Advertisement

ಪೋಲಕಪಳ್ಳಿ ಗ್ರಾಮಕ್ಕೆ ಸೌಕರ್ಯ ಒದಗಿಸಲು ಆಗ್ರಹ

02:59 PM May 13, 2022 | Team Udayavani |

ಚಿಂಚೋಳಿ: ತಾಲೂಕಿನ ಪೋಲಕಪಳ್ಳಿ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವಂತೆ ಅನೇಕ ಸಲ ಸರ್ಕಾರಕ್ಕೆ ಮತ್ತು ಶಾಸಕರಿಗೆ ಮನವಿ ಪತ್ರಗಳನ್ನು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೋಸಿಹೋದ ಗ್ರಾಮದ ಹಿರಿಯ ವಕೀಲ ನಂದಕುಮಾರ ಪಾಟೀಲ ಶಾಸಕರ ಕಾರ್ಯಾಲಯದ ಎದುರು ಮೌನ ಪ್ರತಿಭಟನೆ ಆರಂಭಿಸಿದ್ದಾರೆ.

Advertisement

ತಾಲೂಕು ಕೇಂದ್ರ ಸ್ಥಾನದಿಂದ ಕೇವಲ ಮೂರು ಕಿ.ಮೀ ಅಂತರದಲ್ಲಿರುವ ಪೋಲಕಪಳ್ಳಿ ಗ್ರಾಮದ ಜನರಿಗೆ ಮೂಲ ಸೌಕರ್ಯ ನೀಡುವಂತೆ ಗ್ರಾಪಂ ಕಚೇರಿ, ತಹಶೀಲ್ದಾರ್‌ ಕಚೇರಿ, ಶಾಸಕರ ಕಚೇರಿ ಎದುರು ಅನೇಕ ಸಲ ಸತ್ಯಾಗ್ರಹ ನಡೆಸಲಾಗಿದೆ. ಆದರೆ ಆ ಸಂದರ್ಭದಲ್ಲಿ ಅಧಿಕಾರಿಗಳು, ಶಾಸಕರು ನೀಡಿದ ಆಶ್ವಾಸನೆಯಿಂದ ಸತ್ಯಾಗ್ರಹವನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಯಾವುದೇ ಮೂಲ ಸೌಕರ್ಯಗಳನ್ನು ಮಂಜೂರಿಗೊಳಿಸದೇ ಇರುವುದರಿಂದ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಗ್ರಾಮದ ಮುಖ್ಯರಸ್ತೆ ಡಾಂಬರೀಕರಣ ಮಾಡುವುದು, ಗ್ರಾಮಸ್ಥರಿಗೆ ಶುದ್ಧ ನೀರು ಪೂರೈಕೆ, ಮಹಿಳೆಯರಿಗೆ ಶೌಚಾಲಯ ನಿರ್ಮಾಣ, ಚರಂಡಿ ವ್ಯವಸ್ಥೆ, ಸಿಮೆಂಟ್‌ ರಸ್ತೆ, ಮುಲ್ಲಾಮಾರಿ ನದಿಯಿಂದ ಅಕ್ರಮವಾಗಿ ಮರಳು ದಂಧೆ ನಿಲ್ಲಿಸುವುದು ಸೇರಿದಂತೆ 11 ಬೇಡಿಕೆಗಳ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಶಾಸಕರ ನಿರ್ಲಕ್ಷ್ಯತನ ಗ್ರಾಪಂ ಅಧ್ಯಕ್ಷ ಮತ್ತು ಪಿಡಿಒ ಬೇವಾಬ್ದಾರಿತನ, ಅಧಿಕಾರಿಗಳ ಸುಳ್ಳು ಭರವಸೆಗಳಿಂದ ರೋಸಿಹೋಗಿ ಅನಿವಾರ್ಯವಾಗಿ ಶಾಸಕರ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಯುವ ವಕೀಲ ನಂದಕುಮಾರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next