Advertisement

ಅಪಾರ್ಟ್‌ಮೆಂಟ್‌ ವಾಸಿಗಳಿಗೆ ಬೇಕಿದೆ ಅಗತ್ಯ ನೆರವು

01:25 PM Aug 09, 2021 | Team Udayavani |

ಮೂರನೇ ಅಲೆಯ ಮುನ್ಸೂಚನೆಯೋ ಅಥವಾ ಎರಡನೇ ಅಲೆ ಹಾವಳಿಯೋ ಗೊತ್ತಿಲ್ಲ. ನಗರದಲ್ಲಿ ದಿನದಿಂದದಿನಕ್ಕೆ ಸೋಂಕಿನ ಪ್ರಕರಣಗಳಂತೂ ಏರುಗತಿಯಲ್ಲಿ ಸಾಗಿವೆ.ಇದರಿಂದ ಅಪಾರ್ಟ್‌ಮೆಂಟ್‌ಗಳಲ್ಲಿ ಕಂಟೈನ್ಮೆಂಟ್‌ವಲಯ ಕಟ್ಟುನಿಟ್ಟಾಗಿ ಜಾರಿಯೂ ಆಗುತ್ತಿದೆ.ಮತ್ತೊಂದೆಡೆ, ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಅಥವಾ ಕುಟುಂಬದವರಿಗೆ ಹೊರಗಡೆ ತೆರಳಿ ಅಗತ್ಯ ವಸ್ತು ಖರೀದಿಸಲೂ ಭಯ ಆಗುತ್ತಿದೆ. ಇನ್ನೊಂದೆಡೆ ಪಾಲಿಕೆಯಿಂದ ಇಲ್ಲಿನ ನಿವಾಸಿಗಳಿಗೆ ಅಗತ್ಯ ವಸ್ತುಗಳ ಪೂರೈಕೆ ವ್ಯವಸ್ಥೆಯೂ ಇಲ್ಲ.ಈ ಮಧ್ಯೆ ನಿತ್ಯ ತಿಂಡಿ, ಊಟ,ಮಾತ್ರೆಗಳು, ಅಗತ್ಯವಸ್ತುಗಳು,ಇನ್ನಿತರ ಸೌಲಭ್ಯ ಆನ್‌ಲೈನ್‌ನಲ್ಲೇ ಪಡೆಯಬೇಕಾದ ಅನಿವಾರ್ಯತೆ.ಅದು ಸಕಾಲದಲ್ಲಿ ಸಿಗುತ್ತಿಲ್ಲ.ಇದು ಮತ್ತೊಂದು ರೀತಿಯ ತಲೆನೋವಾಗಿ ಪರಿಣಮಿಸಿದೆ.ಇದೆಲ್ಲದರ ನಡುವೆ ಈಗ ರಾತ್ರಿ ಕರ್ಫ್ಯೂ ಬಂದಿದೆ!ಈ ಕುರಿತು ಈ ಬಾರಿಯ ಸುದ್ದಿ ಸುತ್ತಾಟ..

Advertisement

ರಾಜಧಾನಿಯ ಅಪಾರ್ಟ್‌ಮೆಂಟ್‌ಗಳಲ್ಲಿ ಕೋವಿಡ್‌ ಸೋಂಕು ಪ್ರಕರಣಗಳು ಹೆಚ್ಚಾಗಿ ಪತ್ತೆಯಾದ ಬೆನ್ನಲ್ಲೇ ಪಾಲಿಕೆಯು, ಕಟ್ಟುನಿಟ್ಟಾಗಿ ಕಂಟೈನ್ಮೆಂಟ್‌ ಝೋನ್‌ ಹಾಗೂ ಸೆಮಿಲಾಕ್‌ಡೌನ್‌ ಮಾಡುತ್ತಿದೆ. ಆದರೆ, ಭದ್ರತೆ ಹಾಗೂ ಮತ್ತಿತರ ದೃಷ್ಟಿಯಿಂದ ಒಂದು ರೀತಿಯ ಸ್ವಯಂ ಘೋಷಿತ ಕಂಟೈನ್ಮೆಂಟ್‌ ಪ್ರದೇಶಗಳಂತಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿರುವ ನಿವಾಸಿಗಳು ನಾನಾ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಇವರಿಗೆ ಪಾಲಿಕೆ ಹಾಗೂ ಸ್ವಯಂಸೇವಕರ ನೆರವು ಅಗತ್ಯವಾಗಿದೆ.

