Advertisement
ಹೊಸ ವರ್ಷಕ್ಕೆ ಕಾಲಿಡುವ ಹೊತ್ತಿನಲ್ಲಿ ನಮಗೆ ಮುಂದೆ ಬರಲಿರುವ ವರ್ಷದ್ದೇ ಯೋಚನೆ. ಮನೆಗೆ ಹೊಸದಾಗಿ ಯಾವ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದು, ಪ್ರವಾಸದ ಪ್ಲಾನಿಂಗು, ಯಾವ ಏರಿಯಾಗೆ ಮನೆ ಶಿಫುr ಮಾಡೋದು, ಈ ಬಾರಿ ಮಕ್ಕಳ ಹುಟ್ಟಿದಹಬ್ಬಕ್ಕೆ ಏನು ಉಡುಗೊರೆ ಕೊಡೋದು, ಹೀಗೆ ಹೊಚ್ಚ ಹೊಸ ಸಂಗತಿಗಳಲ್ಲೇ ನಮ್ಮ ಮನಸ್ಸು ಕಳೆದು ಹೋಗುವುದು. ಅದು ಸಹಜ ಕೂಡಾ. ಹಾಗೆ ನೋಡಿದರೆ ಹೊಸ ವರ್ಷ ಎನ್ನುವುದು ಪ್ರತಿಯೊಬ್ಬರಿಗೂ ಒಂದು ಮೈಲಿಗಲ್ಲು ಇದ್ದಂತೆ. ಹೊಸ ನಿವೇದನೆಗಳನ್ನು ಮಾಡಿಕೊಳ್ಳಲು, ಹೊಸ ಗುರಿಗಳನ್ನು ಹಾಕಿಕೊಳ್ಳಲು ಹೊಸ ವರ್ಷ ಅನ್ನೋದು ಬಹುತೇಕರಿಗೆ ಡೆಡ್‌ಲೈನ್. ಆದರೆ ಹೊಸತರ ಜೊತೆ ಜೊತೆಗೇ ನಾವು ಹಳತನ್ನೂ ನಮ್ಮ ಜೊತೆ ಕೊಂಡೊಯ್ಯುತ್ತಿದ್ದೇವೆ ಎನ್ನುವುದನ್ನು ಈ ಕ್ಷಣದಲ್ಲಿ ಮರೆಯುತ್ತಿದ್ದೇವೆ ಎಂದೆನಿಸುತ್ತಿದೆ.
Related Articles
ಫ್ರೆàಜರ್ ಟೌನ್‌ಗೆ ಸಮೀಪವಿರುವ ರಿಚರ್ಡ್ಸ್ ಟೌನ್‌ನಲ್ಲಿ ಅಪಾಲಜಿ ಗ್ಯಾಲರಿ ಇದೆ. ವ್ಯಂಗ್ಯ ಚಿತ್ರಕಾರ- ಕಲಾವಿದ ಪೌಲ್ ಫೆರ್ನಾಂಡಿಸ್ ಮಾಲಕತ್ವದ ಮಳಿಗೆ ಇದು. 60- 70ರ ದಶಕದಲ್ಲಿ ಬೆಂಗಳೂರು ಹೇಗಿತ್ತು ಎಂಬುದನ್ನು ವಿವರಿಸುವ ಅಪರೂಪದ ಕಲಾಕೃತಿಗಳು, ವ್ಯಂಗ್ಯಚಿತ್ರಗಳು ಇಲ್ಲಿವೆ. ಶಿವಾಜಿನಗರ, ಎಂ.ಜಿ. ರಸ್ತೆ ಹಾಗೂ 7 ಏರ್‌ಲೈನ್ಸ್ ಹೋಟೆಲಿನ ಪ್ರದೇಶ 70ರ ದಶಕದಲ್ಲಿ ಹೇಗಿತ್ತು ಎಂಬುದನ್ನು ಇಲ್ಲಿರುವ ಕಲಾಕೃತಿಗಳು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತವೆ. ಇಷ್ಟಲ್ಲದೆ ಹೆಂಗಸರು, ಮಕ್ಕಳು ಬಳಸುವ ಬ್ಯಾಗ್‌ಗಳು, ಮನೆಯನ್ನು ಚೆಂದಗಾಣಿಸುವ, ಮನಸ್ಸಿಗೆ ಖುಷಿ ಕೊಡುವ ವಸ್ತುಗಳು ಇಲ್ಲಿ ಲಭ್ಯ. ಖರೀದಿಸದೇ ಹೋದರೂ ಇಲ್ಲಿನ ವಸ್ತುವೈವಿಧ್ಯವನ್ನು ಕಣ್ತುಂಬಿಕೊಳ್ಳಲು ಈ ಮಳಿಗೆಗೆ ಭೇಟಿ ಕೊಡಬಹುದು.
