Advertisement

ಅನುಷ್ಕಾರ ಮದುವೆ ಟ್ವೀಟ್‌ “ವರ್ಷದ ಗೋಲ್ಡನ್‌ ಟ್ವೀಟ್‌’

06:20 AM Dec 27, 2017 | Team Udayavani |

ಮುಂಬೈ: ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಮತ್ತು ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರ ಮದುವೆ ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದ ವಿಷಯ. ಅಷ್ಟೇ ಅಲ್ಲ, ಅನುಷ್ಕಾ ತಮ್ಮ ಮದುವೆಯನ್ನು ಅಧಿಕೃತವಾಗಿ ಟ್ವಿಟರ್‌ ಮೂಲಕ ಘೋಷಿಸಿದ್ದರು. ಈ ಟ್ವೀಟ್‌ ಈಗ “ವರ್ಷದ ಗೋಲ್ಡನ್‌ ಟ್ವೀಟ್‌’ ಎನಿಸಿಕೊಂಡಿದೆ. ಟ್ವಿಟರೇ ಹೇಳಿರುವಂತೆ, ಅನುಷ್ಕಾರ ಈ ಟ್ವೀಟ್‌ ಅತಿ ಹೆಚ್ಚು ಬಾರಿ ಮರುಟ್ವೀಟ್‌ ಆಗಿದೆ. ಹೀಗಾಗಿ, ಇದನ್ನು ವರ್ಷದ ಗೋಲ್ಡನ್‌ ಟ್ವೀಟ್‌ ಎಂದು ಪರಿಗಣಿಸಲಾಗಿದೆ. ಇದನ್ನು ಅನುಷ್ಕಾ ಅವರು ತಮ್ಮ ಮದುವೆಯಾದ ದಿನವೇ ವಿವಾಹದ ಫೋಟೋದೊಂದಿಗೆ ಟ್ವೀಟಿಸಿದ್ದರು. ಇದೇ ವೇಳೆ, ನಟರಾದ ಶಾರುಖ್‌ಖಾನ್‌ ಹಾಗೂ ಸಲ್ಮಾನ್‌ ಖಾನ್‌ ಅವರು ಪ್ರಸಕ್ತ ವರ್ಷ ಟ್ವಿಟರ್‌ನಲ್ಲಿ ಹೆಚ್ಚು ಚರ್ಚೆಗೊಳಗಾದ ಸೆಲೆಬ್ರಿಟಿಗಳು ಎಂದಿದೆ ಟ್ವಿಟರ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next