Advertisement

ಅಯೋಧ್ಯೆ ಸಂಧಾನ ಪ್ರಕ್ರೀಯೆ ಪುನಾರಂಭಕ್ಕೆ ಮನವಿ

10:17 AM Sep 18, 2019 | Team Udayavani |

ನವದೆಹಲಿ: ಅಯೋಧ್ಯೆ ವಿಚಾರದಲ್ಲಿ ಸಂಧಾನ ಪ್ರಕ್ರಿಯೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿ ಒಂದು ತಿಂಗಳು ಕಳೆದ ಬಳಿಕ ಮತ್ತೆ ಮಧ್ಯಸ್ಥಿಕೆ ವಹಿಸಬೇಕು ಎಂಬ ಬೇಡಿಕೆ ಬಂದಿದೆ. ಸುನ್ನಿ ವಕ್ಫ್ ಮಂಡಳಿ, ನಿರ್ವಾಣಿ ಅಖಾಡ ಈ ಬಗ್ಗೆ ಸರ್ವೋನ್ನತ ನ್ಯಾಯಾಲಯದ ಮಧ್ಯಸ್ಥಿಕೆ ಮಂಡಳಿಗೆ ಪತ್ರ ಬರೆದಿವೆ. ಮಂಡಳಿಯ ಮುಖ್ಯಸ್ಥರಾಗಿದ್ದ ನಿವೃತ್ತ ನ್ಯಾಯ ಮೂರ್ತಿ ಎಫ್.ಎಂ.ಐ.ಖಲೀಫ‌ುಲ್ಲಾ ನೇತೃತ್ವದ ಸಮಿತಿ ಅದನ್ನು ಸ್ವೀಕರಿಸಿದೆ. ಸಮಿತಿ ಈಗ ಸುಪ್ರೀಂಕೋರ್ಟ್‌ ನಿರ್ದೇಶನವನ್ನು ಎದುರು ನೋಡುತ್ತಿದೆ.

Advertisement

ವಿರೋಧ: ಈ ನಡುವೆ ಜಮೀನು ಮಾಲೀಕತ್ವ ಕೇಸಿನಲ್ಲಿ ಶ್ರೀರಾಮ ಹುಟ್ಟಿದ ಸ್ಥಳವನ್ನು ಪಾರ್ಟಿಯನ್ನಾಗಿ ಮಾಡುವುದರ ಬಗ್ಗೆ ಮುಸ್ಲಿಂ ಸಂಘಟನೆಗಳು ವಿರೋಧ ಮಾಡಿವೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಸಾಂವಿಧಾನಿಕ ಪೀಠದ ಮುಂದೆ ವಾದಿಸಿದ ರಾಜೀವ್‌ ಧವನ್‌ ವಿವಾದಿತ ಸ್ಥಳದ ಬಗ್ಗೆ ಯಾರೂ ಹಕ್ಕು ಪ್ರತಿಪಾದಿಸದಂತೆ ಇರುವ ಹುನ್ನಾರ ಇದಾಗಿದೆ ಎಂದರು.

ಇದೇ ವೇಳೆ ಅಯೋಧ್ಯೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ಗೆ ವಿಚಾರಣೆ ನಡೆಸಲು ಹಕ್ಕು ಇಲ್ಲ ಎಂದು ವ್ಯಕ್ತಿ ಮುಖ್ಯ ನ್ಯಾಯಮೂರ್ತಿಗಳಿಗೆ 117 ಪತ್ರ ಬರೆದಿದ್ದಾನೆ. ಈ ಬಗ್ಗೆ ಆತ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾನೆ ಎಂದು ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್‌ ಧವನ್‌ ಹೇಳಿದ್ದಾರೆ. ಅದಕ್ಕೆ ನ್ಯಾಯಪೀಠ ಈ ಬಗ್ಗೆ ತಮಗೆ ಅರಿವು ಇಲ್ಲ ಎಂದಿತು.

ಮತ್ತೂಂದೆಡೆ ಅಯೋಧ್ಯೆ ಪ್ರಕರಣದ ವಿಚಾರಣೆಯ ನೇರ ಪ್ರಸಾರ ನಡೆಸಲು ಸಾಧ್ಯವಿದೆಯೇ ಎಂಬ ವಿಚಾರದ ಬಗ್ಗೆ ಪರಿಶೀಲನೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಸುಪ್ರೀಂಕೋರ್ಟ್‌ ರಿಜಿಸ್ಟ್ರಿಗೆ ಸೂಚನೆ ನೀಡಿದ್ದಾರೆ. ಎಷ್ಟು ಸಮಯದ ಅವಧಿಯಲ್ಲಿ ಅದನ್ನು ಜಾರಿಗೊಳಿಸಲು ಸಾಧ್ಯವಿದೆ ಎನ್ನುವುದನ್ನು ಸೂಚಿಸಿ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next