Advertisement

ಆಳಂದ ತಾಲೂಕಿನ ಕೆರೆ ತುಂಬಿಸಲು ಮನವಿ

08:25 AM Jul 04, 2020 | Suhan S |

ಕಲಬುರಗಿ: ಭೀಮಾ ನದಿಯಿಂದ ಕೆರೆಗಳನ್ನು ತುಂಬಿಸುವ ಯೋಜನೆ ಅಡಿ ಆಳಂದ ತಾಲೂಕಿನ ನಿಂಬಾಳ, ಹಡಲಗಿ, ಝಳಕಿ, ಮದಗುಣಕಿ, ಕೆರೂರ ಹಾಗೂ ಮಾದನಹಿಪ್ಪರಗಾ ಕೆರೆಗಳನ್ನು ಸೇರಿಸುವಂತೆ ಆಳಂದ ಕ್ಷೇತ್ರದ ಶಾಸಕ ಸುಭಾಷ ಗುತ್ತೇದಾರ ಹಾಗೂ ಜಿ.ಪಂ ಸದಸ್ಯ ಗುರುಶಾಂತ ಪಾಟೀಲ ನಿಂಬಾಳ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಗೆ ಮನವಿ ಸಲ್ಲಿಸಿದರು.

Advertisement

ಭೀಮಾ ನದಿಯಿಂದ ಆಳಂದ ತಾಲೂಕಿನ ಅಮರ್ಜಾ ಜಲಾಶಯ ಹಾಗೂ ಆಳಂದ ತಾಲೂಕಿನ ಮೂರು ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭವಾಗಿದೆ. ಹೀಗಾಗಿ ಆಳಂದ ತಾಲೂಕಿನ ಆರು ಕೆರೆಗಳು ಸಹ ಬೇಸಿಗೆ ಬರುವ ಮುಂಚೆ ಒಣಗುತ್ತಿರುವುದರಿಂದ ನೀರು ತುಂಬಿಸುವ ಯೋಜನೆ ಅಡಿ ಸೇರಿಸುವಂತೆ ಸಚಿವರ ಗಮನಕ್ಕೆ ತಂದರು.

ಭೋರಿ ನದಿಯಡಿ ನಿರ್ಮಾಣವಾಗುವ ಏತ ನೀರಾವರಿ ಯೋಜನಾ ಸ್ಥಳದಿಂದ ನೀರು ಹರಿಸುವ ಕಾಮಗಾರಿ ಕೈಗೆತ್ತಿಕೊಳ್ಳುವುದು ಸುಲಭವಾಗಿದೆ. ಹೀಗಾಗಿ ಸಮೀಕ್ಷಾ ವರದಿಗೆ ಕೂಡಲೇ ಇಲಾಖಾಧಿಕಾರಿಗಳಿಗೆ ಸೂಚಿಸುವಂತೆ ಒತ್ತಾಯಿಸಿದರು. ಮನವಿಗೆ ಸ್ಪಂದಿಸಿದ ಸಚಿವರು, ಆಳಂದ ತಾಲೂಕಿನ ಇತರ ಕೆರೆಗಳಿಗೂ ನೀರು ತುಂಬಿಸುವ ನಿಟ್ಟಿನಲ್ಲಿ ಕಾಮಗಾರಿಯ ವಿಸ್ತೃತ ವರದಿ (ಡಿಪಿಆರ್‌) ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಶಾಸಕ ಸುಭಾಷ ಗುತ್ತೇದಾರ ಹಾಗೂ ಗುರುಶಾಂತ ಪಾಟೀಲಗೆ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next