Advertisement

ಯಾವ ಡ್ರೆಸ್‌ ಹಾಕಿದ್ರೆ ಚೆನ್ನಾಗಿ ಕಾಣ್ತಿನಿ ಅನ್ನೋ ಚಿಂತೆ ಇನ್ನಿಲ್ಲ!

09:51 AM Oct 27, 2019 | sudhir |

ವಾಷಿಂಗ್ಟನ್‌: ಪಾರ್ಟಿ ಇದೆ. ಈ ಬಟ್ಟೆ ಹಾಕಿದ್ರೆ ಚೆನ್ನಾಗಿ ಕಾಣುತ್ತಾ? ಈ ಚೂಡಿದಾರ್‌ಗೆ ಈ ಶಾಲು ಚೆನ್ನಾಗಿ ಕಾಣುತ್ತಾ? ಈ ಶರ್ಟ್‌ಗೆ ಈ ಕಲರ್ರಿನ ಪ್ಯಾಂಟ್‌ ಚೆನ್ನಾಗಿದೆಯಾ? ಇದನ್ನು ಹಾಕಿದ್ರೆ ನನೆY ಚೆನ್ನಾಗಿ ಕಾಣುತ್ತಾ? ಎನ್ನುವುದು ಪಾರ್ಟಿಗೆ, ಬೇರೆ ಕಾರ್ಯಕ್ರಮಗಳಿಗೆ ಹೊರಡಲು ತಯಾರದವರ ಸಮಸ್ಯೆ. ಇನ್ನು ಇದಕ್ಕೆಲ್ಲ ಚಿಂತೆಯಿಲ್ಲ. ಯಾವ ಬಟ್ಟೆ ನಿಮಗೆ ಚೆನ್ನಾಗಿ ಕಾಣುತ್ತದೆ? ಯಾವ ಬಟ್ಟೆ ಹೊಂದಾಣಿಕೆಯಾಗುತ್ತದೆ ಎಂಬ ವಿಚಾರವನ್ನು ತತ್‌ಕ್ಷಣ ಮೊಬೈಲ್‌ನಲ್ಲೇ ತಿಳಿದುಕೊಳ್ಳಬಹುದು.

Advertisement

ಇದಕ್ಕಾಗಿ ವಿಶೇಷ ಕೃತಕ ಬುದ್ಧಿಮತ್ತೆಯ ಆ್ಯಪ್‌ ಒಂದನ್ನು ಫೇಸ್‌ಬುಕ್‌ ಕೃತಕ ಬುದ್ಧಿಮತ್ತೆ ವಿಭಾಗ, ಕಾರ್ನೆಲ್‌ ಟೆಕ್‌, ಜಾರ್ಜಿಯಾ ಟೆಕ್‌ ಕಂಪೆನಿಗಳು ಆವಿಷ್ಕರಿಸಿದ್ದು, ಈ ಸಾಫ್ಟ್ವೇರ್‌ ಕೇವಲ ಫೋಟೋವನ್ನಷ್ಟೇ ಯಾವುದು ಯಾವುದಕ್ಕೆ ಮ್ಯಾಚ್‌ ಆಗುತ್ತೆ? ಯಾವ ಪಾರ್ಟಿಗೆ ಯಾವ ಉಡುಗೆ ಬೆಸ್ಟ್‌ ಎಂಬ ರೀತಿಯಲ್ಲಿ ಸಲಹೆಯನ್ನು ಕೊಡುತ್ತವೆಯಂತೆ.

ಫ್ಯಾಶನ್‌++ ಎಂದು ಈ ಸಾಫ್ಟ್ವೇರ್‌ನ್ನು ಕರೆಯಲಾಗಿದ್ದು, ಇದರಲ್ಲಿ ವಿಶುವಲ್‌ ರೆಕಗ್ನಿಶನ್‌ ಮತ್ತು ಬಣ್ಣವನ್ನು ವಿಶ್ಲೇಷಿಸುವ ಸಾಮರ್ಥ್ಯವನ್ನು ಇದು ಹೊಂದಿದೆಯಂತೆ. ಸುಮಾರು 10 ಸಾವಿರ ವಿವಿಧ ಚಿತ್ರಗಳನ್ನು ಬಳಸಿ ಈ ಕೃತಕ ಬುದ್ಧಿಮತ್ತೆಯನ್ನು ರೂಪಿಸಲಾಗಿದೆಯಂತೆ. ಅಲ್ಲದೇ ಮುಂದಿನ ದಿನಗಳಲ್ಲಿ ಈ ಸಾಫ್ಟ್ವೇರ್‌ ಯಾವ ದೇಹಕ್ಕೆ ಯಾವ ಬಟ್ಟೆ ಚೆನ್ನಾಗಿ ಹೊಂದಿಕೆಯಾಗುತ್ತದೆ ಎಂಬುದನ್ನೂ ನೋಡುವ ಸೌಲಭ್ಯ ಹೊಂದಿರಲಿದೆಯಂತೆ. ಇದರ ಬಗ್ಗೆ ಈಗ ಟೆಕ್ಕಿಗಳು ಪ್ರೋಗ್ರಾಂ ಬರೆಯಲು ಆರಂಭಿಸಿದ್ದಾರಂತೆ. ಕೃತಕ ಬುದ್ಧಿಮತ್ತೆಯ ಈ ಸಾಫ್ಟ್ವೇರನ್ನು ದ.ಕೊರಿಯಾದಲ್ಲಿ ನಡೆಯುವ ಕಂಪ್ಯೂಟರ್‌ ವಿಷನ್‌ ಸಭೆಯಲ್ಲಿ ಸಾಫ್ಟ್ವೇರ್‌ ರೂಪಿಸಿದವರು ಪರಿಚಯಿಸಲಿದ್ದಾರಂತೆ.

Advertisement

Udayavani is now on Telegram. Click here to join our channel and stay updated with the latest news.

Next