Advertisement

ಭಾರತದಲ್ಲಿ ಐಫೋನ್ ಉತ್ಪಾದನೆ ಆರಂಭ: ಕಡಿಮೆ ಬೆಲೆಗೆ ಸಿಗಲಿದೆಯೇ ಆ್ಯಪಲ್ ?

07:22 AM Oct 23, 2019 | Mithun PG |

ಚೆನ್ನೈ: ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿರುವ ಆ್ಯಪಲ್ ತನ್ನ ಜನಪ್ರಿಯ ಐಫೋನ್ ಸರಣಿಯನ್ನು ಭಾರತದಲ್ಲೆ ಉತ್ಪಾದನೆ  ಮಾಡಲು ಆರಂಭಿಸಿದೆ ಎಂದು ವರದಿಯಾಗಿದೆ.

Advertisement

ಈಗಾಗಲೇ ಚೆನ್ನೈನಲ್ಲಿ ಐಫೋನ್ ಎಕ್ಸ್  ಆರ್ ಉತ್ಪಾದನಾ ಘಟಕ ಆರಂಭವಾಗಿದ್ದು, ಐಫೋನ್ ಎಸ್ ಇ, ಐಫೋನ್ 7, ಐಫೋನ್ 6 ಸೇರಿದಂತೆ ಹಳೆಯ ಮಾದರಿಗಳ ಫೋನ್ ಗಳ ಉತ್ಪಾದನೆಯನ್ನು ಜೊತೆಯಲ್ಲಿಯೇ ಮಾಡಲಾಗುವುದು ಎಂದು ವರದಿ ತಿಳಿಸಿದೆ.

ಅಮೇರಿಕಾ ಮತ್ತು ಚೀನಾ ನಡುವಿನ ವಾಣಿಜ್ಯ ಸಮರದಿಂದಾಗಿ ಭಾರತದಲ್ಲೂ ಐಫೋನ್ ಉತ್ಪಾದನಾ ಘಟಕವನ್ನು ಆರಂಭಿಸಲಾಗುವುದು  ಎಂದು ಆ್ಯಪಲ್ ಸಂಸ್ಥೆ ಈ ಹಿಂದೆಯೇ ತಿಳಿಸಿತ್ತು. ಇದರಿಂದ ಆ್ಯಪಲ್ ಉತ್ಪನ್ನಗಳಿಗಾಗಿ ಚೀನಾ ಮೇಲಿನ ಅವಲಂಬನೆ ಕೂಡ ತಪ್ಪಲಿದೆ. ಜೊತೆಗೆ ಬೆಲೆ ಏರಿಕೆಯಾಗುವುದು ಕೂಡ ತಪ್ಪಲಿದೆ.  ಭಾರತದಲ್ಲಿ ತಯಾರಾಗುವ ಆ್ಯಪಲ್ ಉತ್ಪನ್ನಗಳು ಮೆಕ್ಸಿಕೊ, ವಿಯೇಟ್ನಾಂ , ಇಂಡೋನೇಷ್ಯಾ, ಮಲೇಷಿಯಾ, ಮುಂತಾದ ದೇಶಗಳಿಗೆ ರಫ್ತು ಮಾಡಲಾಗುವುದೆಂದು ಕಂಪೆನಿ ತಿಳಿಸಿದೆ.

ಭಾರತದಲ್ಲಿ ಐಫೋನ್ ಗಳಿಗೆ ಭಾರೀ ಬೇಡಿಕೆಯಿರುವುದರಿಂದ ದೇಶದಲ್ಲೇ ಫೋನ್ ಗಳ ತಯಾರಿಕೆ ಕಂಪೆನಿ ನಿರ್ಧರಿಸಿದೆ.  ಮಾತ್ರವಲ್ಲದೆ ಭಾರತ ಸರ್ಕಾರವು ಮೇಕ್ ಇನ್ ಇಂಡಿಯಾ ಯೋಜನೆ ಜೊತೆ ಶೇ.30 ರಷ್ಟು ಉತ್ತಪನ್ನಗಳನ್ನು ಭಾರತದಲ್ಲೇ ತಯಾರಿಸಬೇಕೆಂಬ ನಿಯಮ ರೂಪಿಸಿತ್ತು. ಭಾರತದಲ್ಲಿ ಉತ್ಪಾದನೆ ಮಾಡುವುದರಿಂದ ಆಮದು ಸುಂಕ ಕೂಡ ಕಡಿತವಾಗಲಿದೆ. ಇದರಿಂದ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಐಫೋನ್ ದೊರಕುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next