Advertisement

ಆನ್‌ಲೈನ್‌ ನೋಂದಣಿಗೆ ಅರ್ಜಿ ಆಹ್ವಾನ

11:00 PM Aug 26, 2019 | Team Udayavani |

ಬೆಂಗಳೂರು: ನರ್ಸಿಂಗ್‌ ಮತ್ತು ಫಿಸಿಯೋಥೆರಪಿ ಸ್ನಾತಕೋತ್ತರ ಕೋರ್ಸ್‌ಗಳ ಆನ್‌ಲೈನ್‌ ನೋಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2019-20ನೇ ಸಾಲಿನಲ್ಲಿ ನರ್ಸಿಂಗ್‌ ಮತ್ತು ಫಿಸಿಯೋಥೆರಪಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಅಲ್ಪಸಂಖ್ಯಾತರ, ಅಲ್ಪಸಂಖ್ಯಾತರೇತರ ಕಾಲೇಜುಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟಾದ ಸೀಟಿಗೆ ಅರ್ಜಿ ಆಹ್ವಾನಿಸಿದೆ.

Advertisement

ಆಯಾ ಕೋರ್ಸ್‌ಗಳಲ್ಲಿ ಪದವಿ ಪಡೆದಿರುವ ಕರ್ನಾಟಕ ವಿದ್ಯಾರ್ಥಿಗಳು ಆ.27ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ಪಿಜಿ ಪರೀಕ್ಷೆಯು ಸೆ.8ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಸಂಬಂಧ ಎಲ್ಲ ಮಾಹಿತಿ ಪ್ರಾಧಿಕಾರದ ವೆಬ್‌ಸೈಟ್‌ //kea.kar.nic.in ನಿಂದ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next