Advertisement

ತುಳುನಾಡ ಸುತ್ತ ಅನುಕ್ತ

06:00 AM Nov 23, 2018 | Team Udayavani |

“ಕನ್ನಡದಲ್ಲೂ ಹೊಸ ರೀತಿಯ ಚಿತ್ರಗಳು, ಹೊಸತನವಿರುವ ತಂತ್ರಜ್ಞರು ಆಗಮಿಸುತ್ತಿರುವುದು ಒಳ್ಳೆಯ ಬೆಳವಣಿಗೆ…’
– ಹೀಗೆ ಹೇಳಿದ್ದು ನಟ ದರ್ಶನ್‌. ಸಂದರ್ಭ. “ಅನುಕ್ತ’ ಚಿತ್ರದ ಆಡಿಯೋ ಸಿಡಿ ಬಿಡುಗಡೆ. ದರ್ಶನ್‌ ಈಗಲ್ಲ, ಮೊದಲಿನಿಂದಲೂ ಹೊಸಬರ ಚಿತ್ರಗಳನ್ನು ಪ್ರೋತ್ಸಾಹಿಸಿಕೊಂಡು ಬಂದವರು. ಅಷ್ಟೇ ಅಲ್ಲ, ಒಳ್ಳೆಯ ತಂಡಕ್ಕೆ ಬೆನ್ನುತಟ್ಟಿದವರು. “ಅನುಕ್ತ’ ಚಿತ್ರತಂಡಕ್ಕೆ ಶುಭಹಾರೈಸುವ ಸಲುವಾಗಿ, ದರ್ಶನ್‌ ಆಗಮಿಸಿ, ಪಿಆರ್‌ಕೆ ಸಂಸ್ಥೆ ಹೊರತಂದ ಹಾಡುಗಳನ್ನು ಬಿಡುಗಡೆ ಮಾಡಿದರು. ದರ್ಶನ್‌ ವೇದಿಕೆಗೆ ಆಗಮಿಸುತ್ತಿದ್ದಂತೆ, ಮಂಗಳೂರಿನ ಹುಲಿ ನೃತ್ಯ ತಂಡ, ಹುಲಿ ಡ್ಯಾನ್ಸ್‌ ಮಾಡುವ ಮೂಲಕ ದರ್ಶನ್‌ ಅವರನ್ನು ಸ್ವಾಗತಿಸಿತು. ನಂತರ ಮೈಕ್‌ ಹಿಡಿದು ಮಾತಿಗಿಳಿದ ದರ್ಶನ್‌, “ಅನುಕ್ತ’ ಒಂದೊಳ್ಳೆಯ ಶೀರ್ಷಿಕೆ. ಚಿತ್ರದ ಪ್ರೋಮೋ ನೋಡಿದರೆ, ಚಿತ್ರ ವಿಭಿನ್ನವಾಗಿದೆ ಎನಿಸುತ್ತದೆ. ಚಿತ್ರದ ತುಣುಕು ನೋಡಿದರೆ ಸಾಕು ಇಡೀ ಚಿತ್ರ ಹೇಗೆ ಮೂಡಿಬಂದಿದೆ ಅನ್ನೋದು ಗೊತ್ತಾಗುತ್ತೆ. ನಮ್ಮಲ್ಲೂ ಹೊಸ ತಂತ್ರಜ್ಞರು ಬರುತ್ತಿದ್ದಾರೆ ಎಂಬುದು ಉತ್ತಮ ಬೆಳವಣಿಗೆ. ಉತ್ತಮ ಕಥೆ ಬಯಸುವವರು ತಮಿಳು ಸಿನಿಮಾ ನೋಡ್ತಾರೆ, ಹಾಡು ಮತ್ತು ಫೈಟ್‌ ಇಷ್ಟಪಡೋರು ತೆಲುಗು ಚಿತ್ರ ನೋಡ್ತಾರೆ. ವಿದೇಶ ತಾಣ ನೋಡ ಬಯಸೋರು ಹಿಂದಿ ಸಿನಿಮಾಗೆ ಹೋಗುತ್ತಾರೆ. ಆದರೆ, ಈಗಿನ ಟ್ರೆಂಡ್‌ಗೆ ತಕ್ಕಂತೆ ಕನ್ನಡ ಚಿತ್ರ ಇದೆ ಅಂತ ನೋಡಲು ಹೋಗುತ್ತಾರೆ. ಆದರೆ, ಈಗಂತೂ, ಪರಭಾಷಿಗರೂ ಸಹ ನಮ್ಮ ಕಡೆ ತಿರುಗಿ ನೋಡುವಂತಹ ಚಿತ್ರಗಳು ಇಲ್ಲಿ ತಯಾರಾಗುತ್ತಿವೆ. ಈ ಚಿತ್ರತಂಡಕ್ಕೆ ಒಳ್ಳೆಯದಾಗಲಿ, ನಿರ್ಮಾಪಕರಿಗೆ ಗೆಲುವು ಸಿಗಲಿ ಅಂದರು’ ದರ್ಶನ್‌.

