Advertisement

ಹೊಸ ಕೆರೆ ನಿರ್ಮಾಣಕ್ಕೆ ಆಗ್ರಹಿಸಿ ಮನವಿ

03:22 PM Dec 27, 2019 | Suhan S |

ಮುಂಡರಗಿ: ಕೆರೆ ನಿರ್ಮಾಣ ಮಾಡಲು ಆಗ್ರಹಿಸಿ ತಾಲೂಕು ರಕ್ಷಣಾ ವೇದಿಕೆ ಯುವಸೇನೆ, ಜೈಹೋ ಕರ್ನಾಟಕ ಪರಿವರ್ತನಾ ವೇದಿಕೆ ವತಿಯಿಂದ ಪಟ್ಟಣದ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಲಾಯಿತು.

Advertisement

ಡಾ| ನಂಜುಂಡ ವರದಿನ್ವಯ ತಾಲೂಕು ಅತ್ಯಂತ ಹಿಂದುಳಿದಿದೆ. ಮುಂಡರಗಿ-ಡಂಬಳ ಹೋಬಳಿಯ ಮಧ್ಯದಲ್ಲಿನ ಗ್ರಾಮಗಳಿಗೆ ಇವತ್ತಿಗೂ ಜನರಿಗೆ ಕುಡಿಯುವುದಕ್ಕೆ ನೀರಿಲ್ಲ. ಈ ಭಾಗದ ರೈತರು 45 ಎಕರೆ ಜಮೀನನ್ನು ಕೆರೆ ನಿರ್ಮಾಣ ಮಾಡಲು ಒಪ್ಪಿದ್ದರು. ಈ ಜಮೀನಿನಲ್ಲಿ ಕೆರೆ ನಿರ್ಮಿಸಿದರೆ ಅಂತರ್ಜಲಮಟ್ಟ ಹೆಚ್ಚಳ, ರೈತರಿಗೆ ನೀರಾವರಿಗೆ ಅನುಕೂಲವಾಗಲಿದೆ. ಈ ಜಮೀನು ಖರೀದಿಸಿ ಕೆರೆ ನಿರ್ಮಿಸಬೇಕೆಂದು ಸತತ ಜನಪ್ರತಿನಿಧಿಗಳು ಪ್ರಯತ್ನ ಮಾಡಿದರು. ಜಮೀನು ಖರೀದಿ ಹಂತದಲ್ಲಿರುವಾಗ ಚುನಾವಣಾ ನೀತಿ ಸಂಹಿತೆ ಬಂದಿದ್ದರಿಂದಾಗಿ ಈ ಯೋಜನೆ ಕಾಗದದಲ್ಲಿ ಉಳಿಯಿತು. ಈಗಿರುವ ಶಾಸಕರು ಹೆಚ್ಚು ಆಸಕ್ತಿವಹಿಸಿ ಈ ಯೋಜನೆಗೆ ಚಾಲನೆ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ತಾಲೂಕು ಶಿರಸ್ತೇದಾರ ಎಸ್‌.ಎಸ್‌. ಬಿಚ್ಚಾಲಿ ಮನವಿ ಸ್ವೀಕರಿಸಿದರು. ಲಿಂಗರಾಜಗೌಡ ಪಾಟೀಲ, ಸಂತೋಷ ಹಿರೇಮನಿ, ರಾಜಾಭಕ್ಷಿ ಬೆಟಗೇರಿ, ವೆಂಕಣ್ಣ ಮಲ್ಲಾರ್ಜಿ, ರಾಜು ಕಲಾಲ, ಶಮಶುದ್ದೀನ ಗರಡಿಮನಿ, ಬಸವಂತಪ್ಪ ಭಜಂತ್ರಿ, ರಾಮಣ್ಣ ವಾಲಿಕಾರ, ಸಂತೋಷ ಗಡಾದ, ಗುಡದಪ್ಪ ಚಿಕ್ಕಣ್ಣವರ, ಸತ್ಯಪ್ಪ ಮೊರನಾಳ, ವಿನಾಯಕ ಹಿರೇಮಠ, ಸುರೇಶ ಬಂಡಿವಡ್ಡರ, ಶೇಖರಪ್ಪ ಬಳ್ಳಾರಿ, ರಾಮಣ್ಣ ಗರ್ಜಪ್ಪನವರ, ಮುತ್ತು ಬಳ್ಳಾರಿ, ತೌಸೀಪ್‌ ಮಕಾಂದಾರ, ರಾಜಪ್ಪ ಕುರಿ, ಮಹಬೂಬ್‌ ಕಲಕೇರಿ, ಹನಮಂತಪ್ಪ ಗಾರವಾಡ, ಸಣ್ಣಕಾಶೆಪ್ಪ ಕಲಕೇರಿ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next