ವಾಷಿಂಗ್ಟನ್: ಕೆಲವೊಂದು ತುರ್ತು ಸಂದರ್ಭಗಳಲ್ಲಿ ನೀವು ಸಂಕಷ್ಟದಲ್ಲಿದ್ದಾಗ ನಿಮ್ಮ ತೀರಾ ಹತ್ತಿರದ ಸಂಬಂಧಿಕರಿಗೆ ನಿಮ್ಮ ಮೊಬೈಲ್ ಫೋನ್ ತಾನೇ ತಾನಾಗಿ ಮಾಹಿತಿ ನೀಡುವಂತಿದ್ದರೆ ಹೇಗೆ? ಇನ್ನು, ನೀವು ಪ್ರಯಾಣಿಸುತ್ತಿರುವ ವಾಹನ ನಿರ್ಜನ ಪ್ರದೇಶದಲ್ಲಿ, ಮೊಬೈಲ್ ಸಿಗ್ನಲ್ ಗಳು ಇಲ್ಲದಂಥ ಜಾಗದಲ್ಲಿ ಅಪಘಾತಕ್ಕೀಡಾದಾಗ ನಿಮ್ಮ ಪರಿಸ್ಥಿತಿ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಆಸ್ಪತ್ರೆಗೆ ನಿಮ್ಮ ಪೋನ್ ಸ್ವಯಂಚಾಲಿತವಾಗಿ ಮಾಹಿತಿ ನೀಡುವಂತಿಲ್ಲರೆ ಹೇಗೆ?
ಇದನ್ನೂ ಓದಿ:ಮಹಿಳೆಯ ಆತ್ಮಹತ್ಯೆಗೆ ಕಾರಣವಾಯ್ತು ‘ಪಾನಿ ಪುರಿ’
ಇಂಥ ತಾಂತ್ರಿಕ ಸೌಲಭ್ಯಗಳನ್ನು ಮುಂದೆ ಬರಲಿರುವ ತನ್ನ ಮೊಬೈಲ್ ಫೋನ್‌ಗಳಲ್ಲಿ ನೀಡಲು ಆ್ಯಪಲ್ ಸಂಸ್ಥೆ ನಿರ್ಧರಿಸಿದೆ. ಈ ಕುರಿತಂತೆ ಈಗಾಗಲೇ ಸಂಶೋಧನೆಗಳನ್ನು ಕಂಪನಿ ಆರಂಭಿಸಿದ್ದು, ಉಪಗ್ರಹ ಆಧಾರಿತ ಸೇವೆಗಳನ್ನು ಮೊಬೈಲ್‌ಗೆ ನೀಡುವ ಮಹದೋದ್ದೇಶವನ್ನು ಸಂಸ್ಥೆ ಹೊಂದಿರುವುದಾಗಿ ಮೂಲಗಳು ತಿಳಿಸಿವೆ.
ಟೆಸ್ಲಾದ 4 ಕಾರು ಮಾಡೆಲ್‌ಗಳಿಗೆ ಒಪ್ಪಿಗೆ
ಬಹುನಿರೀಕ್ಷಿತ ಟೆಸ್ಲಾ ಕಾರುಗಳು ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಕಾಲಿಡಲು ಕಾಲ ಕೂಡಿಬಂದಿದೆ. ಆ ಕಂಪನಿಯ ನಾಲ್ಕು ಕಾರುಗಳ ಗುಣಮಟ್ಟಕ್ಕೆ ಕೇಂದ್ರದ ಮಾನ್ಯತೆ ಸಿಕ್ಕಿರುವುದಾಗಿ “ಬ್ಲೂಮ್‌ಬರ್ಗ್’ ಜಾಲತಾಣ ಪ್ರಕಟಿಸಿದೆ. ಭಾರತೀಯ ಮಾರುಕಟ್ಟೆಗೆ ಕಾಲಿಡಲಿರುವ ನಾಲ್ಕು ಮಾದರಿಗಳಿಗೆ ಭಾರತ ಸರ್ಕಾರ ಒಪ್ಪಿಗೆ ನೀಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.