Advertisement

ಅಪ್ಪನ ಜಾತ್ರೆಗೆ ಭಕ್ತರ ಪಾದಯಾತ್ರೆ

07:10 PM Apr 01, 2021 | Team Udayavani |

ಯಾದಗಿರಿ: ಮಹಾದಾಸೋಹಿ ಕಲಬುರಗಿ ಶರಣ ಬಸವೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆ ವಡಗೇರಾ ತಾಲೂಕಿನ ನಾಯ್ಕಲ್‌ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿ ಹಾಗೂ ವೀರಮಾರುತಿ ದೇವಸ್ಥಾನ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಪ್ರತಿ ವರ್ಷದಂತೆ ಪಾದಯಾತ್ರೆ ಆರಂಭಿಸಲಾಯಿತು.

Advertisement

ಗ್ರಾಮದ ಪಾದಯಾತ್ರಿಗಳ ಭಕ್ತರ ತಂಡ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದ ಮುಖಂಡ ಡಾ| ಶರಣಭೂಪಾಲರೆಡ್ಡಿ ನಾಯ್ಕಲ್ ಪಾದಯಾತ್ರಿಗಳ ತಂಡವನ್ನು ಬೀಳ್ಕೊಟ್ಟರು. ಪಾದಯಾತ್ರೆ ತಂಡ ಗ್ರಾಮದಿಂದ ಹೊರಟು ಬಲಕಲ್‌, ಚಟ್ನಳ್ಳಿ, ಇಬ್ರಾಹಿಂಪುರ, ಶಿರವಾಳ, ಅಣಬಿ, ಹೊಸೂರು, ಆಂದೋಲಾ, ಗೂಡೂರ, ಕಟ್ಟಿಸಂಗಾವಿ, ಫರತಾಬಾದ ನಂದಿಕೂರ, ಕೊಟೂರ(ಡಿ) ಮಾರ್ಗವಾಗಿ ಕಲಬುರಗಿಗೆ ಏ.2ರಂದು ಬೆಳಗ್ಗೆ ಶರಣಬಸವೇಶ್ವರ ದೇವಸ್ಥಾನಕ್ಕೆ
ತಲುಪಲಿದ್ದಾರೆ. ಗ್ರಾಮದ ಮುಖ್ಯ ಶಿಕ್ಷಕ ಶರಣಬಸ್ಸಪ್ಪ ನಾಸಿ ಪಾದಯಾತ್ರೆ ನೇತೃತ್ವ ವಹಿಸಿದ್ದಾರೆ.

ಗ್ರಾಮದ ವೇ. ಮೂ. ಕುಮಾರಸ್ವಾಮಿ ಚರ್ತುಚಾರ್ಯಮಠ, ವಿಶ್ವನಾಥಸ್ವಾಮಿ ಚರ್ತುಚಾರ್ಯಮಠ ಹಾಗೂ ಗ್ರಾಮದ ಪ್ರಮುಖರು ಪಾದಯಾತ್ರಿಗಳಿಗೆ ಬೀಳ್ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next