Advertisement

ಮನೆ ಕುಸಿದು ಮೃತಪಟ್ಟ ವೃದ್ಧೆ ಕುಟುಂಬಕ್ಕೆ ಪರಿಹಾರ ನೀಡಿ

12:46 PM Nov 27, 2021 | Team Udayavani |

ಕೂಡ್ಲಿಗಿ: ತುಪ್ಪಕನಹಳ್ಳಿ ಗ್ರಾಮದಲ್ಲಿ ಮನೆಕುಸಿದು ಮೃತಪಟ್ಟ ವೃದ್ಧೆ ಕುಟುಂಬಕ್ಕೆ ವಸತಿಯೊಂದಿಗೆ 10 ಲಕ್ಷರೂ. ಪರಿಹಾರ ನೀಡಬೇಕು ಎಂದು ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಕೂಡ್ಲಿಗಿ ಸಿಐಟಿಯು ಹಾಗೂ ಸಿಡಬ್ಲೂಎಫೈ ಸಹಯೊಗದಲ್ಲಿ ಕಟ್ಟಡ ಕಾರ್ಮಿಕರು, ಸಿಐಟಿಯು ಕಾರ್ಯದರ್ಶಿ ಹಾಗೂ ಎಸ್‌ಡಿಎಂಸಿ ರಾಜ್ಯ ಮುಖಂಡ ಗುನ್ನಳ್ಳಿ ರಾಘವೇಂದ್ರ ನೇತೃತ್ವದಲ್ಲಿ ತಾಲೂಕಿನ ನಿರಾಶ್ರಿತರಿಗೆ ಯೋಗ್ಯ ಪರಿಹಾರ ಹಾಗೂ ವಸತಿ ಕಲ್ಪಿಸುವಂತೆ ಒತ್ತಾಯಿಸಿ ಕ್ರಮಕ್ಕಾಗಿ ಕಟ್ಟಡ ಕಾರ್ಮಿಕರು ತಹಶೀಲ್ದಾರ್‌ರಿಗೆ ಹಕ್ಕೊತ್ತಾಯ ಪತ್ರ ನೀಡಿದರು.

ರಾಘವೇಂದ್ರ ಮಾತನಾಡಿ, ಪಟ್ಟಣ ಸೇರಿದಂತೆ ತಾಲೂಕಿನಲ್ಲಿರುವ ಪ್ರತಿ ಗ್ರಾಮಗಳಲ್ಲಿ ನಿರಾಶ್ರಿತ ಕುಟುಂಬಗಳಿಗಾಗಿ ಮಳೆಗಾಲದಲ್ಲಿ ಗಂಜಿ ಕೇಂದ್ರ ಪ್ರಾರಂಭಿಸಬೇಕಿದೆ. ಅವರಿಗೆ ಸೂಕ್ತ ವಸತಿ ಕಲ್ಪಿಸಬೇಕು ಮತ್ತು ಗ್ರಾಮದವರಿಗೆ ಪರಿಹಾರ ನೀಡಬೇಕು ಎಂದು ಈ ಮೂಲಕ ತಾಲೂಕಾಡಳಿತಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ ವಿವಿಧೆಡೆಗಳಿಂದ ಬಂದಿದ್ದ ಕಾರ್ಮಿಕ ಮುಖಂಡರು ಹಾಗೂ ಹೋರಾಟಗಾರರು ಹಾಗೂ ವಕೀಲರಾದ ಸಿ. ವಿರುಪಾಕ್ಷಪ್ಪ, ಹೂಲೆಪ್ಪ, ಸತ್ಯಪ್ಪ,ನಾಗರಾಜ, ತಮ್ಮಪ್ಪ, ಬಂಗಾರಪ್ಪ, ಬಸವರಾಜ, ಶಿವರಾಮ, ಅಮರೇಶ, ಮಹದೇವಪ್ಪ, ಅಜೀಜ್‌, ಮಂಜುನಾಥ, ಸಿದ್ದೇಶ, ಯರಿಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next