ಸಂಡೂರು: ತಾಳೂರು ಗ್ರಾಮದಲ್ಲಿ ರಸ್ತೆಗಳ ಮೇಲೆಯೇ ಚರಂಡಿ ನೀರು ಹರಿಯುತ್ತಿದ್ದು ಇಡೀ ಗ್ರಾಮದ ವಿದ್ಯಾರ್ಥಿಗಳು, ಸಾರ್ವಜನಿಕರು, ಅಂಗನವಾಡಿಗೆ ಹೋಗುವ ಮಕ್ಕಳು ಓಡಾಡುವುದು ದುಸ್ತರವಾಗಿದ್ದು ತಕ್ಷಣ ಚರಂಡಿ ದುರಸ್ತಿ ಮಾಡಬೇಕು ಎಂದು ಡಿವೈಎಫ್‌ಐ ಮುಖಂಡ ಗೌಸ್ ಒತ್ತಾಯಿಸಿದರು.
ಅವರು ತಾಲೂಕಿನ ತಾರಾನಗರ ಗ್ರಾಮದಲ್ಲಿ ಮೂಲಭೂತ ಸಮಸ್ಯೆಗಳು ಹೆಚ್ಚಾಗಿದ್ದು ತಕ್ಷಣ ಅವುಗಳನ್ನು ಪರಿಹರಿಸಬೇಕು. ಗ್ರಾಮಕ್ಕೆ ವ್ಯವಸ್ಥಿತವಾದ ರಸ್ತೆ, ಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಇಡೀ ಗ್ರಾಮದ ಜನತೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ತಕ್ಷಣ ಪರಿಹರಿಸುವ ಮೂಲಕ ಸಾರ್ವಜನಿಕರ ಆರೋಗ್ಯ ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಿವೈಎಫ್‌ಐ ಅಧ್ಯಕ್ಷ ಕಾಲೂಬ್ ಅವರು ಮಾತನಾಡಿ, ಈಗಾಗಲೇ ಹೋರಾಟದ ಫಲವಾಗಿ ಗ್ರಾಮಕ್ಕೆ ಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾಯಿತು. ಆದರೆ ಇತರ ಮೂಲಭೂತ ಸಮಸ್ಯೆಗಳು ಮಾತ್ರ ಬಗೆಹರಿಯುತ್ತಿಲ್ಲ. ಹತ್ತಿರದಲ್ಲಿಯೇ ನಾರಿಹಳ್ಳ ಜಲಾಶಯವಿದ್ದರೂ ಸಹ ಕುಡಿಯುವ ನೀರಿಗೆ ಹೋರಾಟ ಮಾಡಬೇಕಾದ ದುಸ್ಥಿತಿ ಬಂದಿದೆ. ಇಡೀ ಗ್ರಾಮ ಚರಂಡಿ ಇಲ್ಲದೆ ಗಬ್ಬುನಾರುತ್ತಿದ್ದು ಜನರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗಿದೆ. ಆದ್ದರಿಂದ ಜನಪ್ರತಿನಿಧಿ ಗಳು, ಅಧಿ ಕಾರಿಗಳು ಗಮನಹರಿಸುವ ಮೂಲಕ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ:ದೇವರಹಳ್ಳಿ ಗ್ರಾಪಂನಲ್ಲಿ “ಕೈ’ ಬೆಂಬಲಿತರ ಆಡಳಿತ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶರಣಬಸವ, ರುದ್ರಪ್ಪ, ಶರಣ, ಡಿವೈಎಫ್‌ಐ ಸದಸ್ಯರುಗಳಾದ ಷರೀಫ್, ಶಂಕರ್, ಅಬ್ದುಲ್, ಮೌಲ, ಕಾಲೂಬ್, ಜಿಲಾನ್, ಗೌಸ್, ಬಾಬು ಶμವುಲ್ಲಾ ಗ್ರಾಮದ ಜನತೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಾಕೀರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.