Advertisement
ಎಲ್ಲಿ?: ನಂ.5, ಕ್ಲಾರ್ಕ್ ರಸ್ತೆ, ರಿಚರ್ಡ್ಸ್ ಟೌನ್
ಬಾಲಾಜಿ ಆ್ಯಂಟಿಕ್ಸ್ ಬೆಂಗಳೂರಿನ ಪುರಾತನ ಆ್ಯಂಟಿಕ್ ಮಾರಾಟ ಮಳಿಗೆಯೆಂದರೆ ಬಾಲಾಜಿ ಆ್ಯಂಟಿಕ್ಸ್. 1924ರಲ್ಲಿ, ಅಂದರೆ 83 ವರ್ಷಗಳ ಹಿಂದೆಯೇ ಆರಂಭವಾದ ಮಳಿಗೆ ಎಂಬ ಹೆಗ್ಗಳಿಕೆ ಇದಕ್ಕಿದೆ. ಆರಂಭದ ದಿನಗಳಲ್ಲಿ ಗ್ರಾಮೋಪೋನ್ ಹಾಗೂ ವರ್ಣಚಿತ್ರಗಳನ್ನು ಮಾತ್ರವೇ ಇಲ್ಲಿ ಮಾರಲಾಗುತ್ತಿತ್ತು. ಹಳೆಯ ಕಾಲದ ಕಡಗಗಳು, ಟೈಪ್‌ರೈಟಿಂಗ್ ಮಶೀನುಗಳು, ಕಪ್ಪು ಬಿಳುಪು ಸಿನಿಮಾಗಳ ಪೋಸ್ಟರ್‌ಗಳು ಸೇರಿದಂತೆ ಹಳೆಯ, ಸುಸ್ಥಿತಿಯಲ್ಲಿರುವ ವಸ್ತುಗಳು ಇಲ್ಲಿ ಸಿಗುತ್ತವೆ.
ಎಲ್ಲಿ?: ನಂ.64 ಬಾಲಾಜಿ ಸಿಲ್ಕ್ ಕಾಂಪ್ಲೆಕ್ಸ್, ಅವೆನ್ಯೂ ರಸ್ತೆ, ರೇಮಂಡ್ಸ್ ಶೋರೂಂ ಎದುರು ತರಂಗ್ ಆರ್ಟ್ಸ್
ಶಾಪಿಂಗ್ ಅಂದ ತಕ್ಷಣ ಜಯನಗರದ ಹೆಸರು ನೆನಪಾಗಲೇಬೇಕು. ಒಂದು ರೂಪಾಯಿಯಿಂದ ಒಂದು ಕೋಟಿ ರೂಪಾಯಿವರೆಗಿನ ಬೆಲೆಯ ವಸ್ತುಗಳು ಇಲ್ಲಿ ಲಭ್ಯ. ಈ ಏರಿಯಾದಲ್ಲೇ ಇದೆ ತರಂಗ್ ಆರ್ಟ್ಸ್ ಮಳಿಗೆ. ಹಿತ್ತಾಳೆ ಕಂಚಿನ, ಬಂಗಾರ ಲೇಪನದ, ದೇವರ ಮೂರ್ತಿಗಳು, ತಂಜಾವೂರ್ ಶೈಲಿಯ ಕಲಾಕೃತಿಗಳು. ಇಲ್ಲಿ ಸಿಗೋ ವಸ್ತುಗಳಲ್ಲಿ ಬಹುತೇಕವು ಗ್ರಾಮೀಣ ಬಾಗದ ಕುಶಲಕರ್ಮಿಗಳು ತಯಾರಿಸಿದವಾಗಿವೆ.