Advertisement

ಅನುಪ್ರಭಾಕರ್‌ ಈ ಚಿತ್ರದ ಹೈಲೈಟ್‌. ಅವರಿಗೆ ಸಿನಿಮಾ ಮೇಲೆ ಇನ್ನಿಲ್ಲದ ನಿರೀಕ್ಷೆ ಇದೆ. ಅವರಿಗೆ ಒಳ್ಳೆಯ ಕಥೆ, ಪಾತ್ರವಷ್ಟೇ ಅಲ್ಲ, ಒಳ್ಳೆಯ ತಂಡ ಸಿಕ್ಕಿದ್ದು ಖುಷಿಯಂತೆ. ಈ ಚಿತ್ರ ಎಲ್ಲರಿಗೂ ಗೆಲುವು ಕೊಡಲಿದೆ ಎಂಬುದು ಅನುಪ್ರಭಾಕರ್‌ ಮಾತು.

ಚಿತ್ರದ ನಾಯಕ ಕಾರ್ತಿಕ್‌ ಅತ್ತಾವರ್‌ ಕಥೆ ಬರೆದಿದ್ದಾರೆ. ಆ ಕಥೆ ಕೇಳಿದ ಸಂಪತ್‌ರಾಜ್‌ಗೆ ತುಂಬಾನೇ ವಿಶೇಷವಿದೆ ಎನಿಸಿತಂತೆ. ಕಥೆಯಲ್ಲಿ ಸಾಕಷ್ಟು ವಿಭಿನ್ನತೆ ಇದೆ. ಎಲ್ಲವನ್ನೂ ತೆರೆಯ ಮೇಲೆ ಹೇಗೆ ತರುತ್ತಾರೆ ಎಂಬ ಪ್ರಶ್ನೆ ಇತ್ತು. ನಿರ್ದೇಶಕರು ಅದ್ಭುತವಾಗಿ ಎಲ್ಲವನ್ನೂ ತಂದಿದ್ದಾರೆ. ತುಂಬಾನೇ ಒಳ್ಳೆಯ ತಂಡ ಆಗಿದ್ದರಿಂದ ಒಳ್ಳೇ ಚಿತ್ರ ಮೂಡಿಬಂದಿದೆ ಎಂದರು ಸಂಪತ್‌ರಾಜ್‌. ನಿರ್ಮಾಪಕ ಹರೀಶ್‌ಬಂಗೇರ ಅವರಿಗೆ ಒಳ್ಳೆಯ ಚಿತ್ರ ಮಾಡಿರುವ ತೃಪ್ತಿ ಇದೆಯಂತೆ. ನಿರ್ದೇಶಕ ಅಶ್ವತ್ಥ್ ಸ್ಯಾಮ್ಯುಯೆಲ್‌ ಅವರಿಗೆ ಎಲ್ಲರ ಸಹಕಾರದಿಂದ ಮೆಚ್ಚುವಂತಹ ಸಿನಿಮಾ ಮಾಡಿರುವ ಖುಷಿ ಇದೆಯಂತೆ. ನೊಬಿನ್‌ಪಾಲ್‌ ಸಂಗೀತ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next