Advertisement

ಅಪೂರ್ವ ಪಶ್ಚಿಮ

03:45 AM Feb 15, 2017 | Harsha Rao |

ಉಪ್ಪಿನ ಕಾಗದದಲ್ಲಿ ಗುಂಗುರು ಕೂದಲ ಹುಡುಗಿ ಒತ್ತಿದ ಮೊಹರು!

Advertisement

ಅಪೂರ್ವ ಭಾರದ್ವಾಜ್‌ “ಉಪ್ಪಿನ ಕಾಗದ’ ಚಿತ್ರದ ಮುಖ್ಯ ಪಾತ್ರಧಾರಿ. ಮಣಿಪಾಲದಲ್ಲಿ ಮಾಸ್‌ ಕಮ್ಯುನಿಕೇಶನ್‌ ಆ್ಯಂಡ್‌ ಜರ್ನಲಿಸಂ ಓದಿ ಟೆಕ್ನಿಶಿಯನ್‌ ಆಗಿ ಮನರಂಜನಾ ಮಾಧ್ಯಮಕ್ಕೆ ಬಂದವರು. ಬಿಗ್‌ ಬಾಸ್‌ ಸೀಸನ್‌ 2, ಸೂಪರ್‌ ಮಿನಿಟ್‌ ಮೊದಲಾದ ನಾನ್‌ಫಿಕ್ಷನ್‌ ಕಾರ್ಯಕ್ರಮಗಳಲ್ಲಿ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಬಳಿಕ “ಅನುರೂಪ’, “ಚಕ್ರವ್ಯೂಹ’ “ಗಿರಿಜಾ ಕಲ್ಯಾಣ’ ಮೊದಲಾದ ಸೀರಿಯಲ್‌ಗ‌ಳಲ್ಲಿ  ಅಭಿನಯ. ಹುಟ್ಟಿ ಬೆಳೆದಿದ್ದು ಬೆಂಗಳೂರಲ್ಲಿ. “ಉಪ್ಪಿನ ಕಾಗದ’ ಶೂಟಿಂಗ್‌ನಲ್ಲಿ ಮೀನಿನ ಪ್ರಸಂಗ, ಡಯೆಟ್‌ ಫ‌ಚೀತಿಗಳು, ಮನೆಯೊಳಗಿನ ರೂಪಾಂತರ ಮೊದಲಾದ ಸಂಗತಿಗಳನ್ನಿಲ್ಲಿ ಹಂಚಿಕೊಂಡಿದ್ದಾರೆ. 
*
ಉಪ್ಪಿನ ಕಾಗದದಲ್ಲಿ ಹರಿದಾಡಿದ ಮೀನು
ನನಗೆ ಹೈಡ್ರೋಫೋಬಿಯಾ ಇದೆ. ಮೀನು ಅಂದ್ರೂ ಭಯ. ಆದರೆ “ಉಪ್ಪಿನ ಕಾಗದ’ದಲ್ಲಿ ಅದೊಂದು ಸೀನ್‌ ಇತ್ತು. ಕೊನೆಯಲ್ಲಿ ಹರಿಯುವ ನದಿಯ ಮಧ್ಯೆ ನಾನು ಕಣ್ಣೀರು ಹಾಕ್ತಾ ನಿಂತ್ಕೊಳ್ಬೇಕಿತ್ತು, ಮೀನುಗಳೆಲ್ಲಾ ನನ್ನ ಕಾಲಿಗೆ ಕಚಗುಳಿ ಇಡುವ ಸನ್ನಿವೇಶ. ಶೂಟಿಂಗ್‌ಗೂ ಮೊದಲು ರಿಹರ್ಸಲ್‌ ಇತ್ತು. ಆಗ ಈ ವಿಷಯ ಗೊತ್ತಾದದ್ದು. “ಮೀನು’ ಅಂದ ಕೂಡ್ಲೆ ಬೆಚ್ಚಿಬೆದ್ದಿದ್ದೆ. ಇದರ ಶೂಟಿಂಗೂ ಇರುತ್ತಾ ಅಂತ ಬಿ. ಸುರೇಶ್‌ ಅವರನ್ನು ಕಣ್ಣಗಲ ಮಾಡಿ ಕೇಳಿದ್ದೆ. ಅವರು ನಗುತ್ತಾ, “ಇರುತ್ತೆ ಮತ್ತೆ’ ಅಂದಿದ್ರು. ಶೂಟಿಂಗ್‌ಗೆ ಹೋದಾಗಲೂ ಮತ್ತೆ ಮತ್ತೆ ಕೇಳಿದೆ. ಇರುತ್ತೆ, ಆ ಸೀನ್‌ನ° ಕೊನೆಗೆ ಇಟ್ಕೊಳ್ಳೋಣ, ಈಗ ಉಳಿದದ್ದೆಲ್ಲ ಮುಗಿಸೋಣ ಅಂದ್ರು, ನಾನು ಸಮಾಧಾನದಿಂದಿದ್ದೆ. ಅವತ್ತು ಕೊನೇ ದಿನದ ಶೂಟಿಂಗ್‌. ಅದೇ ಸೀನ್‌. “ಬೇಗ ಬೇಗ ರೆಡಿಯಾಗಿ ಸನ್‌ಲೈಟ್‌ ಹೋಗೋ ಮೊದಲೇ ಶೂಟಿಂಗ್‌ ಮುಗಿಸಬೇಕು’ ಅಂದ್ರು. ಭಯ, ಟೆನ್ಶನ್‌ನಲ್ಲಿ ನಾನು ಕುಸಿದು ಬೀಳ್ಳೋದೊಂದು ಬಾಕಿಯಿತ್ತು, ಅಮ್ಮಂಗೂ ಫೋನ್‌ಮಾಡಿ ಅತ್ತೆ, ಅವ್ರು ಸಮಾಧಾನ ಮಾಡಿದ್ರು. ಸೆಟ್‌ನಲ್ಲಿ ಎಲ್ಲರೂ ಧೈರ್ಯ ಹೇಳಿದ್ರು. ನನ್ನ ಎದುರಿಗೆ ಹರಿಯೋ ನದಿ, ಅದರ ತುಂಬ ಮೀನುಗಳು, ಏನು ಮಾಡಿದರೂ ಕಾಲಿಡಲಿಕ್ಕೆ ಆಗ್ತಾ ಇಲ್ಲ. ಭಯದಲ್ಲಿ ಒಂದೇ ಸಮನೆ ಕಣ್ಣೀರು ಹರಿಯುತ್ತಿತ್ತು. ಕೊನೇಗೆ ಗೊತ್ತಾಯ್ತು, ಇಡೀ ಸೆಟ್‌ನವರು ಅಷ್ಟೊತ್ತು ಆಡಿದ್ದು ನಾಟಕ ಅಂತ!

