Advertisement

ಕಂಟೈನ್ಮೆಂಟ್‌ ಝೋನ್‌ನಲ್ಲಿರುವವರಿಗೆ ಆ್ಯಪ್‌ ನೆರವು

09:55 AM Apr 26, 2020 | Suhan S |

ಬೆಂಗಳೂರು: ನಗರದಲ್ಲಿ ಕಂಟೈನ್ಮೆಂಟ್‌ ಝೋನ್‌ಗಳ ವ್ಯಾಪ್ತಿಯಲ್ಲಿರುವ ಜನರಿಗೆ ನೆರವಾಗಲು ಪಾಲಿಕೆ ಹೊಸ ಆ್ಯಪ್‌ ಪರಿಚಯಿಸಲು ಮುಂದಾಗಿದೆ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ 20 ಕಂಟೈನ್ಮೆಂಟ್‌ ಝೋನ್‌ಗಳನ್ನು ಇಲ್ಲಿಯವರೆಗೆ ಗುರುತಿಸಲಾಗಿದ್ದು, ಕಂಟೈನ್ಮೆಂಟ್‌ ವ್ಯಾಪ್ತಿಯಲ್ಲಿ ಗೊಂದಲ ಹಾಗೂ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಪಾಲಿಕೆ ಎಂಬ ಆ್ಯಪ್‌ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದ್ದು, ಇಷ್ಟರಲ್ಲೇ ಈವ್ಯಾಪ್ತಿಯ ಜನರ ಅಗತ್ಯಕ್ಕೆ ನೆರವಾಗಲು ಮುಂದಾಗಿದೆ.

ಇದರ ಮೂಲಕ ಆಹಾರ, ನೀರು ಸರಬರಾಜು, ಕಸ ಸಂಗ್ರಹಣ ಹಾಗೂ ಕ್ವಾರೆಂಟೈನ್‌ನಲ್ಲಿರುವವರ ಮೇಲೆ ಕಣ್ಣಿಡಲು ಪಾಲಿಕೆ ಮುಂದಾಗಿದೆ. ಈ ಕುರಿತು ಉದಯವಾಣಿ ಜತೆ ಮಾತನಾಡಿದ ಬೆಂಗಳೂರು ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಹೆಪ್ಸಿಬಾ ರಾಣಿ ಕೊರ್ಲಾಪಾಟಿ ಅವರು, ದೇಶದಲ್ಲಿ ಇದೇ ಮೊದಲ ಬಾರಿಗೆ ಬಿಬಿಎಂಪಿ ಕಂಟೈನ್ಮೆಂಟ್‌ ವ್ಯಾಪಿ ಯಲ್ಲಿರುವ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ “”ಬಿಬಿಎಂಪಿ ಕಂಟೈ ನ್ಮೆಂಟ್‌” ಎಂಬ ಆ್ಯಪ್‌ ಪರಿಚಯ  ಪಡಿಸುತ್ತಿದೆ. ಈ ಆಪ್‌ನ ಮೂಲಕ ಸಾರ್ವಜನಿಕರು ಕಂಟೈನ್ಮೆಂಟ್‌ ವ್ಯಾಪ್ತಿಯಲ್ಲಿ ಯಾರಿಗಾದರೂ ದಿನಸಿ ಸಮಸ್ಯೆಯಾದರೆ ಹಾಗೂ ಆರೋಗ್ಯದಲ್ಲಿ ಏರುಪೇರಾದರೆ ಮಾಹಿತಿ ನೀಡಬಹುದು. ಕಂಟೈನ್ಮೆಂಟ್‌ ವ್ಯಾಪ್ತಿಯಲ್ಲಿ ಯಾರಾದರೂ ನಿಯಮ ಉಲ್ಲಂಘನೆ ಮಾಡಿ ಗುಂಪು ಸೇರಿದರೆ, ಬ್ಯಾರಿಕೇಡ್‌ ಸರಿಸಿ ನಿಯಂತ್ರಿತ ವಲಯದಿಂದ ಹೊರಗೆ ಅಥವಾ ಒಳಗೆ ಹೋಗಲು ಪ್ರಯತ್ನಿಸಿದರೆ ಅವರ ಚಿತ್ರವನ್ನು ತೆಗೆದು ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಲು ಅವಕಾಶ ನೀಡಲಾಗಿದೆ. ಈ ರೀತಿಯ ಯಾವುದೇ ಸಂದೇಶ ಬಂದರೂ ಬಿಬಿಎಂಪಿಯ ಅಧಿಕಾರಿಗಳು ಹಾಗೂ ಪೊಲೀಸರು ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆ ಪರಿಹರಿಸುತ್ತಾರೆ ಎಂದು ಮಾಹಿತಿ ನೀಡಿದರು.