ಮೂರು ಅಥವಾ ಐದಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾದ ಕೂಡಲೆ, ಅಪಾರ್ಟ್‌ಮೆಂಟ್‌ ಸಮುಚ್ಚಯಗಳತ್ತ ದೌಡಾಯಿಸುವ ಪಾಲಿಕೆ ಅಧಿಕಾರಿಗಳು, ಇಲ್ಲಿನ ಪೂರಕ ವಾತಾವರಣವನ್ನು ಗಮನಿಸಿ ಕಂಟೈನ್ಮೆಂಟ್‌ ಮಾಡುತ್ತಾರೆ. ಬಳಿಕ, ನಿವಾಸಿಗಳ ಜೀವನ ನಿರ್ವಹಣೆಯೇ ದುಸ್ಥರವಾಗಲಿದೆ.ಕೋವಿಡ್‌ ಪರೀಕ್ಷೆಗೊಳಪಟ್ಟವರನ್ನು ವರದಿ ಬರುವವರೆಗೆ ಸಾಂಸ್ಥಿಕ ಕ್ವಾರಂಟೈನ್‌ಗೆ ಸೂಚಿಸುತ್ತಾರೆ.

ಕೋವಿಡ್‌ ದೃಢಪಟ್ಟರೆ, ಹೋಂ ಐಸೋಲೇಷನ್‌ಗೆ ಒಳಪಡಿಸುತ್ತಾರೆ. ಇದರಿಂದ ಫ್ಲ್ಯಾಟ್‌ ನಿವಾಸಿಗಳು ಹೊರಗಡೆ ಓಡಾಟ ಹಾಗೂ ಅಗತ್ಯ
ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ತರಕಾರಿ, ಹಾಲು, ದಿನಸಿ ಸೇರಿದಂತೆಕೆಲವು ಅಗತ್ಯ ವಸ್ತುಗಳನ್ನು ಖರೀದಿಸಲಿಕ್ಕೂ ಸಮಸ್ಯೆಯಾಗುತ್ತಿದೆ. ಪಾಲಿಕೆಯಿಂದ ಅಗತ್ಯ ವಸ್ತುಗಳ ಪೂರೈಕೆ ಮಾಡುವುದೂ ವಿರಳವಾಗಿದೆ ಇದು ನಿವಾಸಿಗಳಿಗೆ ತಲೆನೋವಾಗಿದೆ.

ಇದನ್ನೂ ಓದಿ:ಭಾರತೀಯ ಬ್ಲೈಂಡ್ ಕ್ರಿಕೆಟ್ ಟೀಮ್ ನ ಆಟಗಾರ ಈಗ ದಿನಗೂಲಿ ಕಾರ್ಮಿಕ..!