ದುರ್ಗಾ ತೀರದ ಚಿಲಿಪಿಲಿ
“ಉಪ್ಪಿನ ಕಾಗದ’ ಚಿತ್ರೀಕರಣ ಆದದ್ದು ಕಾರ್ಕಳ ಸಮೀಪದ ದುರ್ಗಾ ಹೊಳೆಯ ಸುತ್ತಮುತ್ತ. ಪಶ್ಚಿಮ ಘಟ್ಟ ತಪ್ಪಲಿನ ದಟ್ಟ ಕಾಡು, ಪ್ರಶಾಂತವಾಗಿ ಹರಿಯೋ ನದಿಯಲ್ಲಿ ಕಳೆದುಹೋಗಿದ್ವಿ. ಮೊಬೈಲ್‌ ನೆಟ್‌ವರ್ಕ್‌ ಇಲ್ಲ, ಹೊರ ಜಗತ್ತಿನ ಸಂಪರ್ಕದಿಂದಲೇ ಕಳಚಿಕೊಂಡು ಹೊಸದೊಂದು ಜಗತ್ತು ಕಟ್ಟಿಕೊಂಡು ಬದುಕುತ್ತಿದ್ವಿ. ನಮ್ಮ ಚಿತ್ರದ ಕತೆಯೇ 20ನೇ ಶತಮಾನದ ಪೂರ್ವಭಾಗದ್ದು, ಅದರಲ್ಲಿ ನನಗೆ ನಾಗಾಭರಣ ಅವರ ಮಗಳ ಪಾತ್ರ. ಚಿಕ್ಕವಯಸ್ಸಲ್ಲೇ ತಂದೆಯನ್ನು ಕಳೆದುಕೊಂಡು ದೊಡ್ಡವಳಾದಮೇಲೆ ಅವರನ್ನು ಹುಡುಕುತ್ತಾ ಹೋಗೋ ಪಾತ್ರ ನನ್ನದು. ದೊಡ್ಡ ದೊಡ್ಡ ಕಲಾವಿದರ ಜೊತೆಗೆ ಅಭಿನಯಿಸಿದ್ದೇ ದೊಡ್ಡ ಖುಷಿ. ನಾನು ಸ್ವಲ್ಪ ಎಕ್ಸ್‌ಟ್ರಾವರ್ಟ್‌ ಬಬ್ಲಿ ಹುಡುಗಿ, ಅಲ್ಲಿ ಮಾತ್ರ ಎಮೋಶನ್‌ನ° ಕಂಟ್ರೋಲ್‌ ಮಾಡ್ಕೊಂಡು ಅಭಿನಯಿಸಬೇಕಿತ್ತು. ಅಂದ್ರೆ ಎಷ್ಟೇ ನೋವಿದ್ದರೂ ಹಲ್ಲುಕಚ್ಚಿ ಆ ತೀವ್ರತೆಯನ್ನಷ್ಟೇ ಅಭಿನಯಿಸಬೇಕು, ಈ ಸೆಟ್‌ನಲ್ಲಿ ಆ್ಯಕ್ಟಿಂಗ್‌ ವಿಚಾರವಾಗಿ ಬಹಳ ಕಲಿತೆ.

