Advertisement

ಆ್ಯಪ್‌ನಲ್ಲಿ ಅಡಕೆ ಬದಲು ಬಾಳೆ!

05:11 PM Feb 24, 2021 | Team Udayavani |

ಶಿರಸಿ: ರೈತರ ಪಹಣಿಯಲ್ಲಿ ರೈತರೇ ಬೆಳೆ ನೋಂದಣಿ ಮಾಡಿಕೊಳ್ಳುವಂತೆ ಸಿದ್ಧಪಡಿಸಿಅನುಷ್ಠಾನಗೊಳಿಸಿದ ಆ್ಯಪ್‌ನಲ್ಲಿ ಮುಖ್ಯ ಬೆಳೆಯನ್ನೇ ಬದಲಾಯಿಸಿ ಎಡವಟ್ಟು ಮಾಡಿದ ಪ್ರಸಂಗ ನಡೆದಿದೆ.

Advertisement

ಇದರಿಂದ ಅನೇಕ ಬೆಳೆಗಾರರಿಗೆ ದಿಗಿಲು ಸೃಷ್ಟಿಸಿದ್ದು, ಕೆಳಸ್ಥರದ ಅಧಿಕಾರಿಗಳು ಸಾಫ್ಟ್ ವೇರ್‌ ಬೈಯ್ಯುವಂತಾಗಿದೆ. ಕಳೆದ ಜೂನ್‌, ಜುಲೈ, ಆಗಸ್ಟ್‌ನಲ್ಲಿಬೆಳೆಗಾರರ ಕೈಗೆ ಮೊಬೈಲ್‌ ಮೂಲಕ ಸಾಫ್ಟ್ ವೇರ್‌ ನೀಡಿ, ಕೆಲವೆಡೆ ಕೃಷಿ ಇಲಾಖೆಮೂಲಕ ಜನರನ್ನು ನೇಮಿಸಿ ಬೆಳೆ ಸರ್ವೇಮಾಡಲಾಗಿತ್ತು. ಅಂದು ಮಾಡಿದ ಬೆಳೆ ಸರ್ವೇ ಇದೀಗ ಪಹಣಿಯಲ್ಲೂದಾಖಲಾಗಿದ್ದು, ಮುಖ್ಯ ಬೆಳೆಯ ಕಾಲಂನಲ್ಲಿ ಇರಬೇಕಿದ್ದ ಅಡಕೆ ಬದಲಿಗೆ ಬಾಳೆ ಎಂದುಬರೆಯಲಾಗಿದೆ. ಅಡಕೆ ಬೆಳೆಗಾರರ ಭಾಗಾಯ್ತ ಕಾಲಂನಲ್ಲಿ ನಿಲ್‌ ಮಾಡಿದೆ. ಮುಖ್ಯವಾಗಿ ಒಂದೇ ಬೆಳೆ ದಾಖಲಿಸಿದ್ದಪಹಣಿಯಲ್ಲಿ ಈ ಎಡವಟ್ಟು ಆಗಿಲ್ಲ.ಬದಲಿಗೆ ಅಡಕೆಯಂತಹ ಮಿಶ್ರ ಬೆಳೆಯ ತೋಟದಲ್ಲಿ ಈ ಸಮಸ್ಯೆ ಉಂಟಾಗಿದೆ. ಬಹುವಾರ್ಷಿಕ ಅಡಕೆಯ ಬದಲಿಗೆ ಬಾಳೆ ಮುಖ್ಯ ಬೆಳೆಯಾದರೆ, ಅಡಕೆ, ಕಾಳು ಮೆಣಸು, ಏಲಕ್ಕಿಗಳು ಉಪ ಬೆಳೆಯಾಗಿ ಗುರುತಾಗಿದೆ.