Advertisement

ಮೊಬೈಲ್‌ ಟ್ರಯಾಜ್‌ಯೂನಿಟ್‌ ಅಗತ್ಯ: “ಕೋವಿಡ್‌ ಸೋಂಕು ದೃಢಪಟ್ಟರೆ ಫಿಸಿಕಲ್‌ ಟ್ರಯಾಜಿಂಗ್‌ ಕೇಂದ್ರಕ್ಕೆ ಬನ್ನಿ’ ಎಂದು ಪಾಲಿಕೆ
ಸೂಚಿಸಿದೆ. ಇದು ಸರಿಯಾದ ನಿರ್ಧಾರ. ಆದರೆ, ಮೊಬೈಲ್‌ ಟ್ರಯಾಜ್‌ ಯುನಿಟ್‌ ಕೊಡಬೇಕು. ಇಲ್ಲವಾದರೆ, ಸೋಂಕಿತರು ಆಸ್ಪತ್ರೆಗೆ ತೆರಳುವಾಗ ರಸ್ತೆಯುದ್ದಕ್ಕೂಸೋಂಕು ಹರಡುವ ಸಾಧ್ಯತೆಯಿದೆ.ಕ್ಯಾಬ್‌ ಬುಕ್‌ ಮಾಡಿದರೆ ಚಾಲಕನಿಗೆ ಸೋಂಕು ಹರಡುತ್ತದೆ. ಚಾಲಕ ಏನಾದರೂ ಸ್ಯಾನಿಟೈಸ್‌ ಮಾಡಿಸಲಿಲ್ಲವೆಂದಾದರೆ ಬೇರೆ ಪ್ರಯಾಣಿಕರಿಗೂ ಸೋಂಕು ತಗುಲುತ್ತದೆ. ಆಸ್ಪತ್ರೆಗೆ ಹೋದಾಗ ವೈದ್ಯರು ಅಥವಾ
ಸಿಬ್ಬಂದಿ ಜತೆಗೆ ಚರ್ಚಿಸುವಾಗ ಅವರ ಸುತ್ತ ಇರುವ ಜನರಿಗೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮೊಬೈಲ್‌
ಟ್ರಯಾಜ್‌ ಯೂನಿಟ್‌ ಅಗತ್ಯ ಇದೆ.

79 ಅಪಾರ್ಟ್‌ಮೆಂಟ್‌ಗಳಲ್ಲಿ ಕಂಟೈನ್ಮೆಂಟ್‌: ಕೋವಿಡ್‌ ಸೋಂಕು ಪ್ರಕರಣಗಳು500 ಆಸುಪಾಸಿನಲ್ಲಿ ವರದಿಯಾಗುತ್ತಿದ್ದು, ಈ ಪೈಕಿ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದೆ. ಪರಿಣಾಮ, ಅಪಾರ್ಟ್‌ಮೆಂಟ್‌ ನಿವಾಸಿಗಳು ಹಾಗೂ ಅಕ್ಕಪಕ್ಕದ ನಿವಾಸಿಗಳಲ್ಲಿ ಆತಂಕ ಮೂಡಿದೆ.

ಸಲಹೆಗಳು
– ಕೋವಿಡ್‌ ನಿಯಮ ಪಾಲನೆ ಕಡ್ಡಾಯ
– ಸೋಂಕು ಪತ್ತೆಯಾದ ಕೂಡಲೇ ಐಸೋಲೇಟ್‌ ಆಗಬೇಕು
– ಪ್ರಾಥಮಿಕ, ದ್ವಿತೀಯ ಸಂಪರ್ಕಿತರು ಹಾಗೂ ಅಕ್ಕಪಕ್ಕದ ನಿವಾಸಿಗಳಿಗೆ ಪರೀಕ್ಷೆ
– ಕಾರ್ಯಕ್ರಮ, ಸಮಾರಂಭದಲ್ಲಿ ಕೋವಿಡ್‌ ನಿಯಮ ಪಾಲನೆ
– ಜನ ದಟ್ಟಣೆ ಇಲ್ಲದೆ ಸಾಮಾಜಿಕ ಕಾರ್ಯಕ್ರಮ ಆಯೋಜನೆ
– ಸಾಮಾನ್ಯ ಜಾಗ, ಜಿಮ್‌ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮ

