Advertisement

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

01:20 PM May 01, 2024 | Team Udayavani |

ದೆಹಲಿ: ಹಿಂದಿ ಕಿರುತೆರೆಯ ಖ್ಯಾತ ನಟಿ ರೂಪಾಲಿ ಗಂಗೂಲಿ ಅವರು ಬುಧವಾರ(ಮೇ.1 ರಂದು) ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

Advertisement

ಬುಧವಾರ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಪಕ್ಷದ ಮುಖಂಡರಾದ ವಿನೋದ್ ತಾವ್ಡೆ ಮತ್ತು ಅನಿಲ್ ಬಲುನಿ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡರು.

‘ಸಾರಾಭಾಯಿ ಸಾರಾಭಾಯಿ’,ʼಅನುಪಮಾʼ ಧಾರಾವಾಹಿಯ ಮೂಲಕ ಹಿಂದಿ ಕಿರುತೆರೆಯಲ್ಲಿ ಖ್ಯಾತಿಯನ್ನು ಗಳಿಸಿರುವ ಅವರು ಕೆಲ ಸಮಯದ ಹಿಂದೆ ಮೋದಿ ಅವರನ್ನು ಭೇಟಿ ಆಗಿರುವ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಅಭಿವೃದ್ಧಿಯ ಈ ‘ಮಹಾಯಜ್ಞ’ವನ್ನು ನೋಡಿದಾಗ ನನಗೂ ಇದರಲ್ಲಿ ಪಾಲ್ಗೊಳ್ಳಬೇಕು ಅನ್ನಿಸುತ್ತದೆ. ನಾನು ಏನೇ ಮಾಡಿದರೂ ಸರಿ, ಒಳ್ಳೆಯದನ್ನು ಮಾಡುವಂತೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಬೆಂಬಲ ಬೇಕು” ಎಂದು ರೂಪಾಲಿ ಹೇಳಿದ್ದಾರೆ.

ಇದೇ ವರ್ಷ ನಟಿ ಕಂಗನಾ ರಣಾವತ್, 6 ಬಾರಿ ಮಧ್ಯಪ್ರದೇಶದ ಶಾಸಕ ರಾಮ್​ನಿವಾಸ್ ರಾವತ್ ಮತ್ತು ಪ್ರಿಯಾಂಕಾ ಗಾಂಧಿ ಅವರ ಆಪ್ತ ಸಹಾಯಕ ತಜೀಂದರ್ ಬಿಟ್ಟು  ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next