ಚಿಕ್ಕಬಳ್ಳಾಪುರ: ಸ್ವಾತಂತ್ರ್ಯ ಪೂರ್ವದಿಂದಲೂ ಕರ್ನಾಟಕದಲ್ಲಿ ಮಠಗಳು, ಶಿಕ್ಷಣ ಸಂಸ್ಥೆಗಳು ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೆ ಶಾಲೆಗಳನ್ನು ಸ್ಥಾಪಿಸಿ, ಶೈಕ್ಷಣಿಕ ಸೇವೆಯಲ್ಲಿ ತೊಡಗಿಸಿಕೊಂಡಿ ರುವ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಕರ್ನಾಟಕ ರಾಜ್ಯ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳ ಆಡಳಿತ ಮಂಡಳಿ
ಹಾಗೂ ನೌಕರರ ಒಕ್ಕೂಟದ ಪದಾಧಿಕಾರಿ ಗಳು ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಮನವಿ ಸಲ್ಲಿಸಿದ್ದಾರೆ. ಒಕ್ಕೂಟದ ಜಿಲ್ಲಾಧ್ಯಕ್ಷ ನರಸಿಂಹ ಮೂರ್ತಿ ಮಾತನಾಡಿ, ಈ ಹಿಂದೆ 1986 ವರೆಗೆ ಅನುದಾನ ನೀಡಲಾಗಿತ್ತು. ನಂತರ 2006 ರಲ್ಲಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರದ ಅಂದಿನ ಉಪ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪ ಅವರು ಹಾಗೂ ಶಿಕ್ಷಣ ಮಂತ್ರಿ ಹೊರಟ್ಟಿ ಅವರು 1986 ರಿಂದ 1993 ರ ವರೆಗೂ ಅನುದಾನ ವಿಸ್ತರಿಸಿದರು.
2008 ರ ಬಿಜೆಪಿ ಸರ್ಕಾರದಲ್ಲಿ 1993 ರಿಂದ 1995 ರ ವರೆಗೂ ಅಂದಿನ ಶಿಕ್ಷಣ ಮಂತ್ರಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಹ ಅನುದಾನ ನೀಡಿದರು. ಆದರೆ, ಆನಂತರ ಬಂದ ಯಾವುದೇ ಸರ್ಕಾರಗಳು 1995 ರ ನಂತರದ ಶಾಲೆಗಳಿಗೆ ಯಾವುದೇ ರೀತಿಯ ಅನುದಾನ ನೀಡಲಿಲ್ಲ. ಇದರಿಂದ ಸಹಸ್ರಾರು ಶಿಕ್ಷಕರು ವರ್ಗ ಬೀದಿ ಪಾಲಾಗುವ ಹಂತ ತಲುಪಿದ್ದಾರೆ ಎಂದು ಹೇಳಿದ್ದಾರೆ.
ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್. ಎಫ್.ಎಸ್. ಶಾಲೆಯ ಗೋಪಾಲರೆಡ್ಡಿ ಮಾತನಾಡಿದರು.ಕಾರ್ಯದರ್ಶಿ ಮುನಿ ರಾಜು, ಎಸ್.ಎಫ್.ಎಸ್.ಶಾಲೆಯ ಗೋಪಾಲರೆಡ್ಡಿ, ವಿವೇಕಾನಂದ ಶಾಲೆಯ ಶ್ರೀನಿವಾಸ್, ಚಂದ್ರೇಗೌಡ, ನಳಿನಾ, ದಿಲ್‌ಷಾದ್, ಗಂಗಾಧರ್, ಶ್ರೀರಾಮ್, ವೆಂಕಟೇಶ್, ಮಹೇಶ್, ಪ್ರಸನ ° ಕುಮಾರಿ, ವೆಂಕಟೇಶ್ ಮೂರ್ತಿ, ಹರೀಶ್, ಸುಬ್ರಹ್ಮಣಿ ಉಪಸ್ಥಿತರಿದ್ದರು.
ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ 1995 ರ ನಂತರದ ಕನ್ನಡ ಮಾಧ್ಯ ಮ ಶಾಲಾಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವುದು, ವಿದ್ಯಾರ್ಥಿ ಶಿಕ್ಷಕರ ಅನುಪಾತ 1:50 ಜಾರಿಗೊಳಿಸುವುದು, ಖಾಸಗಿ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದ್ದಾರೆ