ಮನೇಲಿದ್ರೆ ಗುತೇì ಸಿಗಲ್ಲ!
ಯಾವೊªà ಪೈಜಾಮ, ಯಾವೊªà ಟೀ ಶರ್ಟ್‌, ಗಂಟು ಹಾಕ್ಕೊಂಡಿರೂ ಕೂದಲು, ಈ ಮನೆಯಲ್ಲಿ ಇರುವವಳು ಒಬ್ಬ ಸಿನಿಮಾ ಆ್ಯಕ್ಟರ್‌ ಅಂತ ಗುರ್ತಿ ಸಿಕ್ಕರೆ ಹೇಳಿ. ನೋ, ವೇ. ನನ್ನ ಫ್ರೆಂಡ್ಸ್‌ ಯಾವತ್ತೂ ಹೇಳ್ತಿರ್ತಾರೆ. ನಂಗೆ ಮನೆಯಲ್ಲಿರುವಾಗ ಮೇಕಪ್‌ ಹಾಕ್ಕೊಳಕ್ಕೆ ಒಂಚೂರೂ ಇಷ್ಟ ಇಲ್ಲ. ಆಚೆ ಹೋಗುವಾಗ ಮಾತ್ರ ಡಿಗ್ನಿಫೈಡ್‌ ಆಗಿ ಹೋಗ್ತಿàನಿ. ಆದರೂ ನಂಗೆ ಮನೆಯಲ್ಲೇ ಇರೋದಿಷ್ಟ. ನಾವು ಮೂರು ಜನ ಕ್ಲೋಸ್‌ ಫ್ರೆಂಡ್ಸ್‌ ಇದೀವಿ. ಮನೆಯಲ್ಲೇ ನಮ್ಮ ಮಾತುಕತೆ. ಆಚೆಹೋಗೋದು ತೀರಾ ಅಪರೂಪ. ಈಗೀಗ ಟ್ರಾವೆಲಿಂಗ್‌ನಲ್ಲಿ ಆಸಕ್ತಿ ಬರಿ¤ದೆ. 

ಮಣಿಪಾಲದ ಪತ್ರೊಡೆ ಘಮ
ಯಾವ್ಯಾವ ಊರಿಗೆ ಹೋಗ್ತಿàನೋ ಅಲ್ಲಿಯ ಕಲ್ಚರ್‌, ಜನರ ಜೊತೆಗೆ ಬೆರೆತುಹೋಗೋದು ನನ್ನ ಸ್ವಭಾವ. ಊಟ, ತಿಂಡಿ ಎಲ್ಲದಕ್ಕೂ ಅಡೆjಸ್ಟ್‌ ಆಗ್ತಿàನಿ. ಹೋಗಿ ಬಂದು ಎಷ್ಟೇ ದಿನ ಆದರೂ ಆ ಊರುಗಳ ಊಟದ ರುಚಿ ಮರೆಯಲ್ಲ. ಮಣಿಪಾಲ ಇರೋದು ಉಡುಪಿ ಜಿಲ್ಲೆಯಲ್ಲಿ. ಸಮುದ್ರಕ್ಕೆ ಹತ್ತಿರದ ಜಾಗ. ಅಲ್ಲಿ ಓದಿ¤ದ್ದ ಅಷ್ಟೂ ದಿನಗಳನ್ನೂ ಖುಷಿಯಿಂದ ಕಳೆದಿದ್ದೀನಿ. ಅಲ್ಲಿಯದೇ ಊಟ, ತಿಂಡಿಯ ರುಚಿ ಇನ್ನೂ ಬಾಯಲ್ಲಿದೆ. ಅದರಲ್ಲಿ ಬಹಳ ನೆನಪಿರೋದು ಪತ್ರೊಡೆ. ಅದರ ಮುಂದೆ ಯಾವ ತಿಂಡಿಯೂ ಇಲ್ಲ ಅನ್ನುವಷ್ಟರ ಮಟ್ಟಿಗೆ ಪತ್ರೊಡೆ ಇಷ್ಟ ಆಯ್ತು. ಅದರ ಜೊತೆಗೆ ಇಡ್ಲಿಗೆ ಮಾಡ್ತಿದ್ದ ಸಾಂಬಾರ್‌ ಸಖತ್ತಾಗಿರುತ್ತಿತ್ತು. 

