Advertisement

ಕೊಹ್ಲಿ, ಅನುಷ್ಕಾ ಮಧುಚಂದ್ರ ಫೋಟೋ ವೈರಲ್‌

07:40 AM Dec 16, 2017 | Team Udayavani |

ನವದೆಹಲಿ: ಪ್ರೇಮಿಗಳಾಗಿದ್ದ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಡಿ.11 ರಂದು ಇಟಲಿಯಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಇದೀಗ ಇವರು ಇನ್‌ಸ್ಟಾಗ್ರಾಮ್‌ನಲ್ಲಿ ಮಧುಚಂದ್ರದ ಫೋಟೋ ಅಪ್‌ಲೋಡ್‌ ಮಾಡಿದ್ದು, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

Advertisement

ಶುಕ್ರವಾರ ಫೋಟೋ ಅಪ್‌ಲೋಡ್‌ ಮಾಡಿದ ಕೆಲವೇ ಗಂಟೆಯಲ್ಲಿ 5 ಲಕ್ಷಕ್ಕೂ ಅಧಿಕ ಲೈಕ್‌ಗಳು ಬಂದಿವೆ. ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕ್ರಿಕೆಟಿಗರು, ಸ್ನೇಹಿತರು ಮತ್ತು ಕುಟುಂಬದವರಿಗಾಗಿ ದೆಹಲಿಯಲ್ಲಿ ಡಿ.21 ರಂದು ಮತ್ತು ಮುಂಬೈನಲ್ಲಿ ಡಿ.26 ರಂದು ಆರತಕ್ಷತೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next