Advertisement

ಆ್ಯಪಲ್‌ ಐಪ್ಯಾಡ್‌ ಉತ್ಪಾದನೆ ಭಾರತದಲ್ಲಿ?

12:14 AM Feb 19, 2021 | Team Udayavani |

ಹೊಸದಿಲ್ಲಿ : ದೇಶದ ಕಂಪ್ಯೂಟರ್‌ ಉತ್ಪನ್ನಗಳ ರಫ್ತನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಅನುಷ್ಠಾನಕ್ಕೆ ತರಲಿರುವ ನೂತನ ಯೋಜನೆಯಲ್ಲಿ ಪಾಲ್ಗೊಳ್ಳಲು ಆ್ಯಪಲ್‌ ಇಂಕ್‌ ಪ್ರಯತ್ನಿಸುತ್ತಿದ್ದು, ಇದು ಐಪ್ಯಾಡ್‌ ಟ್ಯಾಬ್ಲೆಟ್‌ ಉತ್ಪಾದನೆಯನ್ನು ಚೀನದಿಂದ ಭಾರತಕ್ಕೆ ವರ್ಗಾಯಿಸುವ ಪ್ರಯತ್ನದ ಭಾಗ ಎಂದು ಮೂಲಗಳು ವರದಿ ಮಾಡಿವೆ.

Advertisement

ಸರಕಾರವು ಕಳೆದ ವರ್ಷ ಸ್ಮಾರ್ಟ್‌ಫೋನ್‌ ರಫ್ತು ಹೆಚ್ಚಿಸುವುದಕ್ಕಾಗಿ 760 ಕೋಟಿ ಡಾಲರ್‌ ಮೊತ್ತದ ಯೋಜನೆಯನ್ನು ಪ್ರಕಟಿಸಿತ್ತು. ಆ್ಯಪಲ್‌ ಇದರಲ್ಲಿ ತನ್ನ ಗುತ್ತಿಗೆ ಉತ್ಪಾದಕರ ಮೂಲಕ ಭಾಗವಹಿಸಿದ್ದು, ಭಾರತದಲ್ಲಿ ಐಫೋನ್‌ ಉತ್ಪಾದನೆಯನ್ನು ಹೆಚ್ಚಿಸುತ್ತ ಬಂದಿದೆ. ಐಟಿ ಉತ್ಪನ್ನಗಳ ಸ್ಥಳೀಯ ಉತ್ಪಾದನೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಸರಕಾರವು ಹೊಸ ಯೋಜನೆ ಜಾರಿಗೆ ತರಲು ಉದ್ದೇಶಿಸಿದೆ. ಅದರಲ್ಲಿ ದೊಡ್ಡ ಪಾಲು ಪಡೆದುಕೊಳ್ಳಲು ಆ್ಯಪಲ್‌ ಲಾಬಿ ನಡೆಸುತ್ತಿದೆ.

ಮುಂದಿನ ವಾರ ವಿಸ್ಟ್ರಾನ್‌ ಕಾರ್ಯಾರಂಭ
ಕಳೆದ ಡಿ. 12ರಿಂದ ಮುಚ್ಚುಗಡೆಯಾಗಿದ್ದ ಐಫೋನ್‌ ಉತ್ಪಾದಕ ವಿಸ್ಟ್ರಾನ್‌ ಘಟಕವು ಮುಂದಿನ ವಾರದಿಂದ ಕಾರ್ಯಾರಂಭಿಸಲಿದೆ ಎಂದು ಸಚಿವ ಜಗದೀಶ್‌ ಶೆಟ್ಟರ್‌ ಗುರುವಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next