ಗೊಂದಲಗಳಿಗೆ ತೆರೆ: ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಂಟೈನ್ಮೆಂಟ್‌ ಝೋನ್‌ಗಳಲ್ಲಿ ಆರೋಗ್ಯಾಧಿಕಾರಿಗಳಿಗೆ ಅಸಹಕಾರ ನೀಡುತ್ತಿರುವುವುದು ಹಾಗೂ ನಿಂದನೆ ಘಟನೆಗಳು ನಡೆಯುತ್ತಿವೆ ಇಂತಹ ಸಂದರ್ಭದಲ್ಲಿ ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೂ ಇದು ಸಹಕಾರಿಯಾಗಲಿದೆ.

ಕಂಟೈನ್ಮೆಂಟ್‌ ವ್ಯಾಪ್ತಿ ಜನರಿಗೆ ಮಾತ್ರ: ಬಿಬಿಎಂಪಿ ಕಂಟೈನ್ಮೆಂಟ್‌ ಆ್ಯಪ್‌ ಹೆಸರೇ ಸೂಚಿಸುವಂತೆ ಕಂಟೈನ್ಮೆಂಟ್‌ ಜನರಿಗೆ ಮಾತ್ರ ಬಳಸಲು ಅನುವು ಮಾಡಿಕೊಡಲಾಗಿದೆ. ನೀವು ಕಂಟೈನ್ಮೆಂಟ್‌ ವ್ಯಾಪ್ತಿಯಲ್ಲಿ ಇದ್ದರೆ ಮಾತ್ರ ಡೌನ್‌ಲೋಡ್‌ ಆಪ್ಷನ್‌ ತೋರಿಸಲಿದೆ. ಉಳಿದಂತೆ ನಗರದ ಬೇರೆ ವ್ಯಾಪ್ತಿಯಲ್ಲಿದ್ದರೆ ಈ ಆ್ಯಪ್‌ ಬಳಸಲು ಸಾಧ್ಯವಿಲ್ಲ. ಇನ್ನು ಎರಡು ದಿನಗಳಲ್ಲಿ ಈ ಆಪ್‌ ಸಾರ್ವಜನಿಕ ಬಳಕೆಗೆ ಮುಕ್ತವಾಗುವ ಸಾಧ್ಯತೆ ಇದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

 ಕಂಟೈನ್ಮೆಂಟ್‌ ಆ್ಯಪ್‌ ಕಾರ್ಯನಿರ್ವಹಣೆ ಹೇಗೆ? :  ಬಿಬಿಎಂಪಿ ಕಂಟೈನ್ಮೆಂಟ್‌ ಆ್ಯಪ್‌ಅನ್ನು ಚುನಾವಣಾ ಆಯೋಗಾ ಅಭಿವೃದ್ಧಿಪಡಿಸಿದ್ದ ಸಿವಿಜಲ್‌ ಹಾಗೂ ಉಡುಪಿ ಜಿಲ್ಲಾಡಳಿತ ವಿಪತ್ತು ನಿರ್ವಹಣಾ ಸಂದರ್ಭದಲ್ಲಿ ಬಳಸಿದ ಆ್ಯಪ್‌ಗಳ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗಿದ್ದು, ಇದರ ನಿರ್ವಹಣೆಯನ್ನು ಬಿಬಿಎಂಪಿಯ ವಾರ್‌ ರೂಂನ ಮೂಲಕ ನಿರ್ವಹಿಸಲಾಗುತ್ತದೆ. ಇದರಲ್ಲಿ ದೂರು ದಾಖಲಾಗುವ ಎರಡು ನಿಮಿಷದಲ್ಲಿ ಸಂಪೂರ್ಣ ಮಾಹಿತಿ ವಾರ್‌ರೂಮ್‌ಗೆ ಸಿಗಲಿದ್ದು, ವಲಯವಾರು ನೋಡಲ್‌ ಅಧಿಕಾರಿಗಳಿಗೆ ಸಂದೇಶ ರವಾನೆಯಾಗಲಿದೆ. ಅಲ್ಲಿಂದ ಸಂಬಂಧ ಪಟ್ಟವರು ಆಯಾ ನಿರ್ದಿಷ್ಟ ಸಮಸ್ಯೆಗೆ ಸ್ಪಂದಿಸಲಿದ್ದಾರೆ.

 

ಹಿತೇಶ್‌. ವೈ

Advertisement

Udayavani is now on Telegram. Click here to join our channel and stay updated with the latest news.

Next