Advertisement

ಡಯೆಟ್‌ ಫ‌ಚೀತಿ!
ಯಾಕೋ ಇತ್ತೀಚೆಗೆ ದಪ್ಪ ಆಗ್ತಿದೀನಲ್ಲ ಅನಿಸಲಿಕ್ಕೆ ಶುರುವಾಗುತ್ತೆ, ನಾಳೆಯಿಂದಲೇ ಸ್ಟ್ರಿಕ್ಟ್ ಡಯೆಟ್‌ ಮಾಡ್ಬೇಕು ಅಂದೊRಳ್ತೀನಿ. ಬೆಳಗ್ಗೆ ಒಂದು ಚಪಾತಿ, ಅರ್ಧ ಚಪಾತಿಯಿಂದ ದಿನದ ಆರಂಭ ಆಗುತ್ತೆ. ಆದರೆ ಸಂಜೆಯ ತನಕ ಬರುವಷ್ಟರಲ್ಲಿ ಯಾವತ್ತಿಗಿಂತ ಹೆಚ್ಚೇ ತಿಂದಾಗಿರುತ್ತೆ, ಮಧ್ಯಾಹ್ನವಾದಾಗ್ಲೆà ಡಯೆಟ್‌ ಎಲ್ಲ ಮರೆತೇ ಹೋಗಿರುತ್ತೆ. ಪಕ್ಕದಲ್ಲೊಬ್ಬರು ನೆನಪಿಸುವವರು ಇದ್ರೆ ಕರೆಕ್ಟ್ ಆಗಬಹುದೋ ಏನೋ, ಆದ್ರೆ ಈ ವರೆಗೆ ನನ್ನ ಒಂದು ಡಯೆಟೂ ಸಕ್ಸಸ್‌ ಆಗಿಲ್ಲ!

ಕರಿಗುಂಡು ಅರ್ಥಾತ್‌ ರಸಗುಲ್ಲ
ಹೌದು, ಹೊರಟಿದ್ದು ರಸಗುಲ್ಲ ಮಾಡಲಿಕ್ಕೆ ಅಂತ. ರಸಗುಲ್ಲ ಅಂದರೆ ಬಹಳ ಇಷ್ಟ ನಂಗೆ. ಯೂ ಟ್ಯೂಬ್‌ನಲ್ಲಿ ಹತ್ತು ಸಲ ರಸಗುಲ್ಲ ಮಾಡೋದು ಹೇಗೆ ಅಂತ ನೋಡ್ಕೊಂಡಿದ್ದೆ. ಅದರಲ್ಲಿ ಹೇಳಿದ ಹಾಗೆ ಮಾಡ್ತಿದ್ದೆ, ಆದ್ರೆ ಅದರಲ್ಲಿ ರಸಗುಲ್ಲವಾಗಿಯೇ ಇತ್ತು, ನಾನ್‌ ಮಾಡೊವಾಗ ಮಾತ್ರ ಅದು ಕರ್ರಗಿನ ಗುಂಡಿನ ಹಾಗಾಗಿತ್ತು. ಎಷ್ಟು ಗಟ್ಟಿ ಅಂತ್ರೆ ಬಾಲ್‌ ಥರ ನೆಲಕ್ಕೆ ಎಸೆದರೂ ಪೀಸ್‌ ಆಗ್ತಿರಲಿಲ್ಲ. ಪಾಪ, ಅಪ್ಪ ಅಮ್ಮ, ನಾನು ಮಾಡಿದ್ದು ಎಂಬ ಕಾರಣಕ್ಕೆ ರುಚಿ ಚೆನ್ನಾಗೇ ಇದೆ ಅಂದೊRಂಡು ತಿಂದ್ರು!

