ದೇವನಹಳ್ಳಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸುವ ಅಗ್ನಿ ಅವಘಡ ನಿರ್ವಹಿಸಲು ಇದೇ ಮೊದಲ ಬಾರಿಗೆ ರೋಸೆನ್‌ಬೌರ್ ಪೈರ್‌ಪೈಂಟಿಂಗ್ ಸಿಮ್ಯುಲೇಟರ್ ಅನ್ನು ಪರಿಚಯಿಸಿದೆ. ಇದು ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ಪರಿಚಯಿಸಿದ ಅತ್ಯಾಧುನಿಕ ಅಗ್ನಿಶಾಮಕ ತಂತ್ರಜ್ಞಾನವಾಗಿದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಯರಾಜ್ ಷಣ್ಮುಗಂ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಂಗಳೂರು ವಿಮಾನ ನಿಲ್ದಾಣದ ಸುರಕ್ಷತೆ ದೃಷ್ಟಿಯಿಂದ ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ರೋಸೆನ್ ಬೌರ್ ಪೈರ್‌ಪೈಂಟಿಂಗ್ ಸಿಮ್ಯುಲೇಟರ್ ಅನ್ನು ಪರಿಚಯಿಸಲಾಗುತ್ತಿದೆ.
ಇದು ಯಾವುದೇ ರೀತಿಯ ಅಗ್ನಿ ಅವಘಡವಾದರೂ, ಕೂಡಲೇ ಅದನ್ನು ಆರಿಸುವ ಕೆಲಸದಲ್ಲಿ ನಿಪುಣತೆ ಹೊಂದಿದೆ. ಈ ಅತ್ಯಾಧುನಿಕ ತಂತ್ರಜ್ಞಾನದ ಅಗ್ನಿಶಾಮಕವನ್ನು ಭಾರತದ ಯಾವುದೇ ವಿಮಾನ ನಿಲ್ದಾಣದ ತಂಡ ಇಲ್ಲಿಗೆ ಆಗಮಿಸಿ ಇದರ ತರಬೇತಿ ಪಡೆಯಲು ಸಹಮುಕ್ತ ಅವಕಾಶವನ್ನು ಒದಗಿಸಿ ಕೊಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:- ಮುಂಬೈ ಷೇರುಪೇಟೆ ಸೆನ್ಸೆಕ್ಸ್ 568 ಅಂಕ ಇಳಿಕೆ; ನಿಫ್ಟಿ ಕುಸಿತ, ಹೂಡಿಕೆದಾರರಿಗೆ ನಷ್ಟ
ವಿಮಾನ ನಿಲ್ದಾಣ ಅಥವಾ ವಿಮಾನಗಳ ಅಪಘಾತದ ಸಂದರ್ಭದಲ್ಲಿ ಹೊತ್ತಿಕೊಳ್ಳುವ ಅಗ್ನಿ ಅವಘಡವನ್ನು ತುರ್ತಾಗಿ ಆರಿಸುವಲ್ಲಿ ಈ ಅತ್ಯಾಧುನಿಕ ಸಿಮ್ಯುಲೇಟರ್ ಕೆಲಸ ಮಾಡಲಿದೆ. ರೋಸೆನ್‌ಬೌರ್ ಸಿಮ್ಯುಲೇಟರ್ ಎರಡು ಪ್ಯಾಂಥರ್ 6 ಟ್ರಕ್ ಹಾಗೂ 8 ಟ್ರಕ್ ಇರಿಸಲಾಗಿದೆ. ಈ ಟ್ರಕ್‌ಗಳಲ್ಲಿ ಎರಡು ಹೈರೀಚ್ ಎಕ್ಸ್ಟೆಂಡೆಬಲ್ ಟರೆಟ್ಸ್ (ಎಚ್‌ಆರ್‌ಇಟಿ)ಯನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಸುರಕ್ಷತೆಗೆ ಮೊದಲ ಆದ್ಯತೆ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುರಕ್ಷತೆ ಕಾಯ್ದುಕೊಳ್ಳುವುದು ನಮ್ಮ ಮೊದಲ ಆದ್ಯತೆ. ರೋಸೆನ್‌ಬೌರ್ ಸಿಎಫ್ಟಿ ಮೂಲಕ ಕಠಿಣವಾದ ಅಗ್ನಿ ಅವಘಡದ ಸಂದರ್ಭ ದಲ್ಲಿ ಈ ಸಿಮ್ಯುಲೇಟರ್ ಚಾತುರ್ಯದಿಂದ ಅಗ್ನಿಯನ್ನು ಶಮನ ಮಾಡಲಿದೆ. ವಿಮಾನ ನಿಲ್ದಾಣ ದಲ್ಲಿರುವ ಅಗ್ನಿಶಾಮಕ ದಳದವರಿಗೆ ಈ ಸಿಮ್ಯುಲೇಟರ್ ಅನ್ನು ಬಳಸುವ ವಿಧಾನವನ್ನು ತರಬೇತಿ ನೀಡಲಾಗಿದೆ. ಅದರಲ್ಲೂ ಕಮಾಂಡ್ ನಿಯಂತ್ರ ಕರು, ಮೂಲ ಚಾಲಕರು, ಪೋಸಿಶನಿಂಗ್ ಇನ್ಸಿ ಡೆಂಟ್ ಕಮಾಂಡರ್, ಕ್ಯೂ ಕಮಾಂಡರ್ ಹಾಗೂ ಅಗ್ನಿಶಾಮಕ ಮುಂಚೂಣಿ ಸಿಬ್ಬಂದಿಗೆ ಈ ತರಬೇತಿ ಯನ್ನು ಕಡ್ಡಾಯವಾಗಿ ನೀಡಲಾಗುವುದು ಎಂದರು.