Advertisement
ಏಕವ್ಯಕ್ತಿ ಬಿಪಿಎಲ್ ಕಾರ್ಡ್‌ಗೆ ತಿಂಗಳಿಗೆ 5 ಕೆ.ಜಿ. ಹಾಗೂ ಎರಡು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಕಾರ್ಡ್‌ಗೆ ಪ್ರತಿ ತಿಂಗ ಳಿಗೆ 10 ಕೆ.ಜಿ. ಅಕ್ಕಿ ಯನ್ನು ಕೆ.ಜಿ.ಗೆ 15 ರೂ.ಗಳಂತೆ ನೀಡಲಾಗುತ್ತದೆ. ಆದರೆ ಸೆಪ್ಟಂಬರ್‌ನಿಂದ ಸರಿಯಾಗಿ ಅಕ್ಕಿ ವಿತರಣೆಯಾ ಗುತ್ತಿಲ್ಲ.
Related Articles
ಕೇಂದ್ರ ಸರಕಾರ ಈ ಹಿಂದೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್‌ದಾರರಿಗೆ ಒಟ್ಟಿಗೆ ಕೇಂದ್ರ ಆಹಾರ ನಿಗಮದ ಮೂಲಕ ಅಕ್ಕಿ ಪೂರೈಸು ತ್ತಿತ್ತು. ಈಗ ಬಿಪಿಎಲ್ ಕಾರ್ಡ್‌ದಾರರಿಂದ ಎರಡು ಒಟಿಪಿ ಪಡೆದುಕೊಂಡು ಕೇಂದ್ರ ಹಾಗೂ ರಾಜ್ಯ ಸರಕಾರದ ಪಾಲನ್ನು ಪ್ರತ್ಯೇಕವಾಗಿ ನೀಡಲಾಗುತ್ತಿದೆ. ಹೀಗಾಗಿ ಕೇಂದ್ರದಿಂದ ಬಿಪಿಎಲ್ ಕಾರ್ಡ್‌ಗೆ ಎಷ್ಟು ಅಕ್ಕಿ ನೀಡಲಾಗುತ್ತಿದೆಯೋ ಅಷ್ಟನ್ನು ಮಾತ್ರ ಒದಗಿಸಲಾಗುತ್ತಿದೆ. ಎಪಿಎಲ್ ಕಾರ್ಡ್‌ದಾರರಿಗೆ ರಾಜ್ಯ ಸರಕಾರ ಪ್ರತ್ಯೇಕವಾಗಿ ಖರೀದಿಸಬೇಕಾಗಿದೆ. ಹೀಗಾಗಿ ಎರಡು ಮೂರು ತಿಂಗಳುಗಳಿಂದ ಹಂಚಿಕೆಯಲ್ಲಿ ವಿಳಂಬವಾಗುತ್ತಿದೆ ಎಂದು ಆಹಾರ, ನಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆಯ ಮೂಲಗಳು ತಿಳಿಸಿವೆ.
Advertisement
ಭತ್ತ ನೀಡಲು ನೋಂದಣಿ ಭತ್ತ ಖರೀದಿ ಕೇಂದ್ರದಲ್ಲೂ
ರೈತರ ನೋಂದಣಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಉಡುಪಿ ಜಿಲ್ಲೆಯಲ್ಲಿ ಡಿ.6ರ ಅಂತ್ಯಕ್ಕೆ 37 ರೈತರು ನೋಂದಣಿ ಮಾಡಿಕೊಂಡಿದ್ದು, ಸುಮಾರು 940 ಕ್ವಿಂಟಾಲ್ ಭತ್ತ ಸಿಗುವ ನಿರೀಕ್ಷೆ ಯಿದೆ. ದಕ್ಷಿಣ ಕನ್ನಡದಲ್ಲಿ ಕೇವಲ 4 ರೈತರು ಮಾತ್ರ ನೋಂದಣಿ ಮಾಡಿ ಕೊಂಡಿದ್ದು, ಸುಮಾರು 80 ಕ್ವಿಂಟಾಲ್ ಭತ್ತ ಸಿಗುವ ಸಾಧ್ಯತೆಯಿದೆ. ರೈತರು ಭತ್ತವನ್ನು ಬೆಂಬಲ ಬೆಲೆ ಯಡಿ ನೀಡಲು ನೋಂದಣಿ ಮಾಡಿಸಿಕೊಳ್ಳು ವುದು ಅಗತ್ಯ ಎಂದು ಕರ್ನಾಟಕ ಆಹಾರ, ನಾಗರಿಕ ಸರಬ ರಾಜು ನಿಗಮದ ಉಡುಪಿ, ದ.ಕ. ಜಿಲ್ಲಾ ವ್ಯವಸ್ಥಾಪಕಿ ಅನುರಾಧಾ ತಿಳಿಸಿದರು. ಎಪಿಎಲ್ ಕಾರ್ಡ್ ಮಾಹಿತಿ ತಾಲೂಕು ಕಾರ್ಡ್
ಬೆಳ್ತಂಗಡಿ 15,346
ಬಂಟ್ವಾಳ 22,943
ಮಂಗಳೂರು 91,015
ಪುತ್ತೂರು 29,792
ಸುಳ್ಯ 12,603
ಕಾರ್ಕಳ 16,600
ಕುಂದಾಪುರ 16,883
ಉಡುಪಿ 38,666
ಕಾಪು 17,380
ಬ್ರಹ್ಮಾವರ 14,714
ಬೈಂದೂರು 5,506
ಹೆಬ್ರಿ 3,182 ಶೀಘ್ರ ಪೂರೈಕೆ
ತಾಂತ್ರಿಕ ಸಮಸ್ಯೆಯಿಂದ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ರಾಜ್ಯ ಮಟ್ಟ ದಲ್ಲಿ ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ವಿತರಿಸಲು ಪ್ರತ್ಯೇಕ ಟೆಂಡರ್ ಆಗಿರುವುದರಿಂದ ಕೆಲವೇ ದಿನಗಳಲ್ಲಿ ಮೊದಲಿ ನಂತೆ ಅಕ್ಕಿ ದೊರೆಯಲಿದೆ.
-ಮೊಹಮ್ಮದ್ ಇಸಾಕ್, ಉಪ ನಿರ್ದೇಶಕ, ಆಹಾರ ಇಲಾಖೆ ಉಡುಪಿ