Advertisement
ಸಾಲ ಪಡೆಯೋದು ಸುಲಭ!: ಈ ಆನ್‌ಲೈನ್ ಲೋನ್ ಆ್ಯಪ್‌ಗ್ಳಲ್ಲಿ ಸಾಲ ತೊಗೊಳ್ಳೋದು ಬಹಳ ಸುಲಭ. ನಿಮ್ಮ ಮೊಬೈಲ್‌ನಲ್ಲಿ ಅವರ ಆ್ಯಪ್ ಅನ್ನು ಡೌನ್‌ಲೋಡ್ ಮಾಡುವುದು, ಆ ಸಮಯದಲ್ಲಿ ಅವರು ನಮ್ಮ ಮೊಬೈಲಿನ ಕಾಂಟಾಕ್ಟ್ ಲಿಸ್ಟ್ ಮತ್ತು SMS ಮೆಸೇಜ್‌ಗಳನ್ನು ಓದಲು ನಮ್ಮ ಅನುಮತಿ ಕೋರುತ್ತಾರೆ. ನಾವು ಆ ಕಂಡೀಷನ್‌ಗೆ ಒಪ್ಪಿದರಷ್ಟೆ ಆ್ಯಪ್ ಉಪಯೋಗಿಸಲು ಸಾಧ್ಯವಾಗುವುದು. ನೀವು ಸರಿ ಎಂದು ಒಪ್ಪಿದೊಡನೆಯೇ, ಮುಂದಿನ ಹಂತ, ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಕಾಪಿಗಳನ್ನು ಅಲ್ಲಿ ಲಗತ್ತಿಸುವುದು, ಜತೆಗೆ ನಿಮ್ಮ ಬ್ಯಾಂಕ್ ಅಕೌಂಟ್‌ನ ಮಾಹಿತಿ ನೀಡುವುದು. ಇಷ್ಟು ಮಾಹಿತಿಗಳನ್ನು ನೀವು ಕೊಟ್ಟ ಅರ್ಧ ಗಂಟೆಯಲ್ಲಿ ನಿಮಗೆ ಸಾಲ ಮಂಜೂರಾಗಿ, ನಿಮ್ಮ ಅಕೌಂಟ್‌ಗೆ ಹಣ ಬಂದುಬಿಡುತ್ತದೆ. ಹೆಚ್ಚಿನ ಸಂದರ್ಭದಲ್ಲಿ, ನಿಮ್ಮ ತಿಂಗಳ ಸಂಬಳದಷ್ಟು ಮಾತ್ರ ಸಾಲ ಮಂಜೂರಾಗುತ್ತದೆ.
Related Articles
Advertisement
ಅದು ಚಕ್ರವ್ಯೂಹ: ನಿಮಗೆ ಸಂಬಳ ಬರಲು ಇನ್ನೂ ಇಪ್ಪತ್ತು ದಿವಸಗಳ ಸಮಯವಿದೆ! ಸಂಬಳವೇ ಬರದೆ, ನೀವು ಹೇಗೆ ಹಣ ವಾಪಸ್ ಮಾಡಲು ಸಾಧ್ಯ? ಇಂಥ ಸಂದರ್ಭದಲ್ಲಿ ಮತ್ತದೇ ಆ್ಯಪ್‌ಗ್ಳು ನಿಮ್ಮ ಸಹಾಯಕ್ಕೆ ಬರುತ್ತವೆ. ನೀವು ಇನ್ನೆರಡು ಆ್ಯಪ್‌ಗ್ಳನ್ನು ಡೌನ್‌ಲೋಡ್ ಮಾಡಿಕೊಳ್ಳಿ, ಅವುಗಳಿಂದ ಸಾಲ ಪಡೆಯಿರಿ, ಮೊದಲನೆಯದನ್ನು ತುಂಬಿ ಎಂಬ ಸಲಹೆ ಬರುತ್ತದೆ! ಹೀಗೆ ನಡೆಯುತ್ತದೆ ಈ ಆನ್‌ಲೈನ್ ಮೂಲಕ ಸಾಲ ಕೊಡುವ ಆ್ಯಪ್‌ಗ್ಳ ಹಗಲು ದರೋಡೆ ಕೆಲಸ. ತಿಂಗಳ ಶುರುವಿನಲ್ಲಿ ನೀವು ಪಡೆದ ಹತ್ತು ಸಾವಿರ ಸಾಲ, ತಿಂಗಳ ಕೊನೆಯಾಗುವ ಹೊತ್ತಿಗೆ ಕಡಿಮೆಯೆಂದರೂ ನಲವತ್ತು ಸಾವಿರವಾಗಿರುತ್ತದೆ! ಹಾಗೂ, ಮೊದಲ ಹತ್ತು ಸಾವಿರವನ್ನು ಹೊರತು ಪಡಿಸಿ, ಉಳಿದ ಹಣವನ್ನೆಲ್ಲ, ನೀವು ಈ ಸಾಲ ತೀರಿಸಲೆಂದೇ ಪಡೆದಿರುತ್ತೀರಿ! ಇದೆಲ್ಲವೂ ಪೂರ್ತಿ ಅರ್ಥವಾಗುವ ಹೊತ್ತಿಗೆ ಲೋನ್ ಆ್ಯಪ್‌ಗ್ಳ ಚಕ್ರವ್ಯೂಹಕ್ಕೆ ಸಿಲುಕಿರುತ್ತೀರಿ!