ಸ್ಟ್ರೀಟ್‌ ಫ‌ುಡ್‌ ಅಂದ್ರೆ ಬಾಯಲ್ಲಿ ನೀರು
ಎಷ್ಟು ಸಲನೋ ನೆನಪಿಲ್ಲ, ಸ್ಟ್ರೀಟ್‌ಫ‌ುಡ್‌ ತಿಂದು ಹೊಟ್ಟೆ ಹಾಳುಮಾಡಿಕೊಂಡಿದ್ದು. ಆದರೆ ನೆಕ್ಸ್ಟ್ ಡೇ ಮತ್ತೆ ಪಾನಿಪುರಿ ತಿನ್ನದಿದ್ರೆ ತಡೀತಿರಲಿಲ್ಲ. 

ಹಳೇ ಅಡುಗೆನೇ ಬೆಸ್ಟ್‌ ಕಣ್ರೀ
ಹೊಸ ಹೊಸ ಪ್ರಯೋಗ ಮಾಡಕ್ಕೆ ಹೋಗಿ ಕೈ ಸುಟ್ಕೊಂಡಿದ್ದೇ ಹೆಚ್ಚು. ಹಾಗಾಗಿ ಹೆಚ್ಚು ರಿಸ್ಕ್ ತಗೊಳೆªà ಹಳೇ ಅಡುಗೆಗಳನ್ನೇ ಮಾಡ್ತೀನಿ. ಚಿತ್ರಾನ್ನ, ಒಬ್ಬಟ್ಟು, ಸಾರು ಎಲ್ಲ ಅಡುಗೆ ಬರುತ್ತೆ.

– ದೀಪಿಕಾ ಪಡುಕೋಣೆ ನನ್ನ ಫ್ಯಾಶನ್‌ ಐಕಾನ್‌
– ಒಮ್ಮೆಯಾದ್ರೂ ದೆವ್ವದ ಪಾತ್ರ ಮಾಡ್ಬೇಕು!
– ಆರ್ಟ್‌ ಫಿಲ್ಮ್ ಇಷ್ಟ. ಕಮರ್ಷಿಯಲ್ಲೂ ಕಷ್ಟ ಅಲ್ಲ, ಟಾಪ್‌ ಹೀರೋಗಳ ಜೊತೆಗೆ ನಟಿಸೋ ಕನಸಿದೆ.
– ಮೀನು ಕಂಡ್ರೆ  ಭಯ!

ಕದೀತಿದ್ದೆ, ಸಿಕ್ಕಾಕಿಕೊಳ್ತಿರಲಿಲ್ಲ!
ಚಿಕ್ಕೋಳಿದ್ದಾಗ ಬಹಳ ತಿಂಡಿ ಬಹಳ ಕದೀತಿದ್ದೆ, ಆದ್ರೆ ಯಾವತ್ತೂ ಸಿಕ್ಕಾಕೊಳ್ತಿರಲಿಲ್ಲ. ಪೂರಿಗೆ ಮಾಡ್ತಿದ್ದ ಚನ್ನ ಮಸಾಲ ನಂಗೆ ಸಖತ್‌ ಇಷ್ಟ. ಅದು ಮಾಡಿದ್ರೆ ಬೆಳಗ್ಗೆ, ಮಧ್ಯಾಹ್ನ, ಸಂಜೆ ಅದನ್ನೇ ತಿನ್ನೋದು. ಮಧ್ಯಾಹ್ನ ಎಲ್ಲರೂ ಮಲಕ್ಕೊಂಡಿದ್ದಾಗ ಕದ್ದುಹೋಗಿ ಕಪ್‌ಗೆ ಹಾಕ್ಕೊಂಡು ಚನ್ನಮಸಾಲ ಕುಡಿಯೋದು. ಇದೇ ಥರ ಹಾರ್ಲಿಕ್ಸ್‌ ಪೌಡರ್‌, ಬೋರ್ನ್ವೀಟಾ ಪುಡಿಯನ್ನೂ ಕದ್ದು ತಿನಿ¤ದ್ದೆ. 

– ಪ್ರಿಯಾ ಕೆರ್ವಾಶೆ

Advertisement

Udayavani is now on Telegram. Click here to join our channel and stay updated with the latest news.

Next