Advertisement

ಇಚ್ಛಾಶಕ್ತಿ ಇದ್ದಲ್ಲಿ ಅರ್ಜಿಗಳು ತ್ವರಿತಗತಿಯಲ್ಲಿ ವಿಲೇವಾರಿ

09:56 PM Jun 17, 2019 | Team Udayavani |

ಕಾಪು: ಕಾಪು ತಾಲೂಕು ಕಚೇರಿಯ ಕೆಳ ಮಹಡಿಯಲ್ಲಿ ಪ್ರಾರಂಭಿ ಸಲಾದ ತಾಲೂಕಿನ ನೂತನ ಪಹಣಿ (ಆರ್‌ಟಿಸಿ) ವಿತರಣಾ ಕೇಂದ್ರವನ್ನು ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಅವರು ಜೂ. 17ರಂದು ಉದ್ಘಾಟಿಸಿದರು.

Advertisement

ಬಳಿಕ ಮಾತನಾಡಿದ ಅವರು ಕಾಪು ತಹಶೀಲ್ದಾರ್‌ ಮತ್ತು ಕಂದಾಯ ಅಧಿಕಾರಿಗಳ ವಿಶೇಷ ಮುತುವರ್ಜಿ ಯಿಂದಾಗಿ ತಾಲೂಕು ಕಚೇರಿಯಲ್ಲಿ ಪ್ರತೀಯೊಂದು ಅರ್ಜಿಗಳು ಕೂಡಾ ತ್ವರಿತಗತಿಯಲ್ಲಿ ವಿಲೇವಾರಿಯಾಗುತ್ತಿವೆ. ಇದಕ್ಕೆ ಅಧಿಕಾರಿಗಳ ಇಚ್ಛಾಶಕ್ತಿಯೇ ಮೂಲ ಕಾರಣವಾಗಿದೆ. ಸಾರ್ವಜನಿಕರು ತಾಲೂಕು ಕಚೇರಿ ಹಾಗೂ ಪಹಣಿ ವಿತರಣಾ ಕೇಂದ್ರದ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ಕಾಪು ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ಮಾತನಾಡಿ, ತಾಲೂಕಿನ ಜನತೆಯ ಬಹು ಸಮಯದ ಬೇಡಿಕೆ ಯಾಗಿದ್ದ ಪಹಣಿ ಕೇಂದ್ರ ಸ್ಥಾಪನೆಯು ಇದೀಗ ಅನುಷ್ಠಾನಕ್ಕೆ ಬಂದಿದೆ. ನೂತನ ಪಹಣಿ ಕೇಂದ್ರದಲ್ಲಿ ತಾಲೂಕಿನ ಜನತೆ ಅಗತ್ಯದ ಸೌಕರ್ಯಗಳಾದ ಆರ್‌.ಟಿ.ಸಿ. ಮತ್ತು ಮ್ಯುಟೇಶನ್‌ ಪ್ರತಿಗಳು ದೊರಕಲಿವೆ. ಇದರಿಂದಾಗಿ ಕಾಪು ತಾಲೂಕಿನ ಜನತೆ ಪಹಣಿ ಪತ್ರ, ಮ್ಯುಟೇಶನ್‌ ಪ್ರತಿಗಳಿಗಾಗಿ ಉಡುಪಿಗೆ ತೆರಳುವುದನ್ನು ತಪ್ಪಿಸಬಹುದಾಗಿದೆ ಎಂದರು.ಕಾಪು ತಾಲೂಕು ಡೆಪ್ಯುಟಿ ತಹ ಶೀಲ್ದಾರ್‌ ಕಲ್ಲಮುರುಡಪ್ಪ, ತಹಶೀಲ್ದಾರ್‌ ಕಚೇರಿಯ ಅಧಿಕಾರಿಗಳು ಮತ್ತು ಸಿಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next