Advertisement

ಡಾ. ಬಿ.ಆರ್. ಅಂಬೇಡ್ಕರ್ ಪ್ರಕರಣ ಫೋಟೋ ತೆರವು ಪ್ರಕರಣ : ಸೂಕ್ತ ಕ್ರಮಕ್ಕೆ ಮನವಿ

02:36 PM Feb 07, 2022 | Team Udayavani |

ಕುಷ್ಟಗಿ: ರಾಯಚೂರು ಜಿಲ್ಲಾ ನ್ಯಾಯಾದೀಶ ಮಲ್ಲಿಕಾರ್ಜುನಗೌಡ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್  ಫೋಟೋ ತೆರವು ಪ್ರಕರಣ ಹಾಗೂ ಹುಮ್ನಾಬಾದ ತಹಶೀಲ್ದಾರ ಡಾ. ಪ್ರದೀಪ್ ಕುಮಾರ ಹಿರೇಮಠ ಅವರ ಮೇಲಿನ ಹಲ್ಲೆ ಖಂಡಿಸಿ, ವೀರ ಮಹೇಶ್ವರ ಕ್ಷೇಮಾಭಿವೃದ್ಧಿ ಸಂಘ, ಬೇಡ ಜಂಗಮ ಸಮಾಜದಿಂದ ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಇಲ್ಲಿನ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಕುಷ್ಟಗಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ಹುಮ್ನಾಬಾದ ತಹಶೀಲ್ದಾರ ಡಾ.ಪ್ರದೀಪ ಕುಮಾರ ಹಿರೇಮಠ ಅವರ ಮೇಲೆ ಗುಂಡಾಗಳು ಕಚೇರಿಗೆ ನುಗ್ಗಿ ಹಲ್ಲೆ ನಡೆಸಿರುವುದು ಕಾರ್ಯಾಂಗದ ಘನತೆ ಕಪ್ಪು ಚುಕ್ಕೆಯಾಗಿದೆ. ಸಂವಿಧಾನದ ಆಶಯಗಳನ್ನು ಅರಗಿಸಿಕೊಳ್ಳದ ಕೆಲವರು ಇಂತಹ ಅಮಾನವೀಯ ಕೃತ್ಯಗಳಿಗೆ ಕೈಹಾಕುತ್ತಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ.

ಮೊದಲಿನಿಂದಲೂ ಬೇಡ ಜಂಗಮ ಸಮಾಜದವರ ಮೇಲೆ ಇಂತಹ ಹಲ್ಲೆಗಳು ನಡೆಯುತ್ತಿದ್ದು, ಜಾತಿ ನಿಂದನೆ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನೋವಿನ ಸಂಗತಿ. ಕೂಡಲೆ ಸರ್ಕಾರ ಎಚ್ಚೆತ್ತುಕೊಂಡು ಹುಮನಾಬಾದ್ ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿರುವವರಿಗೆ ಕಾನೂನು ರೀತಿ ಶಿಕ್ಷೆಯಾಗಬೇಕು. ಇಂತಹ ಘಟನೆಗಳು ನಡೆಯುತ್ತಿರುವುದು ಸುಸಂಸ್ಕೃತ ಮಾನವ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿರುವುದು ಭಯದ ವಾತವರಣ ಮೂಡಿಸಿದೆ. ಇಂತಹ ಘಟನೆಗಳು ಮರುಕಳಿಸಲು ಸರ್ಕಾರ ಅವಕಾಶ ಕಲ್ಪಿಸಬಾರದು ಎಂದು‌ ಒತ್ತಾಯಿಸಿದರು.

ತಹಶೀಲ್ದಾರ ಅನುಪಸ್ಥಿತಿಯಲ್ಲಿ ಗ್ರೇಡ್ 2 ತಹಶೀಲ್ದಾರ ಮುರಲೀಧರ‌‌ ಮೊಕ್ತೆದಾರ ಅವರಿಗೆ ಮನವಿ ಸಲ್ಲಿಸಿದರು ಬೇಡ ಜಂಗಮ ಸಮಾಜದ ಅಧ್ಯಕ್ಷ ಶಿವು ಗಂಧದಮಠ, ಎಸ್.ಎಚ್ ಹಿರೇಮಠ, ಶಂಕ್ರಯ್ಯ ಕಂಪಾಪೂರಮಠ, ದೊಡ್ಡಯ್ಯ ಗದ್ದಡಕಿ, ವಿಜಯಕುಮಾರ ಹಿರೇಮಠ,ಕಿಶೋರ ಹಿರೇಮಠ, ವೀರೇಶಯ್ಯ ಮಠಪತಿ, ವೈಜನಾಥ ಹಿರೇಮಠ, ಶರಣಯ್ಯ ಹಿರೇಮಠ, ಉಮೇಶ ಹಿರೇಮಠ, ವೀರಗಂಗಾಧರ ಹಿರೇಮಠ, ಶೇಖರಯ್ಯ ಹಿರೇಮಠ, ವಿಶ್ವನಾಥ ಹಿರೇಮಠ ‌ಮತ್ತೀತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next