Advertisement

ನಿನ್ನ ಡೆಡಿಕೇಶನ್‌…ನಿರೂಪ್ ಗಾಯದ ಪೋಟೋ ಹಂಚಿಕೊಂಡು ಬರ್ತ್‌ ಡೇ ವಿಶ್‌ ಮಾಡಿದ ಅನೂಪ್‌!

04:09 PM Aug 13, 2022 | Team Udayavani |

ಬೆಂಗಳೂರು: ಸ್ಯಾಂಡಲ್‌ ವುಡ್‌ ನಟ ನಿರೂಪ್‌ ಭಂಡಾರಿ ಅವರಿಗಿಂದು 38ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ʼವಿಕ್ರಾಂತ್‌ ರೋಣʼ ಯಶಸ್ಸಿನ ಖುಷಿಯಲ್ಲಿ ನಿರೂಪ್‌ ಇದ್ದಾರೆ.

Advertisement

ಹುಟ್ಟುಹಬ್ಬಕ್ಕೆ ನೂರಾರು ಅಭಿಮಾನಿಗಳು ಶುಭಾಶಯವನ್ನು ಕೋರುತ್ತಿದ್ದಾರೆ. ಸೆಲೆಬ್ರಿಟಿಗಳು ಬರ್ತ್ ಡೇ ವಿಶ್‌ ಮಾಡಿ ಶುಭ ಹಾರೈಸಿದ್ದಾರೆ. ನಿರೂಪ್‌ ಭಂಡಾರಿ ಅವರ ಅಣ್ಣ ನಿರ್ದೇಶಕ ಅನೂಪ್‌ ಭಂಡಾರಿ ತಮ್ಮನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ವಿಶ್‌ ಮಾಡಿದ್ದಾರೆ.

ʼರಂಗಿತರಂಗʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಿರೂಪ್‌ ಇದುವರೆಗೆ ʼರಾಜರಥ, ʼಆದಿಲಕ್ಷ್ಮಿ ಪುರಾಣʼ, ʼವಿಂಡೋ ಸೀಟ್‌ ಹಾಗೂ ಇತ್ತೀಚೆಗೆ ತೆರೆಕಂಡ ʼವಿಕ್ರಾಂತ್‌ ರೋಣʼದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ವಿವಾದದ ಹೇಳಿಕೆಯೇ ʼಲಾಲ್‌ ಸಿಂಗ್‌ ಚಡ್ಡಾʼ ಕ್ಕೆ ಮುಳುವಾಯಿತೇ? : ಟ್ರೋಲ್‌ ಆದ್ರು ಬೇಬೋ

ನಿರೂಪ್ ಪಾತ್ರಕ್ಕಾಗಿ ಎಷ್ಟು ತಯಾರಿ ನಡೆಸುತ್ತಾರೆ. ನಿಷ್ಠೆಯಿಂದ ಪಾತ್ರವನ್ನು ನಿಭಾಯಿಸುತ್ತಾರೆ ಎಂಬುವುದನ್ನು ಅನೂಪ್‌ ಭಂಡಾರಿ ಕೆಲವೊಂದು ಫೋಟೋಗಳನ್ನು ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.

Advertisement

ʼರಂಗಿತರಂಗʼ ಶೂಟಿಂಗ್‌ ಸಂದರ್ಭದಲ್ಲಿ ಬಹುತೇಕ ಬುರುಡೆ ಬಿರುಕು ಬಿಟ್ಟಿತ್ತು. ʼರಾಜರಥʼದಲ್ಲಿ ಕೈ ಮುರಿದಿದ್ದು, ʼವಿಕ್ರಾಂತ್‌ ರೋಣʼ ಸಂದರ್ಭದಲ್ಲಿ ಅನೇಕ ಗಾಯಗಳಾಗಿತ್ತು. ಇಷ್ಟೆಲ್ಲಾ ಆದರೂ ಸಿನಿಮಾಕ್ಕಾಗಿ ಎಲ್ಲವನ್ನೂ ಅರ್ಪಿಸುತ್ತಾನೆ. ಈ  ಡೆಡಿಕೇಶನ್‌ ನಿನ್ನನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲಿʼ ಎಂದು ಹೇಳಿ ಹುಟ್ಟು ಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಒಟ್ಟು 5 ಸಿನಿಮಾಗಳಲ್ಲಿ ನಿರೂಪ್‌ ನಟಿಸಿದ್ದಾರೆ. ಇತ್ತೀಚಿಗೆ ತೆರೆಕಂಡ ʼವಿಕ್ರಾಂತ್ ರೋಣʼದಲ್ಲಿನ ಅವರ ಪಾತ್ರಕ್ಕೆ ಶಹಬ್ಬಾಸ್‌ ಗಿರಿ ವ್ಯಕ್ತವಾಗಿತ್ತು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next