Advertisement

ಆ್ಯಪಲ್‌ ಏರ್‌-ಪಾಡ್‌ ಬಿಡುಗಡೆ : ಆ್ಯಪಲ್‌ ಗ್ರಾಹಕರ ಬಹು ದಿನಗಳ ನಿರೀಕ್ಷೆಗೆ ಸಿಕ್ಕಿದ ಉತ್ತರ

10:17 AM Oct 30, 2019 | Hari Prasad |

ಹೊಸದಿಲ್ಲಿ: ಎಲೆಕ್ಟ್ರಾನಿಕ್‌ ಉಪಕರಣಗಳ ಖ್ಯಾತ ಕಂಪನಿ ಆ್ಯಪಲ್‌, ತನ್ನ ಗ್ರಾಹಕರು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಏರ್‌ ಪಾಡ್ಸ್‌ ಪ್ರೋ ಎಂಬ ವೈರ್‌ಲೆಸ್‌ ಲಿಸ ನಿಂಗ್‌ ಉತ್ಪನ್ನ ಬಿಡುಗಡೆ ಮಾಡಿದೆ. ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಆ್ಯಪಲ್‌ನ ವೈರ್‌ಲೆಸ್‌ ಕೇಳುವಿಕೆಯ ಉತ್ಪನ್ನಗಳಿಗಿಂತ ಇವು ಹೆಚ್ಚಿನ ಬೆಲೆಯುಳ್ಳದ್ದು. ಭಾರತದಲ್ಲಿ ಈಗ ಲಭ್ಯವಿರುವ ಆ್ಯಪಲ್‌ ಇರ್ಯ ಬಡ್ಸ್‌ ಎಂಬ ವೈರ್‌ಲೆಸ್‌ ಉತ್ಪನ್ನಕ್ಕೆ 18 ಸಾವಿರ ರೂ. ಆಗಿದ್ದರೆ, ಅದೇ ಹೆಸರಿನಡಿ ಹೊಸದಾಗಿ ಬಿಡು ಗಡೆಗೊಂಡಿರುವ ಏರ್‌ ಪಾಡ್ಸ್‌ ಪ್ರೋ 24 ಸಾವಿರ ರೂ. ಮೌಲ್ಯದ್ದು ಎಂದು ಮೂಲಗಳು ತಿಳಿಸಿವೆ. ಸದ್ಯದಲ್ಲೇ ಇದು ಭಾರತಕ್ಕೆ ಲಗ್ಗೆಯಿಡಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

Advertisement

ಆ್ಯಕ್ಟಿವ್‌ ನಾಯ್ಸ್ ಕ್ಯಾನ್ಸಲೇಷನ್‌ ಎಂಬುದು ಈ ಹೊಸ ಉತ್ಪನ್ನದ ಮಹತ್ವದ ಸೌಲಭ್ಯವಾಗಿದ್ದು, ಕೇಳುಗರ ಕಿವಿಗೆ ಅನುಗುಣವಾಗಿ, ಸಂಗೀತದ ಏರಿಳಿತವನ್ನು ಈ ಪರಿಕರವೇ ನಿರ್ಧರಿಸುತ್ತದೆ. ಇದು ಈ ಪರಿಕರದ ಮತ್ತೂಂದು ವೈಶಿಷ್ಟ್ಯ. ಎಚ್‌1 ಎಂಬ ಚಿಪ್‌ ಹೊಂದಿದೆ. ಇದರ ಸಹಾಯದಿಂದ, ಏರ್‌ ಪಾಡ್ಸ್‌ ಪ್ರೋಗಳಿಂದ ಅತ್ಯಂತ ಉತ್ಕೃಷ್ಟ ಧ್ವನಿ ಕೇಳಬಹುದು. ಇವು, ವಾಟರ್‌ಪೂ›ಫ್ ತಂತ್ರ ಜ್ಞಾನ ಹೊಂದಿದೆ. ವೈರ್‌ಲೆಸ್‌ ಚಾರ್ಜಿಂಗ್‌ ಪರಿಕರವಾಗಿದ್ದು, ಒಮ್ಮೆ ಚಾರ್ಜ್‌ ಮಾಡಿದರೆ, 24 ಗಂಟೆ ಕಾರ್ಯನಿರ್ವಹಿಸುತ್ತವೆ ಎಂದು ಹೇಳಲಾಗಿದೆ.

ವಿನ್ಯಾಸದ ಬಗ್ಗೆ ತಮಾಷೆ
ಈ ಏರ್‌ಪಾಡ್‌ ವಿನ್ಯಾಸದ ಬಗ್ಗೆ ಟ್ವಿಟರ್‌ನಲ್ಲಿ ಹಲವರು ಗೇಲಿ ಮಾಡಿದ್ದಾರೆ. ಆ್ಯಪಲ್‌ ಕಂಪನಿಯ ಹೊಸ ಏರ್‌ ಪಾಡ್‌ಗಳು ಹೇರ್‌ ಡ್ರೈಯರ್‌ನಂತಿದೆ ಎಂದು ಅನೇಕರು ಟ್ವೀಟ್‌ ಮಾಡಿದ್ದಾರೆ. ಇನ್ನಷ್ಟು ಮಂದಿ ಇದು ಕೊಕ್ಕರೆಯ ಮೂತಿಯಂತಿದೆ ಎಂದು ತಮಾಷೆ ಮಾಡಿದ್ದರೆ, ಮತ್ತೆ ಕೆಲವರು, ಹೊಸ ಉಪಕರಣ ತುಂಬಾ ದುಬಾರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next