ನವದೆಹಲಿ: ಉಕ್ರೇನ್ ಮೇಲೆ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ರಷ್ಯಾದ ಮಾರುಕಟ್ಟೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿರುವ ಆ್ಯಪಲ್ ಕಂಪನಿ ತನ್ನ ದೈನಂದಿನ ಐಫೋನ್ ಮಾರಾಟದ ಆದಾಯದಲ್ಲಿ ಪ್ರತಿದಿನ ಕನಿಷ್ಠ 3 ಮಿಲಿಯನ್ ಡಾಲರ್ ಅಥವಾ ವಾರ್ಷಿಕವಾಗಿ 1.14 ಬಿಲಿಯನ್ ಡಾಲರ್ ನಷ್ಟು ನಷ್ಟ ಅನುಭವಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಗಂಡು ಮಗು ಬೇಕೆಂದು 7 ದಿನದ ಹೆಣ್ಣು ಮಗುವನ್ನು ಗುಂಡಿಟ್ಟು ಕೊಂದ ತಂದೆ
ಲುಥೇನಿಯಾ ಮೂಲದ ಆನ್ ಲೈನ್ ಶಾಪಿಂಗ್ ಪೋರ್ಟಲ್ ಬುರ್ಗಾದ ಅಂದಾಜಿನ ಪ್ರಕಾರ, ಈ ಮೊತ್ತವು ಆ್ಯಪಲ್ ಕಂಪನಿಯ ಇತ್ತೀಚೆಗೆ ರಷ್ಯನ್ ಮಾರುಕಟ್ಟೆ ಪಾಲು ಮತ್ತು ಕಂಪನಿಯ 2021ರ ಮಾರಾಟದ ಆದಾಯವನ್ನು ಆಧರಿಸಿರುವುದಾಗಿ ಹೇಳಿದೆ.
ಗಮನಾರ್ಹ ಸಂಗತಿ ಏನೆಂದರೆ ರಷ್ಯಾ ಈ ಹಿಂದೆ ರಷ್ಯಾದಂತಹ ಕಂಪನಿಗಳಿಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಿತ್ತು. ಇತ್ತೀಚೆಗೆ ಸರ್ಕಾರದ ನಿಯಮಾನುಸಾರ ಆ್ಯಪಲ್ ಕಂಪನಿ ರಷ್ಯಾದಲ್ಲಿ ಆನ್ ಲೈನ್ ಸೇವೆಯ ಕಚೇರಿಗಳನ್ನು ತೆರೆದಿತ್ತು ಎಂದು ವರದಿ ವಿವರಿಸಿದೆ.
ಆ್ಯಪಲ್ ಕಂಪನಿಯ ನಿರ್ಗಮನದಿಮದ ರಷ್ಯಾದಲ್ಲಿನ ಐ ಫೋನ್ ಗಳ ಮಾರಾಟದ ಬೇಡಿಕೆಯ ಮೇಲೆ ಪರಿಣಾಮ ಬೀಳಬಹುದಾಗಿದೆ. ರಷ್ಯಾದಲ್ಲಿ ಆ್ಯಪಲ್ ಸ್ಮಾರ್ಟ್ ಫೋನ್ ಮಾರಾಟದಲ್ಲಿ 3ನೇ ಸ್ಥಾನದಲ್ಲಿರುವುದಾಗಿ ಬುರ್ಗಾ ಅಂಕಿಅಂಶ ತಿಳಿಸಿದೆ.
ರಷ್ಯಾದಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಮಾರಾಟದಲ್ಲಿ ಮೊದಲ(ಶೇ.34ರಷ್ಟು) ಸ್ಥಾನದಲ್ಲಿದ್ದು, ಚೀನಾದ ಕ್ಸಿಯೊಮಿ ಎರಡನೇ (ಶೇ.26) ಸ್ಥಾನದಲ್ಲಿರುವುದಾಗಿ ವರದಿ ತಿಳಿಸಿದೆ.