Advertisement

ಬರಲಿದೆ ಸಿಮ್‌ ಕಾರ್ಡ್‌ ಇಲ್ಲದ ಐ-ಫೋನ್‌ !

07:36 PM Dec 29, 2021 | Team Udayavani |

ಕ್ಯಾಲಿಫೋರ್ನಿಯಾ: ಆ್ಯಪಲ್‌ ಸಂಸ್ಥೆಯು ಸಿಮ್‌ ಕಾರ್ಡ್‌ ಅಗತ್ಯತೆ ಇಲ್ಲದ ಫೋನ್‌ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿಕೊಂಡಿದೆ.

Advertisement

ಮುಂದಿನ ಸೆಪ್ಟೆಂಬರ್‌ಗೆ ಈ ರೀತಿಯ ಸಿಮ್‌ಲೆಸ್‌ ಫೋನ್‌ ಮಾರುಕಟ್ಟೆಗೆ ಬರಲಿದೆ ಎಂದು ಹೇಳಲಾಗಿದೆ. ಆ್ಯಪಲ್‌ ಸಂಸ್ಥೆಯು ಐ-ಫೋನ್‌ 15ರಲ್ಲಿ ಸಿಮ್‌ ಪೋರ್ಟಲ್‌ ತೆಗೆಯಲಿದ್ದು, ಇ-ಸಿಮ್‌ ಅಳವಡಿಕೆಗೆ ಅವಕಾಶ ಮಾಡಿಕೊಡಲಿದೆ ಎಂದು ಈ ಹಿಂದೆ ಸುದ್ದಿಯಾಗಿತ್ತು.

ಆದರೆ ಈಗ ಐ-ಫೋನ್‌ 15ರ ಬದಲು ಐ-ಫೋನ್‌ 14ರಲ್ಲೇ ಈ ಫೀಚರ್‌ ಆರಂಭವಾಗಲಿದೆ. ಐ-ಫೋನ್‌ 14ರಲ್ಲಿ ಸಿಮ್‌ ಸ್ಲಾಟ್‌ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಐ-ಫೋನ್‌ 14ರಲ್ಲಿ ವಿಶೇಷವಾಗಿ ಕ್ಯೂಎಲ್‌ಸಿ ಫ್ಲ್ಯಾಷ್‌ ಸ್ಟೋರೇಜ್‌ ಬಳಸಲಾಗುವುದು. ಇದರಿಂದಾಗಿ ಫೋನಿನ ಸ್ಟೋರೇಜ್‌ ಸಾಮರ್ಥ್ಯ 2ಟಿಬಿಗೆ ಏರಲಿದೆ.

ಇದನ್ನೂ ಓದಿ:ಅಂಕೋಲಾ: ಹಿರಿಯ ಕಾರ್ಯಕರ್ತರನ್ನು ಭೇಟಿಯಾಗಿ ಕುಶಲೋಪಚರಿ ವಿಚಾರಿಸಿದ ಸ್ಪೀಕರ್ ಕಾಗೇರಿ

Advertisement

ಈ ಫೋನಿನಲ್ಲಿ 48ಎಂಪಿ ಕ್ಯಾಮರಾ ಅಳವಡಿಕೆ ಮಾಡುವುದಾಗಿಯೂ ವರದಿಯಿದೆ.

Advertisement

Udayavani is now on Telegram. Click here to join our channel and stay updated with the latest news.

Next