ಹೊರಗಡೆ ಬಂದವರಿಗೆ ಅಪಾರ್ಟ್‌ಮೆಂಟ್‌ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಬೇರೆಕಡೆ ಪ್ರಯಾಣ ಮಾಡಿ ಬಂದವರಿಗೆಕೋವಿಡ್‌ ಪರೀಕ್ಷೆಗೆ
ಸೂಚಿಸಲಾಗುತ್ತಿದೆ. ಬೇರೆಕಡೆ ಮನೆಖಾಲಿ ಮಾಡಿ ಬರುವವರಿಗೆ ಅವಕಾಶ ನಿರಾಕರಿಸಲಾಗುತ್ತಿದೆ.
– ಎನ್‌. ಕದರಪ್ಪ, ವಳಗೇರೆಹಳ್ಳಿ ನಿವಾಸಿಗಳ ಒಕ್ಕೂಟದ ಅಧ್ಯಕ್ಷ

ಕೋವಿಡ್‌ ನಿಯಮಗಳ ಪಾಲನೆ ಮೂಲಕ ಮೂಲದಲ್ಲಿಯೇ ಸೋಂಕು ನಿಯಂತ್ರಿಸಬೇಕು. ಸೋಂಕು ಪತ್ತೆಯಾದ ಕೂಡಲೇ ಐಸೋಲೇಟ್‌ ಆಗಬೇಕು. ಪ್ರಾಥಮಿಕ,ದ್ವಿತೀಯ ಸಂಪರ್ಕಿತರುಹಾಗೂಅಕ್ಕ-ಪಕ್ಕದಲ್ಲಿರುವವರು ಪರೀಕ್ಷೆಗೊಳಪಟ್ಟು ಐಸೋಲೇಟ್‌ ಆಗಬೇಕು.
– ಗೌರವ್‌ ಗುಪ್ತ, ಬಿಬಿಎಂಪಿ ಮುಖ್ಯ ಆಯುಕ್ತ

ಅಪಾರ್ಟ್‌ಮೆಂಟ್‌ ಸೇರಿ ನಿತ್ಯಏಳು ಸಾವಿರಕ್ಕಿಂತಲೂ ಹೆಚ್ಚುಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ವರದಿ ಬರುವವರೆಗೆ ಕ್ವಾರಂಟೈನ್‌ಗೆ ಸೂಚಿಸಲಾಗುತ್ತಿದೆ. ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಉಂಟಾದರೆ ತುರ್ತು ಚಿಕಿತ್ಸೆಗೆ ವೈದ್ಯರ ನಿಯೋಜನೆ ಮಾಡಲಾಗಿದೆ. ಜತೆಗೆ,ಅಗತ್ಯ
ವಸ್ತುಗಳನ್ನು ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.
– ಬಿ. ಶಿವಸ್ವಾಮಿ, ಜಂಟಿ ಆಯುಕ್ತ, ಪಶ್ಚಿಮ ವಲಯ

ಅಪಾರ್ಟ್‌ಮೆಂಟ್‌ನಲ್ಲಿ ಐದಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾದರೆ,ಕಂಟೈನ್ಮೆಂಟ್‌ ಮಾಡಲಾಗುತ್ತಿದೆ. ಬೇರೆಕಡೆ ಸೋಂಕು ಪತ್ತೆಯಾದರೆ ಅಂತಹ ಪ್ರದೇಶಗಳಿಗೆ ಅಗತ್ಯ ವಸ್ತು ಪೂರೈಸಲಾಗುತ್ತಿದೆ. ಅಪಾರ್ಟ್‌ಮೆಂಟ್‌ ವಾಸಿಗಳಿಗೆ ಅಗತ್ಯ ವಸ್ತು
ತಲುಪಿಸುವುದು ವಿರಳವಾಗಿದೆ.
– ಜಗದೀಶ್‌ ರೆಡ್ಡಿ, ವರ್ತೂರು ವಾರ್ಡ್‌ ಡಿಟೆರ್‌ ಕಮಿಟಿ(ಡಬ್ಲ್ಯೂಡಿಸಿ) ಸದಸ್ಯ

– ವಿಕಾಸ್‌ ಆರ್‌. ಪಿಟ್ಲಾಲಿ

Advertisement

Udayavani is now on Telegram. Click here to join our channel and stay updated with the latest news.

Next