ಎಲ್ಲಿ?: 11ನೇ ಮುಕ್ಯರಸ್ತೆ, ಜಯನಗರ 4ನೇ ಬ್ಲಾಕ್ ಗ್ರಾಫಿಕರಿ
ಬಗೆಬಗೆಯ ವಿನ್ಯಾಸ, ಹತ್ತಾರು ಕಲರ್‌ಗಳ ಕೀ ಚೈನ್‌ಗಳು, ಗೋಡೆಯ ಚೆಂದ ಹೆಚ್ಚಿಸುವ ಕಲಾಕೃತಿಗಳು, ಕನx- ಹಿಂದಿ- ತೆಲುಗಿನ ಹಳೆಯ ಸಿನಿಮಾ ಪೋಸ್ಟರ್‌ಗಳು, ಬೆಡ್‌ರೂಮಿನ ಅಂದ ಹೆಚ್ಚಿಸುವ ಗೃಹಾಲಂಕಾರ ವಸ್ತುಗಳು ಬೇಕೆಂದರೆ ಗ್ರಾಫಿಕರಿ ಅಂಗಡಿಗೆ ಬನ್ನಿ.
ಎಲ್ಲಿ?: ಗ್ರಾಫಿಕರಿ, ನಂ.1, ಶ್ರದ್ದಾ ಕಾಂಪ್ಲೆಕ್ಸ್, 4ನೇ ಕ್ರಾಸ್, ಕಗ್ಗದಾಸಪುರ ಲೆವಿಟೇಟ್
ಹಾಲ್‌ನಲ್ಲಿರುವ ಟೇಬಲ್ ಮೇಲೆ, ಶೋಕೇಸಿನೊಳಗೆ ಥರಹೇವಾರಿ ಗೊಂಬೆಗಳ ಕಲಾಕೃತಿಗಳಿದ್ದರೆ ಮನೆಯ ಸೌಂದರ್ಯ ದುಪ್ಪಟ್ಟಾಗುವುದು ಗ್ಯಾರೆಂಟಿ. ಇವುಗಳ ಜೊತೆಗೇ ಕೈಗೆಟುಕುವ ದರದಲ್ಲಿ ಪುರಾತನ ಮಾದರಿಯ ಓಲೆ, ಜುಮುಕಿಗಳು, ಬಗೆ ಬಗೆಯ ಸರಗಳು, ಚಿತ್ರಗಳಿಂದ ಕೂಡಿದ ಮಣ್ಣಿನ ಕಲಾಕೃತಿಗಳು ಈ ಮಳಿಗೆಯ ವಿಶೇಷ. ಇದರ ಜೊತೆಗೆ ರಾಜಸ್ತಾನಿ ಕುಸುರಿ ಕೆಲಸವುಳ್ಳ ಬ್ಯಾಗ್‌ಗಳು, ಮಗ್‌ಗಳು ಸೇರಿದಂತೆ ಮನೂರೆಂಟು ವಸ್ತುಗಲಿಗೆ ಲೆವಿಟೇಟ್ ಮಳಿಗೆ ತವರುಮನೆ.
ಎಲ್ಲಿ?: ನಂ.777/1, 100 ಅಡಿ ರಸ್ತೆ, ಇಂದಿರಾನಗರ