ಬೆಂಗಳೂರು:ಕೋವಿಡ್ ಅನ್‌ಲಾಕ್ ಹಿನ್ನೆಲೆಯಲ್ಲಿ ಚಿತ್ರಮಂದಿರಗಳನ್ನು ತೆರೆಯಲುಮತ್ತು ಒಳಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡುವಂತೆ ಕರ್ನಾಟಕ ಚಲನಚಿತ್ರವಾಣಿಜ್ಯ ಮಂಡಳಿ ನಿಯೋಗ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ನೀಡಿ ಮನವಿ ಸಲ್ಲಿಸಿತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್ ಜೈರಾಜ್ ನೇತೃತ್ವದನಿಯೋಗ ಚಿತ್ರಮಂದಿರಗಳ ಪುನಾರಂಭ, ಒಳಾಂಗಣ ಚಿತ್ರೀಕರಣಕ್ಕೆ ಅವಕಾಶ ಹಾಗೂಚಿತ್ರ ಮಂದಿರಗಳ ವಿದ್ಯುತ್ ಶುಲ್ಕ, ನೀರಿನ ಶುಲ್ಕ ಮತ್ತು ಆಸ್ತಿ ತೆರಿಗೆಯಲ್ಲಿ ಸಂಪೂರ್ಣವಿನಾಯಿತಿ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿತು.
ಕೋವಿಡ್ ಮೊದಲನೆ ಹಾಗೂ 2ನೇ ಅಲೆ ಹಿನ್ನೆಲೆಯಲ್ಲಿ ಸುಮಾರು 12 ತಿಂಗಳಕಾಲ ಚಿತ್ರಮಂದಿರಗಳು ಸ್ಥಗಿತಗೊಂಡು ಸಾಕಷ್ಟು ಆರ್ಥಿಕ ಸಮಸ್ಯೆ, ಸಂಕಷ್ಟಕ್ಕೆಸಿಲುಕಿದ್ದರೂ ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯ ದೊರಕಿಲ್ಲದಿರುವಸಂದರ್ಭವನ್ನು ಉದ್ಯಮ ಎದುರಿಸಿದೆ. ಇತ್ತೀಚಿಗೆ ನೆರೆ ರಾಜ್ಯಗಳಾದ ತೆಲಂಗಾಣ,ಗುಜರಾತ್, ಆಂಧ್ರಪ್ರದೇಶದಲ್ಲಿ ಚಿತ್ರಮಂದಿರಗಳ ಪುನರಾರಂಭಕ್ಕೆ ಅವಕಾಶಮಾಡಿಕೊಟ್ಟಿದೆ.
ಜತೆಗೆ ಗುಜರಾತ್ ಮತ್ತು ಇತರೆ ರಾಜ್ಯಗಳ ಸರ್ಕಾರಗಳುಚಿತ್ರಮಂದಿರಗಳಿಗೆ ವಿದ್ಯುತ್ ಶುಲ್ಕ, ನೀರಿನ ಶುಲ್ಕ ಹಾಗೂ ಆಸ್ತಿ ತೆರಿಗೆಯಲ್ಲಿ ವಿನಾಯಿತಿನೀಡಿವೆ. ನಮ್ಮ ರಾಜ್ಯದಲ್ಲಿ ವಿನಾಯಿತಿ ನೀಡಬೇಕೆಂದು ಮನವಿ ಮಾಡಿತು.
ಸಿಎಂ ಭೇಟಿ ಬಳಿಕ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಸಿಎಂ ಬಳಿಒಳಾಂಗಣಚಿತ್ರೀಕರಣಕ್ಕೂ ಅನುಮತಿ ಕೇಳಿದ್ದೇವೆ. ನಮ್ಮ ಮನವಿಗೆ ಸ್ಪಂದಿಸಿರುವ ಸಿಎಂ,ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಇನ್ನು 4-5 ದಿನಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದಾರೆ’ ಎಂದರು.
ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿಎನ್. ಎಂ ಸುರೇಶ್, ಉಪಾಧ್ಯಕ್ಷ ಉಮೇಶ್ ಬಣಕಾರ್, ನಾಗಣ್ಣ, ಮಾಜಿ ಅಧ್ಯಕ್ಷಥಾಮಸ್ ಡಿಸೋಜಾ, ನಿರ್ಮಾಪಕರ ಸಂಘದಅಧ್ಯಕ್ಷಪ್ರವೀಣ್‌ಕುಮಾರ್‌ಇತರರಿದ್ದರು.