ಕ್ವಿಕ್ ಲುಕ್ ಅಂತಾರೆ ನೋಡಿ ಅದೇ ಇದು. ರಾತ್ರಿ ಬೆಳಗಾಗೋದ್ರೊಳಗೆ ನೀವು ಸೌಂದರ್ಯವತಿ ಆಗಲು ಜಾಸ್ತಿ ಹರ ಸಾಹಸ ಪಡಬೇಕಿಲ್ಲ. ಇಲ್ಲಿನ ಕೆಲವು ಸರಳ ಸೂತ್ರಗಳನ್ನು ಅನುಸರಿಸಿ, ರಾತ್ರಿ ನಿದ್ರಿಸಿದರೆ, ಬೆಳಗೆ ಏಳುವುದರೊಳಗೆ ನಿಮ್ಮ ರೂಪಸಿರಿ, ನಿಮ್ಮ ಮನೆಯಲ್ಲೇ ಬ್ರೇಕಿಂಗ್ ನ್ಯೂಸ್ ಕೊಡುತ್ತೆ…
1. ಅಲೋ ವೆರಾ: ಚರ್ಮದ ಮೇಲಿನ ಕಲೆಗಳು, ಮೊಡವೆಗಳಿದ್ದರೆ, ಅತ್ಯಂತ ಬೇಗನೆ ಅದನ್ನು ನಿರ್ಮೂಲನೆ ಮಾಡುವ ಶಕ್ತಿ ಅಲೋ ವೆರಾಕ್ಕಿದೆ. ಮುಖವನ್ನು ಮೊದಲು ಚೆನ್ನಾಗಿ ತೊಳೆದು, ನಂತರ ಮೊಡವೆ ಅಥವಾ ಕಲೆಗಳ ಮೇಲೆ ಅಲೋ ವೆರಾ ಜ್ಯೂಸ್ ಹಚ್ಚಿ, 1 ತಾಸಿನ ನಂತರ ಚೆನ್ನಾಗಿ ತೊಳೆದುಕೊಳ್ಳಬೇಕು. ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದರೆ, ಬೆಳಗ್ಗೆ ಮ್ಯಾಜಿಕ್ ಲುಕ್ ಕಾಣಬಹುದು.
2. ಬೇಕಿಂಗ್ ಸೋಡಾ: ಬೇಕಿಂಗ್ ಸೋಡಾ ಪುಡಿಯನ್ನು ನೀರಿನಲ್ಲಿ ಪೇಸ್ಟ್ ಮಾಡಿ, ಅದನ್ನು ಮೊಡವೆ ಇರುವ ಜಾಗಕ್ಕೆ ರಾತ್ರಿ ಹಚ್ಚಿಕೊಂಡು ಮಲಗಬೇಕು. ಬೆಳಗೆ ಎದ್ದಾಗ, ಮೊಡವೆಗಳು ಬಹುತೇಕ ಬಾಡಿರುತ್ತವೆ. ಒಣಚರ್ಮದ ಇದ್ದವರು ಕೋಮಲ ತ್ವಚೆಯನ್ನು ಹೊಂದುತ್ತಾರೆ.
3. ವ್ಯಾಸೆಲಿನ್: ಕೈಗಳಿಗೆ, ಪಾದಗಳಿಗೆ ವ್ಯಾಸಲಿನ್ ಹಚ್ಚಿಕೊಂಡು, ಕೆಲ ನಿಮಿಷದ ನಂತರ ಕಾಟನ್ ಗ್ಲೌಸ್ ಧರಿಸಿ, ಮಲಗಬೇಕು. ಬೆಳಗ್ಗೆ ಎದ್ದಾಗ, ಚರ್ಮ ಮೃದುತ್ವ ಪಡೆದಿರುವ ಅನುಭವವನ್ನು ಕಾಣಬಹುದು. ಮಳೆಗಾಲ, ಚಳಿಗಾಲದಲ್ಲಿ ಇದನ್ನು ಅನುಸರಿಸಿದರೆ, ಚರ್ಮ ಕಾಂತಿಹೀನವಾಗುವುದನ್ನು ತಪ್ಪಿಸಬಹುದು.
4. ಕೊಬ್ಬರಿ ಎಣ್ಣೆ: ರಾತ್ರಿ ಮಲಗುವಾಗ, ಮುಖವೂ ಸೇರಿದಂತೆ ಕೈ-ಕಾಲುಗಳಿಗೆ ಕೊಬ್ಬರಿಎಣ್ಣೆಯನ್ನು ಹಚ್ಚಿಕೊಂಡು, ಚೆನ್ನಾಗಿ ಮಸಾಜ್ ಮಾಡಬೇಕು. ಮುಂಜಾನೆ ಕನ್ನಡಿ ಮುಂದೆ ನಿಂತರೆ, “ಇದು ನಾನಾ?’ ಎಂದು ನಿಮ್ಮನ್ನೇ ಕೇಳಿಕೊಳ್ತೀರಿ. ಚರ್ಮ ಸುಕ್ಕುಗಟ್ಟುವಿಕೆಯನ್ನು ಕೊಬ್ಬರಿಎಣ್ಣೆ ತಡೆಯುತ್ತದೆ.
5. ನಿಂಬೆ- ಬಾದಾಮಿ: ಒಂದೆರಡು ನಿಂಬೆಹಣ್ಣಿನ ರಸಕ್ಕೆ, ನಾಲ್ಕು ಹನಿ ಬಾದಾಮಿ ಎಣ್ಣೆಯನ್ನು ಬೆರೆಸಿ, ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಂಡರೆ, ಬೆಳಗ್ಗೆ ಎದ್ದಾಗ ಫ್ರೆಶ್ ಮುಖ ನಿಮ್ಮದಾಗುತ್ತೆ. ಕಣ್ಣಿನ ಸುತ್ತ ಇರುವ ಕಪ್ಪುವರ್ತುಲಗಳನ್ನೂ ಇದು ನಿರ್ಮೂಲನೆ ಮಾಡುತ್ತೆ.
6. ಟೊಮೇಟೊ- ಜೇನುರಸ: ಟೊಮೇಟೊ ಹಣ್ಣನ್ನು ಸ್ಲೆ„ಸ್ ರೀತಿಯಲ್ಲಿ ಕತ್ತರಿಸಬೇಕು. ಅದಕ್ಕೆ ಜೇನುತುಪ್ಪವನ್ನು ಹಚ್ಚಿ, ಮುಖದ ಮೇಲೆ ಎಲ್ಲ ಸ್ಲೆ„ಸ್‌ಗಳನ್ನೂ ಇಟ್ಟುಕೊಂಡು ಮಲಗಬೇಕು. ಬೆಳಗ್ಗೆದ್ದು, ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದಾಗ, ನೀವು ನೀವಾಗಿರಲ್ಲ, ಬ್ಯೂಟಿ ಕ್ವೀನ್ ಆಗಿರುತ್ತೀರ!