ಆಮಿಷಕ್ಕೆ ಮರುಳಾಗಬೇಡಿ: RBI ಮತ್ತು ಕರ್ನಾಟಕ Money Lenders Rules ಪ್ರಕಾರ ವರ್ಷಕ್ಕೆ 16% ಗಿಂತ ಜಾಸ್ತಿ ಬಡ್ಡಿಯನ್ನು ಯಾರಾದರೂ ತೆಗೆದುಕೊಂಡರೆ ಅದನ್ನು ಅಪರಾಧ ಎಂದೇ ಪರಿಗಣಿಸಲಾಗುತ್ತದೆ. ಇದರ ನಿಯಂತ್ರಣಕ್ಕಾಗಿ ಸಿಸಿಬಿಯವರಿದ್ದಾರೆ. ಯಾರಾದರೂ ಇಂತಹ ಲೋನ್ ಆ್ಯಪ್‌ಗ್ಳಲ್ಲಿ ಸಿಲುಕಿಬಿದ್ದಿದ್ದರೆ ಸಿಸಿಬಿಯವರನ್ನು ಸಂಪರ್ಕಿಸಿ. ಈ ಆ್ಯಪ್‌ಗ್ಳ ಆಮಿಷಕ್ಕೆ ಮರುಳಾಗಿ ಪೂರ್ತಿ ವಿವರ ತಿಳಿಯದೆ ಸಾಲ ಮಾಡಿ, ಅನಂತರ ಆ ಸಾಲ ತೀರಿಸಲು ಮತ್ತಷ್ಟು ಸಾಲ ಮಾಡಿ ನೆಮ್ಮದಿ, ಜೀವನ, ಜೀವ ಕಳೆದುಕೊಳ್ಳದಿರಿ.
ಆತ್ಮಹತ್ಯೆ ಮಾಡಿಕೊಂಡಿದ್ದಾರೆ!ನಾನೀಗ ಕಟ್ಟುತ್ತಾ ಇರುವ ಬಡ್ಡಿಯ ಮೊತ್ತವೇ ಜಾಸ್ತಿ ಆಗಿದೆ. ಆ ಕಾರಣಕ್ಕೆ ಇನ್ನು ಮುಂದೆ ನಾನು ಹಣ ಕೊಡುವುದಿಲ್ಲ ಎಂದು ಸಾಲ ಪಡೆದವರು ಹೇಳಲು ಸಾಧ್ಯವಾಗುವುದಿಲ್ಲ. ಕಾರಣ, ಇದು ಆನ್‌ಲೈನ್ ಸಾಲ ಆಗಿರುವುದರಿಂದ, ಈ ಬಗ್ಗೆ ಯಾರ ಬಳಿಯೂ ಮಾತಾಡಲು ಆಗುವುದಿಲ್ಲ. ಎಲ್ಲವೂ ಆ್ಯಪ್‌ಗ್ಳ ನಿಯಂತ್ರಣದಲ್ಲಿ ಇರುತ್ತದೆ. ನಾವು ಸಾಲ ವಾಪಸ್ ಕೊಡದೇ ಹೋದರೆ, ಅದೇ ಸಂದೇಶ ನಮ್ಮ ಫ್ರೆಂಡ್ ಲಿಸ್ಟ್ ನಲ್ಲಿ ಇರುವ ಎಲ್ಲರ ಮೊಬೈಲ್‌ಗೂ ಹೋಗಿಬಿಡುತ್ತದೆ! ಆನ್‌ಲೈನ್ ಆ್ಯಪ್‌ಗ್ಳ ಮೂಲಕ ಸಾಲ ಪಡೆದು, ಸಕಾಲದಲ್ಲಿ ತೀರಿಸಲು ಆಗದೆ, ಫ್ರೆಂಡ್‌ಗಳ ಮುಂದೆ ಮರ್ಯಾದೆ ಹೋಗಿದ್ದಕ್ಕೆ ಹೆದರಿ ಹೈದರಾಬಾದ್ ಮತ್ತು ತೆಲಂಗಾಣದಲ್ಲಿ ಐದಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ! ಅಂದಮೇಲೆ, ಈ ಆ್ಯಪ್‌ಗಳ ಮೂಲಕ ಸಾಲ ಕೊಟ್ಟವರ ಕಿರಿಕಿರಿ ಹೇಗಿರಬಹುದೋ ಅಂದಾಜು ಮಾಡಿಕೊಳ್ಳಿ.