ್ದಾರೆಂದು ಆರೋಪಿಸಿ ವಿಧಾನ ಪರಿಷತ್ 8 ಸದಸ್ಯರು ಸಭಾಪತಿಗಳಿಗೆ ಪ್ರತಿದೂರು ಸಲ್ಲಿಸಿದ್ದು, ಪದ್ಮನಾಭರೆಡ್ಡಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಅವಕಾಶ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ದೂರುಗಳ ಕುರಿತಾಗಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಂಗಳವಾರ ಅಡ್ವೋಕೇಟ್ ಜನರಲ್ ಜತೆ ಚರ್ಚಿಸಲಿದ್ದಾರೆ.
Advertisement
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಭಾಪತಿ ಡಿ.ಎಚ್.ಶಂಕರಮೂರ್ತಿ ಈ ವಿಷಯ ತಿಳಿಸಿದರು. ಮೇಲ್ಮನೆ ಸದಸ್ಯರಾದ ಮನೋಹರ್, ರಘು ಆಚಾರ್, ಆರ್.ಬಿ.ತಿಮ್ಮಾಪುರ್, ಎಂ.ಡಿ.ಲಕ್ಷಿ$¾ನಾರಾಯಣ, ಅಲ್ಲಂ ವೀರಭದ್ರಪ್ಪ, ಅಪ್ಪಾಜಿಗೌಡ, ಎಸ್.ರವಿ, ಎನ್. ಎಸ್.ಬೋಸರಾಜ… ಅವರು ಬೆಂಗಳೂರಿಗೆ ವಿಳಾಸ ಬದಲಾಯಿಸಿಕೊಂಡು ಬಿಬಿಎಂಪಿ ಮೇಯರ್ ಆಯ್ಕೆ ಚುನಾವಣೆಯಲ್ಲಿ ಮತ ಹಾಕಿ¨ªಾರೆ. ಆದರೆ, ನಂತರವೂ ತಮ್ಮ ಆಯ್ಕೆಯಾದ ಕ್ಷೇತ್ರಗಳಿಂದ ಪ್ರಯಾಣ ಭತ್ಯೆ ಪಡೆದುಕೊಂಡಿದ್ದು, ಇದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಜನಪ್ರತಿನಿಧಿ ಕಾಯ್ದೆ ಮತ್ತು ಸಂವಿಧಾನದ ಉಲ್ಲಂಘನೆಯಾಗಿದೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಂಡು ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಪದ್ಮನಾಭರೆಡ್ಡಿ ದೂರು ನೀಡಿದ್ದರು. ಈ ಕುರಿತಂತೆ ತಾವು ನೀಡಿದ್ದ ನೋಟಿಸ್‌ಗೆ ಲಿಖೀತ ಉತ್ತರ ನೀಡಿದ್ದ ಎಂಟು ಸದಸ್ಯರು, ನಾವು ಯಾವುದೇ ತಪ್ಪು ಮಾಡಿಲ್ಲ. ಪದ್ಮನಾಭರೆಡ್ಡಿ ನಮ್ಮ ವಿರುದ್ಧ ಸುಳ್ಳು ದೂರು ನೀಡಿ ಹಕ್ಕುಚ್ಯುತಿ ಮಾಡಿ¨ªಾರೆ.
ಕೋರಿದ್ದಾರೆ ಎಂದರು. ವಿಧಾನ ಪರಿಷತ್ತಿನ ಎಂಟು ಸದಸ್ಯರು ವಿಳಾಸ ಬದಲಾವಣೆ ಮಾಡಿಕೊಂಡ ನಂತರವೂ ಸ್ವಕ್ಷೇತ್ರದಿಂದ ಪ್ರಯಾಣ ಮಾಡಿ ಭತ್ಯೆ ಪಡೆದುಕೊಂಡಿರುವುದು ಕಾನೂನಾತ್ಮಕವಾಗಿ ಸರಿಯಾಗಿದ್ದರೂ ನೈತಿಕವಾಗಿ ತಪ್ಪು. ಅದನ್ನು ಆಧರಿಸಿ ಕ್ರಮ ಕೈಗೊಳ್ಳಲು ಮುಂದಾದರೆ ತಾವು ಪಡೆದಿರುವ ಪ್ರಯಾಣ ಭತ್ಯೆ ವಾಪಸ್ ಮಾಡುತ್ತೇವೆ ಎಂದು ಹೇಳಿದರೆ ಮುಂದೇನು ಎಂಬ ಜಿಜ್ಞಾಸೆ ಎದುರಾಗಿದೆ. ಈ ರೀತಿಯ ಪ್ರಕರಣ ಇದೇ ಮೊದಲನೆಯದಾಗಿದ್ದು, ಅತ್ಯಂತ ಸೂಕ್ಷ್ಮ ಹಾಗೂ ಸಂಕೀರ್ಣವಾಗಿದೆ. ಈ ಹಿನ್ನೆಲೆಯಲ್ಲಿ ವಿಳಂಬವಾದರೂ ಚಿಂತೆಯಿಲ್ಲ, ಸಮಗ್ರವಾಗಿ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದಿದ್ದೇನೆ ಎಂದರು. ರಾಷ್ಟ್ರಪತಿ ಚುನಾವಣೆ ಬಳಿಕ ರಾಜ್ಯಪಾಲರ ಹು¨ªೆ ಚರ್ಚೆ
“ನನ್ನನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ರಾಜ್ಯಪಾಲರಾಗಿ ನೇಮಕ ಮಾಡುವ ವಿಚಾರ ನನಗೆ ಗೊತ್ತಿಲ್ಲ. ಅದು ಎಲ್ಲಿಂದ ಸೃಷ್ಟಿಯಾಗಿದೆಯೋ ಅರಿವಿಲ್ಲ. ಆದರೆ, ಈ ವರದಿಯಲ್ಲಿ ಶೇ. 60ರಷ್ಟು ಸತ್ಯಾಂಶವಿದೆ’ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ಸುಮಾರು 3 ವರ್ಷ ಹಿಂದೆ ದೆಹಲಿಯ ನಾಯಕರು ನನ್ನೊಂದಿಗೆ ಮಾತನಾಡಿ ರಾಜ್ಯಪಾಲರಾಗಿ ನೇಮಿಸುವ ಭರವಸೆ ನೀಡಿದ್ದರು. ಅಲ್ಲದೆ, ಕಳೆದ 10 ದಿನಗಳ ಹಿಂದೆಯೂ ಸಂಪರ್ಕಿಸಿ ರಾಷ್ಟ್ರಪತಿ ಚುನಾವಣೆ ಬಳಿಕ ಈ ವಿಷಯ ಚರ್ಚೆ ಮಾಡುತ್ತೇವೆ ಎಂದಿದ್ದರು. ಅದಕ್ಕಿಂತ ಹೆಚ್ಚು ನನಗೇನೂ ಗೊತ್ತಿಲ್ಲ. ಆದರೆ, ಈಗ ಇದ್ದಕ್ಕಿದ್ದಂತೆ ನನ್ನನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ರಾಜ್ಯಪಾಲರಾಗಿ ನೇಮಿಸುವ ಸುದ್ದಿ ಪ್ರಸಾರವಾಗುತ್ತಿದ್ದು, ಆ ಮಾಹಿತಿ ಎಲ್ಲಿಂದ ಬಂತು ಎಂಬುದು ಗೊತ್ತಿಲ್ಲ’ ಎಂದರು.