ವಾಷಿಂಗ್ಟನ್: ಆ್ಯಪಲ್ ಸಂಸ್ಥೆ ಇದೀಗ ಒಂದು ಹೆಜ್ಜೆ ಮುಂದಿರಿಸಿ ಆ್ಯಪಲ್ ಫೇಸ್ ಮಾಸ್ಕ್ ತಯಾರಿಕೆಯಲ್ಲಿ ತೊಡಗಿದೆ. ಹೌದು, ಇಲ್ಲಿಯವರೆಗೂ ಐಪೋನ್, ಐಪ್ಯಾಡ್ ಮುಂತಾದವುಗಳ ತಯಾರಿಕೆ ಮತ್ತು ಮಾರಾಟದಲ್ಲಿ ಛಾಪು ಮೂಡಿಸಿದ್ದ ಆ್ಯಪಲ್, ಫೇಸ್ ಮಾಸ್ಕ್ ಗಳನ್ನು ತನ್ನ ಸಿಬ್ಬಂದಿಗಾಗಿ ಅಭಿವೃದ್ಧಿಪಡಿಸಿದೆ.
ಆ್ಯಪಲ್ ಸಂಸ್ಥೆ ಆರಂಭಿಕ ಹಂತದಲ್ಲಿ ತನ್ನ ಸಿಬ್ಬಂದಿಗಳ ಉಪಯೋಗಕ್ಕಾಗಿ ಮಾತ್ರ ಫೇಸ್ ಮಾಸ್ಕ್ ತಯಾರಿಸಿದ್ದು, ಮುಂದಿನ ದಿನಗಳಲ್ಲಿ ಕಾರ್ಪೋರೇಟ್ ಕಚೇರಿಗಳಿಗೆ ಮತ್ತು ರಿಟೇಲ್ ಸಿಬ್ಬಂದಿಗಳಿಗೆ ಪೂರೈಕೆ ಮಾಡಲಿದೆ ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ ಆ್ಯಪಲ್ ಎರಡು ಮಾದರಿಯ ಫೇಸ್ ಮಾಸ್ಕ್ ತಯಾರಿಸಿದೆ. ಒಂದು ಆ್ಯಪಲ್ ಫೇಸ್ ಮಾಸ್ಕ್ ಮತ್ತೊಂದು ಕ್ಲಿಯರ್ ಮಾಸ್ಕ್. ಅದಾಗ್ಯೂ ಕಂಪೆನಿಯು ಈ ಹಿಂದೆಯೂ ಕೂಡ ಫೇಸ್ ಶೀಲ್ಡ್ ಗಳನ್ನು ತಯಾರಿಸಿ ಪೂರೈಸಿರುವುದನ್ನು ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ: ಪ್ಲೇಸ್ಟೋರ್ ನಲ್ಲಿ ಜೋಕರ್ ಮಾಲ್ವೇರ್ ಹಾವಳಿ: ಕೂಡಲೇ ಈ 6 ಆ್ಯಪ್ uninstall ಮಾಡಿ !
ಗಮನಾರ್ಹ ಸಂಗತಿಯೆಂದರೇ ಆ್ಯಪಲ್ ಇಂಜಿನಿಯರಿಂಗ್ ಮತ್ತು ಇಂಡಸ್ಟ್ರೀಯಲ್ ಡಿಸೈನ್ ಟೀಮ್ ಈ ಫೇಸ್ ಮಾಸ್ಕ್ ಅಭಿವೃದ್ಧಿಪಡಿಸಿದೆ. ಇದೇ ತಂಡ ಐಫೋನ್ ಮತ್ತು ಐಪ್ಯಾಡ್ ಗಳನ್ನುವಿನ್ಯಾಸಗೊಳಿಸಿದ್ದವು. ಈ ಫೇಸ್ಮಾಸ್ಕ್ ಮೂರು ಪದರಗಳನ್ನು ಹೊಂದಿದ್ದು, ಸರಾಗವಾಗಿ ಉಸಿರಾಡಬಹುದು. ಇದನ್ನು ತೊಳೆದು ಐದು ಬಾರಿ ಮರುಬಳಕೆ ಮಾಡಬಹುದು.
ಬಂತು ಆ್ಯಪಲ್ ಫೇಸ್ ಮಾಸ್ಕ್: ಐಪೋನ್, ಐಪ್ಯಾಡ್ ನಂತೆ ಆ್ಯಪಲ್ ಸಂಸ್ಥೆಯಿಂದ ಹೊಸ ಉತ್ಪನ್ನ !
Related Articles
ಈ ಮಾಸ್ಕ್ ವಿಭಿನ್ನವಾಗಿದ್ದು ಬಳಕೆದಾರರ ಮೂಗು ಮತ್ತು ಗಲ್ಲಕ್ಕೆ ಸರಿಹೊಂದುವಂತೆ ರೂಪಿಸಲಾಗಿದೆ. ಮಾಸ್ಕ್ ತಯಾರಿಸುವ ಮುನ್ನ ಹಲವು ಬಾರಿ ಸಂಶೋಧನೆ ಮಾಡಲಾಗಿದ್ದು, ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇನ್ನು ಎರಡು ವಾರಗಳಲ್ಲಿ ಎಲ್ಲಾ ಆ್ಯಪಲ್ ಉದ್ಯೋಗಿಗಳಿಗೆ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:ಗೂಗಲ್ ಫೋನ್ ಹೊಸ ಫೀಚರ್: ಇನ್ನು ಯಾರು, ಏಕೆ ಕರೆ ಮಾಡುತ್ತಿದ್ದಾರೆ ಎಲ್ಲವೂ ತಿಳಿಯಲಿದೆ !
ಆದರೇ ಈ ಆ್ಯಪಲ್ ಮಾಸ್ಕ್ ಸಾರ್ವಜನಿಕರಿಗೆ ದೊರೆಯಲಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.