Advertisement

Supreme; ಎಲ್ಲ ಮಹಿಳೆಯರಿಗೂ ಕೌಟುಂಬಿಕ ದೌರ್ಜನ್ಯತಡೆ ಕಾಯ್ದೆ ಅನ್ವಯ

02:29 AM Sep 27, 2024 | Team Udayavani |

ಹೊಸದಿಲ್ಲಿ: ಯಾವುದೇ ಧರ್ಮ ಅಥವಾ ಸಾಮಾ ಜಿಕ ಹಿನ್ನೆಲೆಯಿದ್ದರೂ ಭಾರತದ ಎಲ್ಲ ಮಹಿಳೆಯರಿಗೆ 2005ರ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅನ್ವಯ­ವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಗುರು­ವಾರ ಹೇಳಿದೆ. ಕರ್ನಾಟಕ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ. ಈ ಕಾಯ್ದೆಯು ನಾಗರಿಕ ಸಂಹಿತೆಯಾಗಿದ್ದು, ಭಾರತದ ಎಲ್ಲ ಮಹಿಳೆ­ಯರಿಗೆ ಅನ್ವಯವಾಗುತ್ತದೆ. ಸಂವಿಧಾನದಡಿಯಲ್ಲಿ ಆಕೆಗೆ ನೀಡಿರುವ ಹಕ್ಕುಗಳನ್ನು ಇದು ಖಾತ್ರಿಪಡಿ­ಸುತ್ತದೆ. ಜತೆಗೆ ಈ ಕಾಯ್ದೆ ಕೌಟುಂಬಿಕ ಸಂಬಂಧದಲ್ಲಿ ಸಂಭವಿಸುವ ದೌರ್ಜನ್ಯದಿಂದ ಮಹಿಳೆಗೆ ರಕ್ಷಣೆ ಒದಗಿಸುತ್ತದೆ ಎಂದು ನ್ಯಾ| ಬಿ.ವಿ.ನಾಗರತ್ನ ಮತ್ತು ಎನ್‌.ಕೋಟಿಸ್ವರ್‌ ಸಿಂಗ್‌ ಅವರಿದ್ದ ಪೀಠ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next