Advertisement
ಈ ಕುರಿತಂತೆ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ನಲಪಾಡ್ ಸಲ್ಲಿಸಿರುವ ಅರ್ಜಿ ನ್ಯಾ. ಕೆ.ಎಸ್. ಮುದಗಲ್ ಅವರಿದ್ದ ರಜಾ ಕಾಲದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.
Related Articles
Advertisement
ಆಗ ನಿಮ್ಮ ಕಕ್ಷಿದಾರ ಯಾವಾಗ ಮೆಕ್ಕಾ ಯಾತ್ರೆಗೆ ತೆರಳಬೇಕಿದೆ ಎಂದು ಅರ್ಜಿದಾರರ ಪರ ವಕೀಲರಿಗೆ ನ್ಯಾಯಪೀಠ ಪ್ರಶ್ನಿಸಿತು. ಅದಕ್ಕೆ ಮೇ 4ರಂದು ಎಂದು ವಕೀಲರು ಉತ್ತರಿಸಿದರು.
ಅರ್ಜಿ ಪರಿಶೀಲನೆ ವೇಳೆ ಮೇ 2ರಂದು ಮೆಕ್ಕಾಗೆ ಹೋಗಬೇಕು ಎಂದು ಇರುವುದನ್ನು ಗಮನಿಸಿ, “ನೀವು ಇಲ್ಲಿ ನಾಳೆ (ಮೇ 4) ಎಂದು ಹೇಳುತ್ತಿದ್ದೀರಿ. ಆದರೆ, ಅರ್ಜಿಯಲ್ಲಿ ಮೇ 2 ಎಂದಿದೆಯಲ್ಲಾ’ ಎಂದು ಪ್ರಶ್ನಿಸಿದ ನ್ಯಾಯಪೀಠ, ಅಷ್ಟಕ್ಕೂ ಈಗ ಕಲಾಪದ ಅವಧಿ ಮುಗಿದಿದೆ ಎಂದು ಹೇಳಿ ಅರ್ಜಿ ವಿಚಾರಣೆಯನ್ನು ಮೇ 8ಕ್ಕೆ ಮುಂದೂಡಿತು.
ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್‌ಗೆ ಶರತ್ತುಬದ್ಧ ಜಾಮೀನು ನೀಡಿದ್ದ ವಿಚಾರಣಾ ನ್ಯಾಯಾಲಯ ದೇಶ ಬಿಟ್ಟು ತೆರಳದಂತೆ ಶರತ್ತು ವಿಧಿಸಿತ್ತು.