ಪಣಜಿ: ಮಹದಾಯಿ ನದಿ ನೀರಿನ ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಕರ್ನಾಟಕವು
ಕಳಸಾ - ಬಂಡೂರಿ ನಾಲೆ ನಿರ್ಮಾಣ ನಡೆಸಿದೆ ಎಂದು ನ್ಯಾಯಾಧಿಕರಣದಲ್ಲಿ ಗೋವಾ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.
ಮಹದಾಯಿ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.6ರಿಂದ ನ್ಯಾಯಾಧಿಕರಣದಲ್ಲಿ ವಿಚಾರಣೆ ಆರಂಭಗೊಳ್ಳಲಿದೆ. ಆದರೆ ಗೋವಾಕ್ಕೆ ಹರಿದುಬರುವ ಮಹದಾಯಿ ನದಿ ನೀರಿನ ಪ್ರಮಾಣದಲ್ಲಿ ಕಡಿಮೆ ಆಗಿರುವುದರಿಂದ ಗೋವಾ ಸರ್ಕಾರವು ನ್ಯಾಯಾಧಿಕರಣದಲ್ಲಿ ಮಧ್ಯಂತರ ಅರ್ಜಿ ದಾಖಲಿಸಿದೆ.
ಮಾಂಡವಿ ನದಿಯ ಉಪನದಿಯಲ್ಲಿ ಖಾಂಡೆಪಾರ್‌ದಲ್ಲಿ ಒಪ್ ಜಲಶುದಿಟಛೀಕರಣ ಘಟಕವಿದೆ. ಈ ಘಟಕಕ್ಕೆ ವರ್ಷವಿಡೀ ನೀರು ಲಭಿಸಬೇಕೆಂಬ ಉದ್ದೇಶದಿಂದ ಗಾಂಜೆ ಎಂಬ ಊರಿನಿಂದ ನದಿಯ ನೀರನ್ನು ಪಂಪ್ ಮೂಲಕವಾಗಿ ಖಾಂಡೆಪಾರ್ ಜಲಶುದಿಟಛೀಕರಣ ಘಟಕಕ್ಕೆ ತರಲಾಗುತ್ತದೆ. ಆದರೆ ಪ್ರಸಕ್ತ ವರ್ಷ ಈ ಘಟಕಕ್ಕೆ ನೀರಿನ ಕೊರತೆಯಾಗಿದೆ.
ಕರ್ನಾಟಕವು ಕಳಸಾ- ಬಂಡೂರಿ ನಾಲೆಯಲ್ಲಿ ಮಹದಾಯಿ ನದಿ ನೀರನ್ನು ಕೆಲ ಪ್ರಮಾಣದಲ್ಲಿ ತಿರುಗಿಸಿಕೊಳ್ಳಲಾಗಿದೆ ಎಂಬ ಪರೋಕ್ಷ ಆರೋಪದೊಂದಿಗೆ ನ್ಯಾಯಾಲಯವು ಕೂಡಲೇ ಈ ಮಧ್ಯಂತರ ಅರ್ಜಿ ವಿಚಾರಣೆ ನಡೆಸಬೇಕೆಂದು ಗೋವಾ ಸರ್ಕಾರ ಮನವಿ ಮಾಡಿದೆ.
ಮಹದಾಯಿ ಪ್ರಕರಣವು ಇತ್ಯರ್ಥಗೊಳ್ಳುವವರೆಗೂ ಕಳಸಾ- ಬಂಡೂರಿ ನಾಲೆ ನಿರ್ಮಾಣ ಕಾರ್ಯ ಕೈಗೊಳ್ಳದಂತೆ ಸವೊìಚ್ಚ ನ್ಯಾಯಾಲಯ ಆದೇಶ ನೀಡಿದ್ದರೂ ಕರ್ನಾಟಕವು ಈ ಆದೇಶ ಉಲ್ಲಂಘಿಸಿದೆ ಎಂದು ಗೋವಾ ನಿಂದನೆ ಅರ್ಜಿಯಲ್ಲಿ ಉಲ್ಲೇಖೀಸಿದೆ. ಕಳೆದ ವಾರವಷ್ಟೇ ಗೋವಾದಿಂದ ಬಂದ ತಂಡ ನಾಲೆಯ ಪರಿಶೀಲನೆ ನಡೆಸಿತು.