Advertisement

ಪೌರ ಕಾರ್ಮಿಕರ ದುರ್ಬಳಕೆ ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರ್ ಗೆ ಮನವಿ

07:10 PM Dec 18, 2021 | Team Udayavani |

ಪಿರಿಯಾಪಟ್ಟಣ: ಮಲ ತುಂಬಿದ ಗುಂಡಿಯಲ್ಲಿ ಬರಿಗೈಯಲ್ಲಿ ಕೆಲಸಕ್ಕೆ ಬಳಸಿಕೊಂಡ ಮನೆ ಮಾಲೀಕರನ್ನು ಕಾನೂನು ಪ್ರಕಾರ ಬಂಧಿಸಬೇಕೆಂದು ಒತ್ತಾಯಿಸಿ ಕ ದ ಚ ನ ನಿ ವೇದಿಕೆ ಕಾರ್ಯಕರ್ತರು ಶನಿವಾರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

Advertisement

ಪುರಸಭೆ ವ್ಯಾಪ್ತಿಗೆ ಸೇರಿದ ಕೃಷ್ಣಪುರ ರಸ್ತೆಗೆ ಹೊಂದಿಕೊಂಡಂತೆ ಇರುವ ವಿಜೇಂದ್ರ ಎಂಬುವರ ಖಾಸಗಿ ಮನೆಯಲ್ಲಿ ಯಾವುದೇ ರಕ್ಷಣೆ ಇಲ್ಲದೆ ಪೌರಕಾರ್ಮಿಕರ ಕಾಲೋನಿಯ ಯುವಕರಿಗೆ ಇಲ್ಲಸಲ್ಲದ ಆಮಿಷವೊಡ್ಡಿ ಶುಕ್ರವಾರ ಸಂಜೆ ಸುಮಾರು 8.30 ರ ಸಮಯದಲ್ಲಿ ಕತ್ತಲಲ್ಲಿ ಮಲದ ಗುಂಡಿಗೆ ಇಳಿಸಿ  ಕೆಲಸ ಮಾಡಿಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಕರ್ನಾಟಕ ದಲಿತ ಚಳುವಳಿ ನವನಿರ್ಮಾಣ ವೇದಿಕೆ ಮುಖಂಡ ಸೀಗೂರು ವಿಷಯ ಕುಮಾರ್ ತಿಳಿಸಿದರು.

ತಕ್ಷಣ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಸಪಾಯಿಕರ್ಮಚಾರಿ ಜಾಗೃತ ಸಮಿತಿ ಸದಸ್ಯೆ ಎಚ್.ಕೆ. ಮಹೇಶ್ ಮತ್ತು ಪುರಸಭೆ ಆರೋಗ್ಯ ನಿರೀಕ್ಷಕ ಆದರ್ಶ್ ರವರು ಪುರಸಭೆಯ ಅಧಿಕಾರಿಗಳ ಗಮನಕ್ಕೆ ಬಾರದಂತೆ ಈ ಕೆಲಸ ಮಾಡಿಸುತ್ತಿರುವುದು ಸರಿಯಲ್ಲ ಎಂದು ಮಾಲೀಕರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೆಲಸ ನಿರ್ವಹಿಸುತ್ತಿರುವ ಯುವಕರಿಗೆ ಯಾವುದೇ ರಕ್ಷಣೆ ಇಲ್ಲದೆ ಬರಿಕೈಯಲ್ಲಿ ಕೆಲಸ ಮಾಡುತ್ತಿರುವ ರಾಜೇಶ್. ಮಧು. ವಿಶ್ವ ಎಂಬುವವರಿಂದ ವಿಜೇಂದ್ರ ಎಂಬುವವರಿಗೆ ಸೇರಿದ ಮನೆಯ ಜಾಗದಲ್ಲಿ ಅಂಗನವಾಡಿ ಶಿಕ್ಷಕಿ ನಾಗರತ್ನ ಈ ಕೆಲಸವನ್ನು ಯಾರ ಗಮನಕ್ಕೂ ಬಾರದಂತೆ ಮಾಡುತ್ತಿರುವದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದರೆ ವಿನಹ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಕುಡಿಯುವ ನೀರಿನ ಪೈಪು ಇದೆ ಜಗದಲ್ಲಿ ಹಾಯ್ದು ಹೋಗಿರುವುದರಿಂದ ಈ ಗುಂಡಿಯನ್ನು ಶುದ್ದಿ ಗೊಳಿಸಬೇಕಾಗಿದೆ ಆದ್ದರಿಂದ ಇದನ್ನು ಯುವಕರಿಂದ ಸುದ್ದಿ ಗೊಳಿಸುತ್ತಿರುವದಾಗಿ ಒಪ್ಪಿಕೊಂಡಿದ್ದಾರೆ.

Advertisement

ಈ ರೀತಿಯ ಕೆಲಸ ಮಾಡಬಾರದು ಎಂದು ಸರ್ಕಾರದ ನಿಯಮವಿದ್ದರೂ ಮಲಹೊರುವ ಪದ್ಧತಿ ಇನ್ನೂ ಜೀವಂತವಾಗಿರುವುದು ಇದು ನಾಚಿಕೆಗೇಡಿನ ಸಂಗತಿ ಎಂದರು.

ಕೂಡಲೇ ಮನೆ ಮಾಲೀಕರಾದ ವಿಜೇಂದ್ರ ನನ್ನು ಕಾನೂನು ರೀತಿ ಬಂದಿಸಿ ಮತ್ತು ಅಂಗನವಾಡಿ ಶಿಕ್ಷಕಿ ನಾಗರತ್ನ ರವರನ್ನು ಕೂಡಲೆ ಕೆಲಸದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ತಹಸಿಲ್ದಾರ್ ಕೆ ಚಂದ್ರಮೌಳಿ ರವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಚಳುವಳಿ ನವನಿರ್ಮಾಣ ವೇದಿಕೆ ಮುಖಂಡರಾದ ಟಿ ಈರಯ್ಯ. ಎಚ್ ಡಿ ರಮೇಶ್. ಪಿಪಿ ಮಹದೇವ್. ಭೂತನಹಳ್ಳಿ ಶಿವಣ್ಣ. ಮುತ್ತೂರು ಕುಮಾರ್. ಬೈಲುಕೊಪ್ಪೆ ಕೆ ಶಿವಣ್ಣ. ಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next