ಇದು ರೈತರಿಗೆ ಏಪ್ರಿಲ್‌ನಲ್ಲಿ ಸಿಗಬೇಕಾದ ಬೆಳೆ ಸಾಲಕ್ಕೂ, ಬೆಳೆವಿಮೆಗೂ ಸಂಕಷ್ಟ ತಂದೊಡ್ಡಲಿದೆ.ಸರಕಾರದ ಈ ಆ್ಯಪ್‌ನಲ್ಲಿ ಮೊದಲೇ ಮುಖ್ಯ ಬೆಳೆ, ಅಂತರ ಬೆಳೆ ಪ್ರತ್ಯೇಕವಾಗಿ ದಾಖಲಿಸಲು ಅವಕಾಶ ನೀಡಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಬದಲಿಗೆ ಎಲ್ಲವೂ ಮುಖ್ಯ ಹಾಗೂ ಅಂತರ ಬೆಳೆ ಎಂದು ದಾಖಲಿಸಲು ಅವಕಾಶ ಮಾಡಿತ್ತು. ಭಾಗಾಯ್ತದ ಪ್ರಸ್ತಾಪ ಕೂಡ ಇಲ್ಲವಾಗಿತ್ತು. ಈ ಕುರಿತು ಬೆಳೆ ಸರ್ವೇ ಆ್ಯಪ್‌ ಕುರಿತು “ಉದಯವಾಣಿ’ ಆಗಸ್ಟ್‌ 22 ರಂದೇ ವರದಿ ಮಾಡಿತ್ತು. ಕೃಷಿ ಸಚಿವ ಬಿ.ಸಿ. ಪಾಟೀಲರು ಶಿರಸೀಲಿ ಇದು ಗೊಂದಲ ಆಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

ಈಗ ಮುಖ್ಯ ಬೆಳೆ ಮಿಶ್ರ ಬೆಳೆ ಕಾಲಂಗೆ ಹೋಗಿದ್ದರಿಂದ ಬೆಳೆ ಸಾಲ ಹಾಗೂ ಬೆಳೆವಿಮೆ ಎರಡಕ್ಕೂ ಸಮಸ್ಯೆ ಆಗುವ ಸಾಧ್ಯತೆಇದೆ. ಅಡಕೆ ಬೆಳೆಗಾರರ ಭಾಗಾಯ್ತ ಕೂಡ ದಾಖಲಾಗಿಲ್ಲ. ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರ ಶಿಫಾರಸ್ಸು ಮೂಲಕ ಈ ಪಹಣಿಯ ದುರಸ್ತಿ ಮಾಡುವ ಅಧಿಕಾರ ಉಪ ತಹಶೀಲ್ದಾರರು ಅಥವಾ ತಹಶೀಲ್ದಾರರಿಗೆ ನೀಡಬೇಕು. ಆ್ಯಪ್‌ನಲ್ಲೂ ಮುಖ್ಯಬೆಳೆ, ಅಂತರ ಬೆಳೆ, ಬದುವಿನ ಬೆಳೆ ಎಂದು ಪ್ರತ್ಯೇಕವಾಗಿ ದಾಖಲಿಸಿ ಭೂಮಿ ಸಾಫ್ಟ್‌ವೇರ್‌ಗೆಕೊಡುವಂತಾಗಬೇಕು. ಹಾಗಾದಾಗ ಮಾತ್ರ ಈ ಗೊಂದಲಕ್ಕೆ ಶೀಘ್ರ ತೆರೆ ಎಳೆಯಬಹುದು. ಕೋವಿಡ್ ಸಂಕಷ್ಟದ ಬೆನ್ನಲ್ಲೇ ಪಹಣಿ ಸಂಕಷ್ಟ ರೈತರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.

ಬಹು ವಾರ್ಷಿಕ ಬೆಳೆ ಹಾಗೂ ಮಿಶ್ರ ಬೆಳೆ ಇದ್ದಲ್ಲಿ ಈ ಸಮಸ್ಯೆ ಆಗಿದ್ದು ಗಮನಕ್ಕೆ ಬಂದಿದೆ. ಪರಿಹಾರ ಕುರಿತು ಸಂಬಂಧಪಟ್ಟವರ ಜತೆಸಮಾಲೋಚಿಸಿ ರೈತರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. –ಎಚ್‌.ಕೆ. ಕೃಷ್ಣಮೂರ್ತಿ, ಅಪರ ಜಿಲ್ಲಾಧಿಕಾರಿ, ಉತ್ತರ ಕನ್ನಡ.

Advertisement

ಪಹಣಿಯಲ್ಲಿ ಅಡಕೆ ಪ್ರಧಾನ ಬೆಳೆ. ಆದರೆ, ಬಾಳೆ ಎಂದು ದಾಖಲಾಗಿದೆ. ಸರಕಾರವೇ ಇದನ್ನು ದುರಸ್ತಿ ಮಾಡಿ ರೈತರ ಅಲೆದಾಟ, ಆತಂಕ ತಪ್ಪಿಸಬೇಕು. – ಜಗದೀಶ ಬಾಳೇಹದ್ದ, ರೈತ. -ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next